Brother Rapes Sister: ಕುಡುಕ ಅಣ್ಣನಿಂದ ಸ್ವಂತ ತಂಗಿ ಮೇಲೆ ಅತ್ಯಾಚಾರ

Kannadaprabha News   | Asianet News
Published : Nov 29, 2021, 11:50 AM ISTUpdated : Nov 29, 2021, 12:18 PM IST
Brother Rapes Sister: ಕುಡುಕ ಅಣ್ಣನಿಂದ ಸ್ವಂತ ತಂಗಿ ಮೇಲೆ ಅತ್ಯಾಚಾರ

ಸಾರಾಂಶ

*  ಆರೋಪಿಯನ್ನು ಬಂಧಿಸಿದ ಪೊಲೀಸರು  *  ಅಣ್ಣಂದಿರ ಜೊತೆ ವಾಸವಿದ್ದ ತಂಗಿ *  ಅಪ್ರಾಪ್ತೆ ಅತ್ಯಾಚಾರ ಅಪರಾಧಿಗೆ 7 ವರ್ಷ ಕಠಿಣ ಸಜೆ  

ಮೈಸೂರು(ನ.29):  ಕುಡಿದ ಮತ್ತಿನಲ್ಲಿ ಅಣ್ಣನೇ ತನ್ನ ಸ್ವಂತ ತಂಗಿ ಮೇಲೆ ಅತ್ಯಾಚಾರ(Rape) ಎಸಗಿರುವ ಘಟನೆ ಮೈಸೂರಿನ(Mysuru) ಬಡಾವಣೆಯೊಂದರಲ್ಲಿ ನಡೆದಿದೆ. ಈ ಕೃತ್ಯ ಎಸಗಿದ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. 

ಮೂವರು ಹೆಣ್ಣು, ಇಬ್ಬರು ಗಂಡು ಸೇರಿದಂತೆ ಐವರು ಮಕ್ಕಳನ್ನು ಹೊಂದಿದ್ದ ತಂದೆ- ತಾಯಿ ಮೃತಪಟ್ಟಿದ್ದರು. ಚಿಕ್ಕದಿಂನಿಂದಲೂ ತಂಗಿಯರನ್ನು ಪ್ರೀತಿಯಿಂದ ನೋಡಿಕೊಂಡಿದ್ದ ಅಣ್ಣಂದಿರು, ಇಬ್ಬರು ತಂಗಿಯಂದಿರಿಗೆ ಮದುವೆ ಸಹ ಮಾಡಿದ್ದರು. 16 ವರ್ಷದ ಕೊನೆಯ ತಂಗಿ ಮಾತ್ರ ಅಣ್ಣಂದಿರ ಜೊತೆ ವಾಸವಿದ್ದಳು. ಕುಡಿತದ ಚಟಕ್ಕೆ ಬಲಿಯಾಗಿದ್ದ 30 ವರ್ಷದ ಹಿರಿಯ ಸಹೋದರ ಪಾನಮತ್ತನಾದ ಸಮಯದಲ್ಲಿ ಸ್ವಂತ ತಂಗಿಯ ಮೇಲೆ ಅತ್ಯಾಚಾರ ಎಸಗಿದ್ದು, ತಂಗಿ ಗರ್ಭಿಣಿಯಾಗಿರುವುದು ಎರಡು ದಿನಗಳ ಹಿಂದೆ ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿರುವ ಆಲನಹಳ್ಳಿ ಠಾಣೆ ಪೊಲೀಸರು(Police) ಆರೋಪಿಯನ್ನು(Accused) ಬಂಧಿಸಿ(Arrest) ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Rape Case: 4ರ ಕಂದನ ರೇಪ್, ಒಂದೇ ದಿನದಲ್ಲಿ ತೀರ್ಪು ಪ್ರಕಟಿಸಿದ ಕೋರ್ಟ್‌, ಬಾಲಾಪರಾಧಿಗೆ ಜೈಲು!

ಸಾಮೂಹಿಕ ಅತ್ಯಾಚಾರ, ಚಿನ್ನದ ಅಂಗಡಿ ದರೋಡೆ ಹತ್ಯೆ ಪ್ರಕರಣದಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಕೆ

ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ನಡೆದಿದ್ದ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ(Gang Rape) ಪ್ರಕರಣ ಹಾಗೂ ವಿದ್ಯಾರಣ್ಯಪುರಂನ ಚಿನ್ನದ ಅಂಗಡಿಯಲ್ಲಿ ದರೋಡೆ(Robbery) ಹತ್ಯೆ(Murder) ಪ್ರಕರಣ ಸಂಬಂಧಿಸಿದಂತೆ ಪೊಲೀಸರು ನ್ಯಾಯಾಲಯಕ್ಕೆ(Court) ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ.

ರಾಷ್ಟ್ರಮಟ್ಟದಲ್ಲಿ ಸಂಚಲನ ಮೂಡಿಸಿದ್ದ ಚಾಮುಂಡಿಬೆಟ್ಟದ(Chamundi Hill) ತಪ್ಪಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳ ವಿರುದ್ಧ ಪೊಲೀಸರು ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ. ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 6 ಮಂದಿ ಆರೋಪಿಗಳ ವಿರುದ್ಧ 1499 ಪುಟಗಳಷ್ಟು ದೋಷಾರೋಪ ಪಟ್ಟಿಯನ್ನು ಮೈಸೂರಿನ 3ನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದೆ. ಈ ಪ್ರಕರಣದಲ್ಲಿ 7 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಪೈಕಿ ಒಬ್ಬ ಆರೋಪಿಯ ಪಾತ್ರ ಘಟನೆಯಲ್ಲಿ ಇಲ್ಲ ಎಂಬುದು ಗೊತ್ತಾದ ನಂತರ ಆತನನ್ನು ಬಿಟ್ಟು, ಉಳಿದ 6 ಮಂದಿ ವಿರುದ್ಧ ಐಪಿಸಿ 397, 376ಬಿ, 109, 120ಬಿ, 334, 325, 326 ಸೆಕ್ಷಸ್ಸ್‌ಗಳಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ಅರಂಭವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಆಗಸ್ಟ್‌ 24 ರಂದು ಚಾಮುಂಡಿ ಬೆಟ್ಟದ ತಪ್ಪಲಿನ ಲಲಿತಾದ್ರಿಪುರದ ಗುಡ್ಡದಲ್ಲಿ ಸಹಪಾಠಿ ವಿದ್ಯಾರ್ಥಿಯೊಂದಿಗೆ ವಾಯುವಿಹಾರಕ್ಕೆ ತೆರಳಿದ್ದ ವಿದ್ಯಾರ್ಥಿನಿ ಮೇಲೆ ದುಷ್ಕರ್ಮಿಗಳ ಗುಂಪೊಂದು ಸಾಮೂಹಿಕ ಅತ್ಯಾಚಾರ ನಡೆಸಿ ಪರಾರಿಯಾಗಿತ್ತು. ಅಲ್ಲದೇ ಆಕೆ ಜತೆಗಿದ್ದ ವಿದ್ಯಾರ್ಥಿ(Student) ಮೇಲೆ ತೀವ್ರ ಹಲ್ಲೆ ನಡೆಸಿತ್ತು. ಸಂತ್ರಸ್ತ ಯುವತಿಯನ್ನು(Victim) ಗಾಯಾಳು ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಯುವಕ ನೀಡಿದ ದೂರಿನ ಮೇರೆಗೆ ಆಲನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Sexual Assault: ಅಪ್ರಾಪ್ತ ಮಗಳ ರೇಪ್, ಪ್ರೇಮಿಗೆ ಸಹಾಯ ಮಾಡಿದ ಅಮ್ಮ, ತಪ್ಪು ಮುಚ್ಚಿಡಲು ಮದುವೆಯಾಟ!

ದರೋಡೆ ಹತ್ಯೆ ಪ್ರಕರಣ

ಹಾಗೆಯೇ, ರಾಜ್ಯದಲ್ಲೆಡೆ ತಲ್ಲಣ ಮೂಡಿಸಿದ್ದ ಮೈಸೂರಿನ ಚಿನ್ನದ ಅಂಗಡಿ ದರೋಡೆ ಮತ್ತು ಯುವಕನ ಕೊಲೆ ಪ್ರಕರಣದಲ್ಲಿ 8 ಮಂದಿಯ ವಿರುದ್ಧ ಮೈಸೂರಿನ 2ನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ 1410 ಪುಟಗಳಷ್ಟು ದೋಷಾರೋಪ ಪಟ್ಟಿಸಲ್ಲಿಸಲಾಗಿದೆ. ಐಪಿಸಿ 396, 394, 120ಬಿ ಸೆಕ್ಷಸ್ಸ್‌ಗಳನ್ನು ಆರೋಪಿಗಳ ವಿರುದ್ಧ ಹಾಕಲಾಗಿದೆ. ಈ ಪ್ರಕರಣದಲ್ಲಿ 7 ಮಂದಿಯನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿಗಾಗಿ ಪೊಲೀಸರ ಶೋಧ ಮುಂದುವರಿದಿದೆ.

ಅಪ್ರಾಪ್ತೆ ಅತ್ಯಾಚಾರ ಅಪರಾಧಿಗೆ 7 ವರ್ಷ ಕಠಿಣ ಸಜೆ

ಮಂಗಳೂರು(Mangaluru): ಮದುವೆಯಾಗುವುದಾಗಿ ನಂಬಿಸಿ 2014ರಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದ ಬೆಳ್ತಂಗಡಿ ತಾಲೂಕು ಕೇಪು ಗ್ರಾಮದ ನೀರ್ಕಜೆಯ ನಿತಿನ್‌ (27)ಗೆ 7 ವರ್ಷಗಳ ಕಠಿಣ ಸಜೆ ಮತ್ತು 15,000 ರು. ದಂಡ ವಿಧಿಸಿ ಮಂಗಳೂರಿನ 1ನೇ ತ್ವರಿತಗತಿ ಸೆಷನ್ಸ್‌ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು