Ramanagara: ರಾಜ್ಯದಲ್ಲೇ ಮೊದಲ ಬ್ರೈನ್ ಮ್ಯಾಪಿಂಗ್ ಮೂಲಕ ಕೊಲೆ ರಹಸ್ಯ ಬಯಲು!

By Govindaraj S  |  First Published Jan 25, 2023, 8:13 PM IST

ಪೋಲಿಸರು ಎಷ್ಟೇ ಪ್ರಯತ್ನ ಪಟ್ಟರೂ ಅರೋಪಿಯಿಂದ ಸತ್ಯಾಸತ್ಯಾತೆ‌ ಹೊರತರಲು ಆಗಿರಲಿಲ್ಲ. ಆಗಾಗಿಯೇ ನ್ಯಾಯಾಲಯದ ಅನುಮತಿ ಕೋರಿ ರಾಜ್ಯದಲ್ಲೇ ಮೊದಲ ಬಾರಿಗೆ ಆರೋಪಿಗೆ ಬ್ರೈನ್ ಮ್ಯಾಪಿಂಗ್ ಪರೀಕ್ಷೆ ನಡೆಸಲಾಗಿದ್ದು  ಪರೀಕ್ಷೆಯಿಂದ ಆರೋಪಿ ತನ್ನ ತಪ್ಪೊಪ್ಪಿಕೊಂಡಿದ್ದು ಪೋಲಿಸರು ಸ್ವಲ್ಪ‌ ನಿಟ್ಟುಸಿರು ಬಿಟ್ಟಿದ್ದಾರೆ. 
 


ವರದಿ: ಜಗದೀಶ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಮನಗರ

ರಾಮನಗರ (ಜ.25): ಪೋಲಿಸರು ಎಷ್ಟೇ ಪ್ರಯತ್ನ ಪಟ್ಟರೂ ಅರೋಪಿಯಿಂದ ಸತ್ಯಾಸತ್ಯಾತೆ‌ ಹೊರತರಲು ಆಗಿರಲಿಲ್ಲ. ಆಗಾಗಿಯೇ ನ್ಯಾಯಾಲಯದ ಅನುಮತಿ ಕೋರಿ ರಾಜ್ಯದಲ್ಲೇ ಮೊದಲ ಬಾರಿಗೆ ಆರೋಪಿಗೆ ಬ್ರೈನ್ ಮ್ಯಾಪಿಂಗ್ ಪರೀಕ್ಷೆ ನಡೆಸಲಾಗಿದ್ದು  ಪರೀಕ್ಷೆಯಿಂದ ಆರೋಪಿ ತನ್ನ ತಪ್ಪೊಪ್ಪಿಕೊಂಡಿದ್ದು ಪೋಲಿಸರು ಸ್ವಲ್ಪ‌ ನಿಟ್ಟುಸಿರು ಬಿಟ್ಟಿದ್ದಾರೆ. ಆಗಿದ್ರೆ ಏನು ಆ ಪ್ರಕರಣ ಅಂತೀರಾ ಈ ಸ್ಟೋರಿ ನೋಡಿ. ಹೌದು! ಇದು ಕಳೆದ ವರ್ಷ ಕಳೆದ ವರ್ಷ ಮೇ 19 ರಂದು ನಡೆದಿದ್ದ ಪ್ರಕರಣ. ಅಂದು ಕನಕಪುರದ ನಿವಾಸಿ ಆಶಾ ಎಂಬುವವರ ಪುತ್ರ ಶ್ರೇಯಸ್ಸು ನಾಪತ್ತೆ‌ಯಾಗಿದ್ದ‌. ಪರಿಚಯದ ವಕೀಲರೊಬ್ಬರು ಕಚೇರಿ ಶಿಫ್ಟಿಂಗ್ ಕೆಲಸಕ್ಕೆ ಕರೆದಿದ್ದಾರೆ ಎಂದು ಹೋಗಿದ್ದ ಯುವಕ ಮರಳಿ ಬಂದಿರಲಿಲ್ಲ. 

Tap to resize

Latest Videos

ಈ ಬಗ್ಗೆ ಶ್ರೇಯಸ್ ತಾಯಿ ಆಶಾ ಕನಕಪುರ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ರು. ಈ ಬಗ್ಗೆ ತನಿಖೆ ಕೈಗೊಂಡ ಕನಕಪುರ ಟೌನ್ ಪೊಲೀಸರು ದೂರವಾಣಿ ಕರೆ ಆಧರಿಸಿ ವಕೀಲ ಶಂಕರೇಗೌಡ ಹಾಗೂ ಅರುಣ್ ವಿರುದ್ಧ 377 ಕೇಸ್ ದಾಖಲಿಸಿ ಆರೋಪಿಗಳನ್ನ ಬಂಧಿಸಿದ್ದರು. ಆದರೆ ಬಾಲಕನ ನಿಗೂಢ ನಾಪತ್ತೆ‌ ಕುರಿತು ಆರೋಪಿಗಳು ಮಾತ್ರ ಬಾಯ್ಬಿಟ್ಟಿರಲಿಲ್ಲ. ಆದರೆ ಇದೀಗ ನೂತನ ತಂತ್ರಾಂಶದ ಮೂಲಕ ಸಂತ್ಯಾಂಶ ರಿವೀಲ್ ಆಗಿದೆ. ಬ್ರೈನ್ ಮ್ಯಾಂಪಿಗ್ ಎಂಬ ನೂತನ ತಂತ್ರಜ್ಞಾನದ ಮೂಲಕ ಯುವಕನ ನಾಪತ್ತೆ‌ ಪ್ರಕರಣವನ್ನ ಭೇಧಿಸಿದ್ದಾರೆ. ಆರೋಪಿ ತಲೆಗೆ ಸೆನ್ಸಾರ್ ವೊಂದನ್ನ ಅಳವಡಿಸಲಾಗುತ್ತದೆ.

ಜಡ್ಜ್ ಮನೆಯನ್ನೂ ಬಿಡದ ಖದೀಮರು: 60ಕ್ಕೂ ಹೆಚ್ಚು ಬಾರಿ ಕಳ್ಳತನ ಮಾಡಿದ್ದ ಮನೆಗಳ್ಳರು ಅರೆಸ್ಟ್‌!

ಮತ್ತು ಆತನನ್ನು ಕಂಪ್ಯೂಟರ್ ಪರದೆಯ ಮುಂದೆ ಕೂರಿಸಿ ಪ್ರಕರಣದ ಕುರಿತ ಒಂದಷ್ಟು ಭಾವಚಿತ್ರ ಹಾಗೂ ಶಬ್ದಗಳ ತೋರಿಸುವ ಮೂಲಕ ಆತನ ಮೆದುಳಿನಲ್ಲಿ ಆಗುವಂತಹ ಚಲನವಲನಗಳು, ಆಲೋಚನೆ, ಚಡಪಡಿಕೆ ಆಧಾರದ ಮೇಲೆ ಸತ್ಯಾಂಶ ರಿವೀಲ್ ಆಗಲಿದೆ. ಅದೇ ರೀತಿ ಪ್ರಕರಣದ ಬಂಧಿತ ಆರೋಪಿಗಳಾದ ವಕೀಲ ಶಂಕರೇಗೌಡ ಮತ್ತು ಅರುಣ್ ಬ್ರೈನ್ ಮ್ಯಾಂಪಿಗ್ ಪರೀಕ್ಷೆಯಲ್ಲಿ ಯವಕನನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಯುವಕನಿಗೆ ಮತ್ತು ಬರುವ ಮಾತ್ರೆ ನೀಡಿ ಅಸಹಜ ಲೈಂಕಿಕ ಕ್ರಿಯೆ ನಡೆಸಿ ಕೊಲೆಮಾಡಿ ಕೆರೆಗೆ ಎಸೆದಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ. ಈ ಹಿನ್ನೆಲೆ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. 

ಬಿಜೆಪಿ ಎಂಬ ಬುಲ್ಡೋಜರ್‌ ಕಾಂಗ್ರೆಸನ್ನು ನೆಲಸಮ ಮಾಡಲಿದೆ: ಸಚಿವ ಶ್ರೀರಾಮುಲು

ಇನ್ನು ನಾಪತ್ತೆಯಾಗಿದ್ದ ಯುವಕ ಶ್ರೇಯಸ್ಸ್ ಕೊಲೆಯಾಗಿರೋ ವಿಚಾರ ತಿಳಿದು ಯುವಕನ ಕುಟುಂಬಸ್ಥರು ಆಕ್ರಂದನ ವ್ಯಕ್ತಪಡಿಸಿದ್ದಾರೆ. ತಾಯಿ ಹಾಗೂ ತಾತನ ಆಶ್ರಯದಲ್ಲಿ ಬೆಳೆಯುತ್ತಿದ್ದ ಶ್ರೇಯಸ್ಸ್ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಕೊಲೆ ಮಾಡಿದ ಆರೋಪಿಗಳನ್ನ ಜೀವಾವಧಿ ಶಿಕ್ಷೆಗೆ ಒಳಪಡಿಸುವಂತೆ ಆಗ್ರಹಿಸಿದ್ದಾರೆ. ಇದ್ದ ಒಬ್ಬ ಮಗನನ್ನು ಕಳೆದುಕೊಂಡಿದ್ದೇವೆ ನಮಗೆ ನ್ಯಾಯ ದೊರಕಿಸಿ ಎಂದು ಕಣ್ಣೀರು ಹಾಕಿದ್ದಾರೆ. ಒಟ್ಟಾರೆ ಚಾಲೆಂಜಿಂಗ್ ಆಗಿದ್ದ ಪ್ರಕರಣವೊಂದನ್ನ ನೂತನ ತಂತ್ರಾಂಶದ ಮೂಲಕ ಬೇಧಿಸಿರೋದು ರಾಜ್ಯದಲ್ಲೇ ಮೊದಲು ಎನ್ನಲಾಗಿದೆ. ಅಪರಾಧಿಗಳು ಚಾಪೆ ಕೆಳಗೆ ತೂರಿದರೆ, ಪೊಲೀಸರು ರಂಗೋಲಿ ಕೆಳಗೆ ತೂರುತ್ತಾರೆ ಎಂಬುದನ್ನು ರಾಮನಗರ ಜಿಲ್ಲಾ ಪೊಲೀಸರು ನಿರೂಪಿಸಿದ್ದಾರೆ.

click me!