9 ತಿಂಗಳಲ್ಲಿ 236 ಪ್ರಕರಣ ಭೇದಿಸಿದ ರಾಮನಗರ ಪೊಲೀಸರು, 6 ಕೋಟಿ ರೂ ಮೌಲ್ಯದ ವಸ್ತುಗಳು ಜಪ್ತಿ

By Suvarna News  |  First Published Sep 29, 2022, 6:31 PM IST

ರಾಮನಗರ ಜಿಲ್ಲೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಕಳೆದ 9 ತಿಂಗಳುಗಳಲ್ಲಿ 236 ಪ್ರಕರಣಗಳನ್ನ ಭೇದಿಸಿ, ಸುಮಾರು 6 ಕೋಟಿ ರೂ ಮೌಲ್ಯದ ವಸ್ತುಗಳನ್ನ ಜಪ್ತಿ ಮಾಡಿ, ಮಾಲೀಕರುಗಳಿಗೂ ಹಿಂತಿರುಗಿಸಿದ್ದಾರೆ.  


ವರದಿ: ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್,

ರಾಮನಗರ (ಸೆ.29): ಕೊವಿಡ್ ನಂತರ ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ಹಲವು ಅಪರಾಧ ಪ್ರಕರಣಗಳು ಹೆಚ್ಚಾಗಿದ್ದವು. ಪೊಲೀಸರಿಗೂ ಕೂಡ ಇದು ದೊಡ್ಡ ತಲೆ ನೋವಾಗಿತ್ತು. ಹಾಗಂತ ಪೊಲೀಸರೇನೂ ಸುಮ್ಮನೇ ಕುಳಿತಿರಲಿಲ್ಲ. ರಾಮನಗರ ಜಿಲ್ಲೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಕಳೆದ 9 ತಿಂಗಳುಗಳಲ್ಲಿ 236 ಪ್ರಕರಣಗಳನ್ನ ಭೇದಿಸಿ, ಸುಮಾರು 6 ಕೋಟಿ ರೂ ಮೌಲ್ಯದ ವಸ್ತುಗಳನ್ನ ಜಪ್ತಿ ಮಾಡಿ, ಮಾಲೀಕರುಗಳಿಗೂ ಹಿಂತಿರುಗಿಸಿದ್ದಾರೆ.  ಹೌದು ರಾಮನಗರ ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಕಳೆದ 9 ತಿಂಗಳುಗಳಲ್ಲಿ ದಾಖಲಾಗಿದ್ದು, ಸುಮಾರು 236 ಪ್ರಕರಣಗಳನ್ನ ಭೇದಿಸಿ, ಸುಮಾರು ಆರು ಕೋಟಿ ರೂ ಮೌಲ್ಯದ ವಸ್ತುಗಳನ್ನ ವಶಪಡಿಸಿಕೊಂಡು, ಮಾಲೀಕರಿಗೆ ವಾಪಾಸ್ ನೀಡಿದ್ದಾರೆ. ಅಂದಹಾಗೆ ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ಕೊವಿಡ್ ನಂತರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿದ್ದವು. ದರೋಡೆ, ಸುಲಿಗೆ, ದರೋಡೆ ಯತ್ನ, ಸರಗಳ್ಳತನ, ಕನ್ನಕಳವು ಸೇರಿದಂತೆ ಹಲವು ಪ್ರಕರಣಗಳು ರಾಮನಗರ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ದಾಖಲಾಗಿದ್ದವು. ಒಂದೆಡೆ ಇದು ಪೊಲೀಸರಿಗೂ ದೊಡ್ಡ ತಲೆ ನೋವಾಗಿತ್ತು. ಆದರೆ ಪೊಲೀಸರು ಕಾರ್ಯಾಚರಣೆ ನಡೆಸಿ ಜಿಲ್ಲಾ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 236 ಪ್ರಕರಣಗಳನ್ನ ಭೇದಿಸಿ, 10 ಕೆಜಿ 863 ಗ್ರಾಂ ಚಿನ್ನ, 13 ಗ್ರಾಂ ಬೆಳ್ಳಿ, 101 ದ್ವಿಚಕ್ರ ವಾಹನ, 14 ಇತರೆ ವಾಹನಗಳು,  58 ಮೊಬೈಲ್ ಗಳು, 6 ಟಿವಿ, ಲ್ಯಾಪ್ ಟಾಪ್, 26 ಕೆಜಿ ಗಂಧದ ತುಂಡುಗಳು ಹಾಗೂ 23 ಲಕ್ಷದ 28 ಸಾವಿರದ 160 ರೂ ಸೇರಿದಂತೆ ಸುಮಾರು 5 ಕೋಟಿ 84 ಲಕ್ಷ ರೂಗಳನ್ನ ವಶಪಡಿಸಿಕೊಂಡಿದ್ದಾರೆ.  

Tap to resize

Latest Videos

ಅಂದಹಾಗೆ ಇವತ್ತು ರಾಮನಗರ ಜಿಲ್ಲಾ ಪೊಲೀಸ್ ಭವನದಲ್ಲಿ ಜಿಲ್ಲಾ ಪೊಲೀಸ್ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳುವಾದ ವಸ್ತುಗಳ ಹಾಗೂ ವಶಪಡಿಸಿಕೊಂಡ ವಸ್ತುಗಳನ್ನ ದೂರುದಾರಿಗೆ ನೀಡುವ ಸಲುವಾಗಿ ಪ್ರಾಪರ್ಟಿ ರಿಟರ್ನ್ಸ್ ಪೆರೆಡ್ ನಡೆಸಿದ್ರು. ಕೇಂದ್ರ ವಲಯ ಐಜಿಪಿ ಚಂದ್ರಶೇಖರ್, ಆಗಮಿಸಿ ವೀಕ್ಷಣೆ ನಡೆಸಿದ್ರು. ಅಲ್ಲದೆ ವಶಪಡಿಸಿಕೊಂಡಿದ್ದ ವಸ್ತುಗಳನ್ನ ಮಾಲೀಕರಿಗೆ ಕೇಂದ್ರವಲಯ ಐಜಿಪಿ ವಾಪಸ್ ನೀಡಿದ್ರು.

ಬೆಂಗಳೂರು ಠಾಣೆಯಲ್ಲಿ ವ್ಯಕ್ತಿಗೆ ಥರ್ಡ್‌ ಡಿಗ್ರಿ ಟಾರ್ಚರ್‌, ಖಾಸಗಿ ಅಂಗಕ್ಕೆ ವಿದ್ಯುತ್‌ ಶಾಕ್‌ ನೀಡಿದ

ಇನ್ನು ಎಷ್ಟು ಜನ ತಮ್ಮಿಂದ ಕಳುವಾದ ವಸ್ತುಗಳು ವಾಪಾಸ್ ಸಿಗುವುದಿಲ್ಲ ಎಂದು ಕೊಂಡಿದ್ದರು. ಆದರೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನ ಬಂಧಿಸುವುದರ ಜೊತೆಗೆ ಕಳುವಾದ ವಸ್ತುಗಳನ್ನ ಸಹಾ ವಾಪಸ್ ನೀಡಿದ್ರು. ಇನ್ನು ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರು ಸಹಾ ಮೆಚ್ಚುಗೆ ವ್ಯಕ್ತಪಡಿಸಿದ್ರು.

ಜ್ಞಾನೋದಯದ ಬಯಕೆ: ಭೂ ಸಮಾಧಿಯಾಗಲು ಹೊರಟವನ ಕಂಬಿ ಹಿಂದೆ ಕಳಿಸಿದ ಪೊಲೀಸರು

ಒಟ್ಟಾರೆ ರಾಮನಗರ ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ತಮ್ಮ ವ್ಯಾಪ್ತಿಯಲ್ಲಿ ನಡೆದಿದ್ದ ಅಪರಾಧ ಪ್ರಕರಣಗಳನ್ನ ಭೇದಿಸಿ, ಕಳುವಾಗಿದ್ದ ವಸ್ತುಗಳನ್ನ ಮಾಲೀಕರಿಗೆ ವಾಪಸ್ ನೀಡಿ, ಜನರ ಮೆಚ್ಚುಗೆಗೆ ಕಾರಣರಾಗಿದ್ದಾರೆ. ಅಲ್ಲದೆ ಮಾಲೀಕರು ಸಹಾ ನಿಟ್ಟುಸಿರು ಬಿಟ್ಟಿದ್ದಾರೆ.

click me!