Love Sex Dhokha: ಮದುವೆ ಮಾತುಕತೆಗೆಂದು ಕರೆಸಿ ಕಾರಲ್ಲಿ ಸೆಕ್ಸ್, ಆಮೇಲೆ ನಂಬರ್ ಬ್ಲಾಕ್!

By Suvarna NewsFirst Published Nov 29, 2021, 6:18 PM IST
Highlights

*ಮ್ಯಾಟ್ರಿಮೋನಿ ಸೈಟ್ ನಲ್ಲಿ ಯುವತಿ ಪರಿಚಯ
* ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ
*ತನ್ನ ಕೆಲಸ ಮುಗಿದ ಮೇಲೆ ನಂಬರ್ ಬ್ಲಾಕ್ ಮಾಡಿದ
* ಬೆಳಗಾವಿ ಮೂಲದ ಯುವಕನ ಮೇಲೆ ದೂರು

ಪುಣೆ (ನ. 29)  ಮ್ಯಾಟ್ರಿಮೋನಿಯಲ್ ಪೋರ್ಟಲ್ (matrimonial portal) ಮೂಲಕ ಪರಿಚಯವಾದ ಹುಡುಗಿಗೆ ವಂಚಿಸಿದ (Fraud) ಆರೋಪದ ಮೇಲೆ ಬಂಧಿತನಾದ 31 ವರ್ಷದ ವ್ಯಕ್ತಿಯನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಪರಿಚಯವಾದ ವ್ಯಕ್ತಿ ತನ್ನನ್ನು ಮದುವೆಯಾಗುವುದಾಗಿ(Marriage) ನಂಬಿಸಿ ನಂತರ ಲೈಂಗಿಕ(ಸೆಷ) ಕ್ರಿಯೆ ನಡೆಸಿದ್ದಾನೆ. ಇದಾದ ನಂತರ ಮೊಬೈಲ್   ನನ್ನ ನಂಬರ್ ಬ್ಲಾಕ್ ಮಾಡಿದ್ದ ಎಂದು ಹುಡುಗಿ ಆರೋಪಿಸಿದ್ದಾಳೆ.

ಆರೋಪಿಯನ್ನು ಕರ್ನಾಟಕದ ಬೆಳಗಾವಿಯ(Belagavi) ಕುಂಪಟಗಿರಿ ನಿವಾಸಿ ಪ್ರಶಾಂತ ಭಾವರಾವ್ ಪಾಟೀಲ್ ಎಂದು ಗುರುತಿಸಲಾಗಿದೆ. ಮ್ಯಾಟ್ರಿಮೋನಿಯಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸಂಪರ್ಕ ಸಾಧಿಸಿದ ನಂತರ ಅವನು ಈ ರೀತಿ ಅನೇಕ ಮಹಿಳೆಯರಿಗೆ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬರುತ್ತಿದೆ.  ಈ ಹಿಂದೆಯೇ ಈತನ ಬಂಧನ ಮಾಡಲಾಗಿತ್ತು . 2018 ರಲ್ಲಿ ಸಶಸ್ತ್ರ ಪಡೆಗಳಿಂದ ತಲೆ ತಪ್ಪಿಸಿಕೊಂಡು ಅಲೆಯುತ್ತಿದ್ದ ಎಂದು ಸಿನ್ಹಗಡ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ. 2018 ರಿಂದ ಈ ವರ್ಷದ ನವೆಂಬರ್ 20 ರವರೆಗೆ ಪುಣೆ, ಲಾತೂರ್ ಮತ್ತು ಅಹ್ಮದ್‌ನಗರದಲ್ಲಿ ಈತನ ಮೇಲೆ ಒಟ್ಟು ಐದು ಪ್ರಕರಣಗಳನ್ನು ದಾಖಲಿಸಲಾಗಿದೆ.

ತಾಣೊಬ್ಬ ಸೇನಾ ಅಧಿಕಾರಿ ಎಂದು ಆಸಾಮಿ ಯುವತಿಯ ಪರಿಚಯ ಮಾಡಿಕೊಂಡಿದ್ದಾನೆ.  ಅಲ್ಲಿಂದ ಮುಂದೆ ಇಬ್ಬರು ಭೇಟಿಯಾಗಿದ್ದು ಹುಡುಗಿಯನ್ನು ನಂಬಿಸಿ ಆಕೆ ಜತೆ ಲೈಂಗಿಕ ಸಂಪರ್ಕ ನಡೆಸಿದ್ದಾನೆ. ಇದಾದ ಮೇಲೆ ನಂಬರ್ ಬ್ಲಾಕ್ ಮಾಡಿದ್ದ ಎಂದು ಯುವತಿ ಆರೋಪಿಸಿದ್ದಾಳೆ.

ನವೆಂಬರ್ 18 ರಂದು ದಗ್ದುಶೇತ್ ಗಣಪತಿ ದೇವಸ್ಥಾನದಲ್ಲಿ ಹುಡುಗಿ ಮತ್ತು ಪಾಟೀಲ್ ಭೇಟಿಯಾಗಿದ್ದಾರೆ. ಈ ವೇಳೆ ಸೇನೆಯ ಸಮವಸ್ತ್ರದಲ್ಲಿ ಆಸಾಮಿ ಕಾಣಿಸಿಕೊಂಡಿದ್ದ.   ಅಲ್ಲಿಂದ ಮಾತುಕತೆಗೆಂಧು ಹತ್ತಿರದ ವಸತಿಗೃಹಕ್ಕೆ ಕರೆದುಕೊಂಡು ಹೋಗಿದ್ದಾನೆ. ಮದುವೆಯಾಗುವ ಭರವಸೆ ನೀಡಿದ್ದಾಮೆ. ನಂತರ ಕಾರ್ ನಲ್ಲಿಯೇ ಒತ್ತಾಯಪೊರ್ವಕವಾಗಿ ನನ್ನ ಮೇಲೆ ಎರಗಿದ್ದಾನೆ ಎಂದು ಯುವತಿ ದೂರಿನಲ್ಲಿ ಹೇಳಿದ್ದಾಳೆ.

ಕಾಂಡೋಮ್ ಬಳಸು ಎಂದಿದ್ದಕ್ಕೆ ಕೊಲೆ ಮಾಡಿದ

ಇದಾದ ನಂತರ ನಂಬರ್ ಬ್ಲಾಕ್ ಮಾಡಿದ್ದು ಸಂಪರ್ಕಕ್ಕೆ ಸಿಗದೆ ಓಡಾಡುತ್ತಿದ್ದ.  ಯುವಕ ತನಗೆ ಮೋಸ ಮಾಡಿದ್ದು ಅಜ್ಞಾತವಾಗಿದ್ದಾನೆ ಎಂಬುದನ್ನು ಅರಿತ ಯುವತಿ ದೂರು ದಾಖಲಿಸಿದ್ದಾರೆ. 

ಚಾಕೊಲೇಟ್  ನೆಪದಲ್ಲಿ ಅತ್ಯಾಚಾರ;  ಪುಣೆಯಲ್ಲಿ ನಾಲ್ಕು ವರ್ಷದ ಬಾಲಕಿಯ ಮೇಲೆ ಆಕೆಯ ನೆರೆಯ ಮನೆಯ 12 ವರ್ಷದ ಬಾಲಕ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಚಾಕೊಲೇಟ್ ಖರೀದಿಸಲು ಹಣ ನೀಡುವುದಾಗಿ ಬಾಲಕಿಗೆ ಭರವಸೆ ನೀಡಿ ಆರೋಪಿ ಈ ಕೃತ್ಯ ಎಸಗಿದ್ದಾನೆ. ಶನಿವಾರದಂದು, ಪಿಂಪ್ರಿ ಚಿಂಚ್‌ವಾಡ್ ಪೊಲೀಸರು ಭಾರತೀಯ ದಂಡ ಸಂಹಿತೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಐಎಎಸ್ ಪ್ರಕರಣ: ಐಎಎಸ್ ಅಧಿಕಾರಿ ಸ್ನೇಹಲ್ ಲೋಖಂಡೆ (Snehal Lokhande) ವಿರುದ್ಧ ಲವ್ ಸೆಕ್ಸ್ ದೋಖಾ (Love, Sex, Cheat) ಆರೋಪ ಕೇಳಿ ಬಂದಿದೆ. ದೆಹಲಿ ಮೂಲದ ಯುವತಿಯೊಬ್ಬಳು ಲೋಖಂಡೆ ವಿರುದ್ಧ ಆರೋಪ ಮಾಡಿದ್ದಾಳೆ. 

2019 ರಲ್ಲಿ ಸ್ನೇಹಲ್ -ನನಗೆ ಪರಿಚಯವಾಯಿತು. ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದಾರೆ. ಲಾಡ್ಜ್‌, ರೂಂಗೆ ಕರೆದುಕೊಂಡು ಹೋಗಿದ್ದಾರೆ. ನಂತರ ಐಪಿಲ್ ಮಾತ್ರೆ ನುಂಗಲು ಹೇಳಿದ್ದಾರೆ' ಎಂದು ಯುವತಿ ಆರೋಪಿಸಿದ್ದಾಳೆ. ಜೊತೆಗೆ ಅಶ್ಲೀಲ ಚಾಟ್‌ ಲಿಸ್ಟನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾಳೆ. ಈ ಸಂಬಂಧ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಸ್ಮೃತಿ ಇರಾನಿ,  ಸಿಎಂ ಬೊಮ್ಮಾಯಿ, ಕಲಬುರಗಿ ಉಸ್ತುವಾರಿ ನಿರಾಣಿಗೆ ದೂರು ನೀಡಿದ್ದಾಳೆ.

 

 

click me!