ಆಕಾಶ ಮತ್ತು ರೇಣುಕಾ ಉಪ್ಪಾರ ದಂಪತಿ ಸೇರಿದಂತೆ ಮಲ್ಲಿಕ ಜಾನ್ ನದಾಫ್ ಮತ್ತು ಗಜಲಾಬಾನು ನಗರಿ ಎಂಬುವರನ್ನು ಬಂಧಿಸಲಾಗಿದೆ. ಆಕಾಶ ತನ್ನ ಪತ್ನಿಯನ್ನೇ ಹನಿಟ್ರ್ಯಾಪ್‌ಗೆ ಬಳಸಿರುವುದು ಆಘಾತಕಾರಿಯಾಗಿದೆ. ಇದು ನಾಗರಿಕ ಸಮಾಜ ತಲೆ ತಗ್ಗಿಸುವ ಸಂಗತಿ ಎಂದ ಡಿಸಿಪಿ ಮಹಾನಿಂಗ ನಂದಗಾವಿ
ಧಾರವಾಡ(ಅ.13): ಪತ್ನಿಯನ್ನು ಹನಿಟ್ರ್ಯಾಪ್‌ಗೆ ಬಳಸಿಕೊಂಡು ಹಣ ಪೀಕುತ್ತಿದ್ದ ಅಪರೂಪದ ಪ್ರಕರಣವೊಂದು ಧಾರವಾಡದಲ್ಲಿ ಬೆಳಕಿಗೆ ಬಂದಿದೆ. ದಂಪತಿ ಸೇರಿದಂತೆ ನಾಲ್ವರನ್ನು ವಿದ್ಯಾಗಿರಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಪಿ ಮಹಾನಿಂಗ ನಂದಗಾವಿ, ಆಕಾಶ ಮತ್ತು ರೇಣುಕಾ ಉಪ್ಪಾರ ದಂಪತಿ ಸೇರಿದಂತೆ ಮಲ್ಲಿಕ ಜಾನ್ ನದಾಫ್ ಮತ್ತು ಗಜಲಾಬಾನು ನಗರಿ ಎಂಬುವರನ್ನು ಬಂಧಿಸಲಾಗಿದೆ. ಆಕಾಶ ತನ್ನ ಪತ್ನಿಯನ್ನೇ ಹನಿಟ್ರ್ಯಾಪ್‌ಗೆ ಬಳಸಿರುವುದು ಆಘಾತಕಾರಿಯಾಗಿದೆ. ಇದು ನಾಗರಿಕ ಸಮಾಜ ತಲೆ ತಗ್ಗಿಸುವ ಸಂಗತಿ ಎಂದರು.
undefined
ಶಾಸಕ ಮುನಿರತ್ನ ಇಬ್ಬರು ಮಾಜಿ ಮುಖ್ಯಮಂತ್ರಿಗಳನ್ನು ಹನಿಟ್ರ್ಯಾಪ್ ಮಾಡಿದ್ದಾರೆ: ಸಂತ್ರಸ್ತೆ ಹೇಳಿಕೆ!
ದೂರವಾಣಿ ಮೂಲಕ ಅನ್ಯ ಜಿಲ್ಲೆಯ ವ್ಯಕ್ತಿಗಳನ್ನು ಸಂಪರ್ಕಿಸಿ, ಮೊದಲಿಗೆ ಸ್ನೇಹ ಬೆಳೆಸಿದ ಮಹಿಳೆಯರು, ನಂತರ ಒಂದಡೆ ಭೇಟಿ ಮಾಡಿದ್ದರು. ಬಳಿಕ ಆ ವ್ಯಕ್ತಿ ಮಹಿಳೆಯರೊಂದಿಗೆ ಇರುವ ವಿಡಿಯೋ ಚಿತ್ರೀಕರಣ ಸಹ ಮಾಡಿಕೊಂಡಿದ್ದಾಗಿ ತಿಳಿಸಿದರು.
ನಂತರ ಮಹಿಳೆಯರು ಆ ವ್ಯಕ್ತಿಯ ಬಳಿ ಹಣಕ್ಕೆ ಬೇಡಿಕೆ ಇಟ್ಟು, ಲಕ್ಷಾಂತರ ರೂಪಾಯಿ ಪೀಕಿದ ಬಗ್ಗೆ ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಕಂಡಿ ದ್ದಾಗಿ ಹೇಳಿದರು.
ಬಂಧಿತರಿಂದ ಚಿನ್ನ-ಬೆಳ್ಳಿ ಆಭರಣ, ನಗದು, ಕಾರು ಸೇರಿ 14.73 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಬೇರೆ ಬೇರೆ ಜಿಲ್ಲೆಗಳ ಜನ ಮೋಸಕ್ಕೆ ಒಳಗಾಗಿದ್ದಾರೆ. ಇವರ ವಿರುದ್ಧ 4 ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ ಎಂದರು.