Jarkiholi CD Scandal: ಅರ್ಜಿ ವಿಚಾರಣೆ ಮುಂದಕ್ಕೆ,  SIT ಅಂತಿಮ ವರದಿ ಸಲ್ಲಿಕೆ ಡೇಟ್ ಫಿಕ್ಸ್!

By Suvarna NewsFirst Published Nov 29, 2021, 7:05 PM IST
Highlights

* ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ
* ವಿಚಾರಣೆ ಮುಂದಕ್ಕೆ ಹಾಕಿದ ನ್ಯಾಯಾಲಯ
* ನವೆಂಬರ್  30  ರಂದು ಸ್ಪಷ್ಟ ನಿರ್ದೇಶನ?
* ಎಸ್‌ಐಟಿಯೂ ಅಂತಿಮ ವರದಿ ಸಲ್ಲಿಸಲಿದೆ 

ಬೆಂಗಳೂರು, (ನ.29)  ರಮೇಶ್ ಜಾರಕಿಹೊಳಿ (Ramesh Jarkiholi) ಸಿಡಿ (Sex Scandal) ಪ್ರಕರಣ ತನಿಖೆ ಪ್ರಶ್ನಿಸಿ ಹೈಕೋರ್ಟ್ ಗೆ (Karnataka Highcourt) ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮುಂದಕ್ಕೆ ಹಾಕಲಾಗಿದೆ.

ತನಿಖೆ ಪ್ರಶ್ನಿಸಿದ್ದ ಯುವತಿ ಅರ್ಜಿ ಸೇರಿ ಎಲ್ಲಾ ಅರ್ಜಿಗಳ ವಿಚಾರಣೆ ಮುಂದೂಡಿಕೆ ಮಾಡಲಾಗಿದೆ. ಮುಖ್ಯ ನ್ಯಾಯಮೂರ್ತಿ ರಜೆಯಲ್ಲಿರುವ ಕಾರಣ ವಿಚಾರಣೆ ಮುಂದಕ್ಕೆ ಹೋಗಿದ್ದು  ನ. 30  ರಂದು ವಿಚಾರಣೆ ನಡೆಯಲಿದೆ. ಇನ್ನು ಎಸ್‌ಐಟಿ ಸಹ ತನ್ನ ಅಂತಿಮ ವರದಿಯನ್ನು ಮಂಗಳವಾರ  ಹೈಕೋರ್ಟ್ ಗೆ ಸಲ್ಲಿಸಲಿದೆ. 

ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಮಾಜಿ ಸಚಿವ, ಬಿಜೆಪಿ(BJP) ಶಾಸಕ ರಮೇಶ್ ಜಾರಕಿಹೊಳಿ  ರಾಸಲೀಲೆ ಸಿಡಿ ಪ್ರಕರಣ (Sex CD Case) ಈಗ ಮತ್ತೆ ಸದ್ದು ಮಾಡುತ್ತಿದೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣವನ್ನು (Ramesh Jarkiholi Scandal CD Case) ಗಂಭಿರವಾಗಿ ಪರಿಗಣಿಸದ ಪೊಲೀಸ್ ಅಧಿಕಾರಿಗಳಿಗೆ ಸಂಕಷ್ಟ ಎದುರಾಗಿತ್ತು.

ಜಾರಕಿಹೊಳಿ ಸಿಡಿ ಕೇಸ್‌ ಮಾಜಿ ಸಚಿವರಿಗೆ ಕೊಂಚ ರಿಲೀಫ್

ಸಾಮಾಜಿಕ ಕಾರ್ಯಕರ್ತರ ದಿನೇಶ್ ಕಲ್ಲಳ್ಳಿ ನೀಡಿದ್ದ ದೂರು ಗಂಭಿರವಾಗಿ ಪರಿಗಣಿಸದ ಪೊಲೀಸ್ ಕಮಿಷನರ್ ಕಮಲ್ ಪಂಥ್ , ಡಿಸಿಪಿ ಅನುಚೇತ್ ಹಾಗು ಕಬ್ಬನ್ ಪಾರ್ಕ್ ಇನ್ಸ್ ಪೆಕ್ಟರ್ ಮಾರುತಿ ವಿರುದ್ಧ ತನಿಖೆಗೆ ಕೋರ್ಟ್ ಆದೇಶ ನೀಡಿತ್ತು.

ರಮೇಶ ಜಾರಕಿಹೊಳಿ ಅತ್ಯಾಚಾರ ಎಸಗಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಎಫ್ ಐ ಆರ್ ದಾಖಲಿಸದೆ ಪೊಲೀಸರಿಂದ ನಿರ್ಭಯ ಗೈಡ್ ಲೈನ್ಸ್ ಉಲ್ಲಂಘನೆ ಮಾಡಿದ್ದರು ಎನ್ನುವ ಆರೋಪ ಇತ್ತು.

ರಮೇಶ್ ಜಾರಕಿಹೊಳಿ ಯುವತಿಯೊಂದಿಗೆ ರಾಸಲೀಲೆಯಲ್ಲಿ ತೊಡಗಿದ್ದಾರೆ ಎನ್ನುವ ದೃಶ್ಯಗಳು ವೈರಲ್ ಆಗಿದ್ದವು. ಸಚಿವರಾಗಿದ್ದ ರಮೇಶ್ ರಾಜೀನಾಮೆ ನೀಡಿದ್ದರು. ಇದಾದ ಮೇಲೆ ಯುವತಿಯೂ ಹೇಳಿಕೆ ನೀಡಿದ್ದರು. ಎಸ್‌ಐಟಿ ಅಂಗಳದಲ್ಲಿ ತನಿಖೆ ಇದ್ದು ಒಂದು ಕಡೆ ಅರ್ಜಿಗಳ ವಿಚಾರಣೆ ಇನ್ನೊಂದು ಕಡೆ ಎಸ್‌ಐಟಿ ಅಂತಿಮ ವರದಿ ಏನಾಗಲಿದೆ ಎನ್ನುವುದನ್ನು ಕಾದು ನೋಡಬೇಕು.

ಒಂದು ವೇಳೆ  ಈ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿಗೆ ಕ್ಲೀನ್ ಚಿಟ್ ಸಿಕ್ಕರೆ ಅವರ ರಾಜಕೀಯ ಜೀವನದ ಮತ್ತೊಂದು ಇನಿಂಗ್ಸ್ ಆರಂಭವಾಗಲಿದೆ. ವಿಧಾನಪರಿಷತ್ ಅಖಾಡ ರಂಗೇರಿದ್ದು ಸಹೋದರ ಲಖನ್ ಅವರನ್ನು ಪಕ್ಷೇತರರನ್ನಾಗಿ ಕಣಕ್ಕೆ ಇಳಿಸಿದ್ದಾರೆ.

ದೋಸ್ತಿ ಸರ್ಕಾರ ಕೆಡವಿದ್ದ ಸಾಹುಕಾರ್;  ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬಾರದ ಸಂದರ್ಭ ಜೆಡಿಎಸ್ ಮತ್ತು ಕಾಂಗ್ರೆಸ್ ಸೇರಿ ಸಮ್ಮಿಶ್ರ ಸರ್ಕಾರ ಸ್ಥಾಪನೆ ಮಾಡಿದ್ದವು. ಆಗ ಕಾಂಗ್ರೆಸ್ ನಲ್ಲಿದ್ದ ರಮೇಶ್ ಪಕ್ಷದ ನಾಯಕರ ಜತೆ ಮುನಿಸಿಕೊಂಡರು. ನಂತರ  ಮುಂಬೈಗೆ ತೆರಳಿದ್ದ ರಮೇಶ್ ಮತ್ತು ಅವರ ತಂಡ ಶಾಸಕ ಸ್ಥಾನಕ್ಕೆ ಸಾಮೂಹಿಕ ರಾಜೀನಾಮೆ  ನೀಡಿ ಕುಮಾರಸ್ವಾಮಿ ಸರ್ಕಾರವನ್ನು ಕೆಡವಿತ್ತು.

ಇದಾದ  ಮೇಲೆ ಬಿಜೆಪಿಯಿಂದ ಚುನಾವಣೆ ಸ್ಪರ್ಧಿಸಿ ಗೆದ್ದು ಬಂದಿದ್ದರು. ಗೆದ್ದಿದ್ದು ಅಲ್ಲದೆ ಜಲಸಂಪನ್ಮೂಲ ಸಚಿವರಾಗಿದ್ದರು. ಆದರೆ ಸಿಡಿ ಪ್ರಕರಣದ ಕಾರಣಕ್ಕೆ ಸಚಿವ ಸ್ಥಾಣ ಕಳೆದುಕೊಂಡಿದ್ದರು. ಈಗ ಒಂದು ಹಂತದ ತನಿಖೆ ಮುಕ್ತಾಯವಾಗಿದ್ದು  ಮತ್ತೆ ರಮೇಶ್ ರಾಜಕಾರಣದಲ್ಲಿ ವಿಜೃಂಭಿಸುವ ಕಾಲ ಹತ್ತಿರ ಬಂದಿದೆಯೇ? ಎನ್ನುವುದನ್ನು ಕಾದು ನೋಡಬೇಕಿದೆ. 

 

click me!