Swamiji Found Dead : ನೇಣು ಬಿಗಿದ ಸ್ಥಿತಿಯಲ್ಲಿ  ಚಿಲುಮೆ ಮಠದ ಸ್ವಾಮೀಜಿ, ಅನುಮಾನಗಳು ಅನೇಕ

By Suvarna News  |  First Published Dec 20, 2021, 4:27 PM IST

* ಮಠದಲ್ಲೇ ಸ್ವಾಮೀಜಿ ನೇಣು ಬಿಗಿದ ಸ್ಥಿತಿಯಲ್ಲಿ ಸಾವು

* ಸ್ವಾಮೀಜಿ ಸಾವಿನಿಂದ ಆತಂಕಕ್ಕೊಳಗಾದ ಭಕ್ತವೃಂದ

* ಹಲವು ಅನುಮಾನ ಮೂಡಿಸಿರೋ ಸ್ವಾಮೀಜಿ ಸಾವು

* ಸಿದ್ದಗಂಗ ಮಠದ ಶಾಖ ಮಠ ಚಿಲುಮೆ ಮಠದ ಶ್ರೀಗಳ ಸಾವು


ಬೆಂಗಳೂರು/ ಮಾಗಡಿ(ಡಿ. 20)  ಮಠದಲ್ಲೇ ಸ್ವಾಮೀಜಿ ನೇಣು (Hang) ಬಿಗಿದ ಸ್ಥಿತಿಯಲ್ಲಿ  ಸಾವು ಕಂಡಿದ್ದಾರೆ ಸ್ವಾಮೀಜಿ ಸಾವಿನಿಂದ  ಭಕ್ತವೃಂದ ಆತಂಕಕ್ಕೆ ಒಳಗಾಗಿದೆ.

 ಸಿದ್ದಗಂಗ ( Siddaganga Math) ಮಠದ ಶಾಖ ಮಠ ಚಿಲುಮೆ ಮಠದ ಶ್ರೀಗಳು  ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಾಗಡಿ ತಾಲೂಕಿನ ಸೋಲೂರಿನ ಚಿಲುಮೆ ಮಠ ಸ್ವಾಮೀಜಿ  ಮಠದ ಕಿಟಕಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ಬಸವಲಿಂಗ ಶ್ರೀಗಳ ಸಾವಿನ ಬಗ್ಗೆ ಕುದೂರು ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ. 

Tap to resize

Latest Videos

ಪ್ರೇಮಿಗಳ ಆತ್ಮಹತ್ಯೆ: ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಮನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಬಳಿ ಸುಸೈಡ್ ಮಾಡಿಕೊಂಡಿದ್ದಾರೆ.

ರಾಮನಗರದ ಚಾಮುಂಡೇಶ್ವರಿ ನಗರ ಹರೀಶ್ (26) ಗುಡ್ಡದಹಳ್ಳಿ ಗ್ರಾಮದ ಕಾವ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದುವೆಗೆ ಹುಡುಗಿ ಮನೆಯಲ್ಲಿ ಒಪ್ಪದ ಕಾರಣಕ್ಕೆ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಶಿರೂರು ಸ್ವಾಮೀಜಿ ಸಾವಿನ ರಿಪೋರ್ಟ್ ಪೊಲೀಸರಿಗೆ : ಏನಿದೆ ವರದಿಯಲ್ಲಿ?

ಕಾವ್ಯ ಎಸ್‌ಎಸ್‌ಎಲ್‌ಸಿ ವಿದ್ಯಾಭ್ಯಾಸ ಮಾಡುತ್ತಿದ್ದು, ಹರೀಶ್ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ರಾಮನಗರ ಗ್ರಾಮಾಂತರ ಪೋಲಿಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ ರಾಮನಗರ ಜಿಲ್ಲಾಸ್ಪತ್ರೆಗೆ ಪ್ರೇಮಿಗಳ ಮೃತ ದೇಹ ರವಾನಿಸಲಾಗಿದೆ.

ಹಾವು ಕಚ್ಚಿ ಸ್ವಾಮೀಜಿ ಸಾವು:   ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಗೋಪಾಲಪುರ ಗ್ರಾಮದ ಕಬ್ಬಿಣ ಕೋಲೇಶ್ವರ ಮಠದ ಕಿರಿಯ ಮಠಾಧೀಶ ಹಾವು ಕಚ್ಚಿ  ಸಾವನ್ನಪ್ಪಿದ್ದರು.

ಇಮ್ಮಡಿ ಗುರುಮಲ್ಲಸ್ವಾಮೀಜಿ(42) ಸಾವನ್ನಪ್ಪಿದವರು. ಮಠದ ಜಮೀನಿನಲ್ಲಿ ಕೃಷಿ ಕಾರ್ಮಿಕರೊಂದಿಗೆ ಕಳೆ ಕೀಳುತ್ತಿದ್ದಾಗ ಇಮ್ಮಡಿ ಗುರುಮಲ್ಲಸ್ವಾಮೀಜಿಯ ಪಾದಕ್ಕೆ ಹಾವು ಕಚ್ಚಿತ್ತು.

ಕೂಡಲೇ ಅವರನ್ನ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಗೆ(Hospital) ಕರೆದೊಯ್ಯಲಾಗಿತ್ತು. . ಬಳಿಕ ಅಲ್ಲಿಂದ  ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದಾರೆ. ಆದ್ರೆ, ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.

ಪ್ರವಚನ  ಮಾಡುತ್ತಲೇ ಸಾವು:   ಪ್ರವಚನ ಮಾಡುತ್ತಿರುವಾಗಲೇ ಸ್ವಾಮೀಜಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದರು.  ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬಳೋಬಾಳ ಗ್ರಾಮದಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು. ಬಸವಯೋಗ ಮಂಟಪ ಟ್ರಸ್ಟ್ ಬಳೋಬಾಳ ಮಠದ ಸಂಗನಬಸವ ಮಹಾಸ್ವಾಮೀಜಿ(53) ತೀವ್ರ ಹೃದಯಾಘಾತದಿಂದ ಇಹಲೋಹ ತ್ಯಜಿಸಿದ್ದರು. ತಮ್ಮ ಹುಟ್ಟು ಹಬ್ಬದಂದು ಪ್ರವಚನ ನೀಡುತ್ತಿದ್ದ ಸಂಗನಬಸವ ಮಹಾಸ್ವಾಮೀಜಿ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದರು. 

click me!