
ಪಾಟ್ನಾ(ಡಿ. 20) ಇಡೀ ಸಮಾಜವೇ ತಲೆತಗ್ಗಿಸುವಂತಹ ಪ್ರಕರಣವೊಂದು ಪಾಟ್ನಾದಿಂದ (Patna) ವರದಿಯಾಗಿದೆ. ಬಿಹಾರದ (Bihar) ಹಾಜಿಪುರ ಪಟ್ಟಣದಲ್ಲಿ 60 ವರ್ಷದ ವ್ಯಕ್ತಿಯೊಬ್ಬ ತನ್ನ ಸಂಬಂಧಿಯ (ಸೊಸೆ) ಮೂರೂವರೆ ವರ್ಷದ ಮಗಳ ಮೇಲೆ (Rape) ಅತ್ಯಾಚಾರವೆಸಗಿದ್ದಾನೆ.
ಡಿಸೆಂಬರ್ 16 ರಂದೇ ಎಸಗಿರುವ ಕೃತ್ಯ ಶನಿವಾರ ಬೆಳಕಿಗೆ ಬಂದಿದೆ. ಬಾಲಕಿಯ ತಾಯಿ (Mother) ಪೊಲೀಸರಿಗೆ ದೂರು ನೀಡಿದ್ದಾಳೆ.ಈ ಹಿನ್ನೆಲೆಯಲ್ಲಿ 60 ವರ್ಷದ ಆರೋಪಿಯನ್ನು ಪೊಲೀಸರು ಭಾನುವಾರ (Arrest) ಬಂಧಿಸಿದ್ದಾರೆ.
ದೂರು ನೀಡಿದ ಮಹಿಳೆ ಆರೋಪಿಗೆ ಸಂಬಂಧದಲ್ಲಿ ಹಿರಿಯ ಸೊಸೆಯಾಗಬೇಕು. ಮದುವೆ (Marriage) ಸಮಾರಂಭವೊಂದರಲ್ಲಿ ಭಾಗವಹಿಸಲು ವೃದ್ಧ ಹಾಜಿಪುರಕ್ಕೆ ಬಂದಿದ್ದ. ಡಿಸೆಂಬರ್ 16 ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಮನೆಯ ಟೆರೆಸ್ ನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ವೃದ್ಧ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಮಗುವಿನ
ಖಾಸಗಿ ಅಂಗಗಳಿಗೆ ಗಾಯಗಳಾಗಿವೆ. ಮಗುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
Suket Gang Rape: ಅಪ್ರಾಪ್ತೆಯ ಗ್ಯಾಂಗ್‌ರೇಪ್, 13 ಮಂದಿಗೆ 20 ವರ್ಷ, ಮೂವರಿಗೆ 4 ವರ್ಷ ಜೈಲು!
ಸದರ್ ಎಸ್‌ಡಿಪಿಒ ರಾಘವ್ ದಯಾಳ್ ವಿವರಣೆ ನೀಡಿದ್ದು, ಮೊದಲು ಕುಟುಂಬದವರು ವಿಷಯನ್ನು ಮುಚ್ಚಿಡಲು ಯತ್ನಿಸಿದ್ದರು. ಆದರೆ ಬಾಲಕಿಯ ತಾಯಿ ಮುಂದೆಬಂದು ದೂರು ನೀಡಿದ್ದಾರೆ. ಅವರ ದೂರಿನ ಆಧಾರದಲ್ಲಿ ಆರೋಪಿಯನ್ನು ಬಂಧಿಸಿದ್ದೇವೆ ಎಂದು ತಿಳಿಸಿದ್ದಾರೆ.
ಪ್ರಕರಣದ ತನಿಖೆಯನ್ನು ಪ್ರಾರಂಭಿಸಲಾಗಿದೆ. ಹುಡುಗಿಯ ತಾಯಿ ರಕ್ತಸಿಕ್ತ ಬಟ್ಟೆ, ದಿಂಬು ಮತ್ತು ಬೆಡ್‌ಶೀಟ್‌ಗಳನ್ನ ನೀರಿನಲ್ಲಿ ತೊಳೆದುಬಿಟ್ಟಿದ್ದಳು. ಹಾಗಾಗಿ ಘಟನೆ ನಡೆದ ಜಾಗದಿಂದ ಯಾವುದೇ ಸಾಕ್ಷ್ಯ ಕಲೆಹಾಕಲು ಸಾಧ್ಯವಾಗಿಲ್ಲ ಎಂದು ಎಂದು ಮಹಿಳಾ ಪೊಲೀಸ್ ಠಾಣೆ ಎಸ್‌ಎಚ್‌ಒ ಪುಷ್ಪಾ ಕುಮಾರಿ ತಿಳಿಸಿದ್ದಾರೆ.
ಸ್ನೇಹ ಸಂಪಾದಿಸಿ ಕೃತ್ಯ ಎಸಗಿದ್ದ ಬಸ್ ಚಾಲಕ: ಬಾಲಕಿ ಮೇಲೆ ಅತ್ಯಾಚಾರದ (Rape) ಪ್ರಕರಣಕ್ಕೆ ಸಂಬಧಿಸಿ ಮಿನಿ ಬಸ್ (Bus Driver)ಚಾಲಕನೊಬ್ಬನನ್ನು ತಮಿಳುನಾಡಿನಲ್ಲಿ ಬಂಧಿಸಲಾಗಿತ್ತು. 17 ವರ್ಷದ 12 ನೇ ತರಗತಿ ವಿದ್ಯಾರ್ಥಿನಿ ಮೂರು ದಿನದಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಇದೇ ಕಾರಣಕ್ಕೆ ಶಾಲೆಗೆ (School) ಹೋಗಲು ಹಿಂದೇಟು ಹಾಕಿದ್ದಾಳೆ. ಮಗಳ ಸ್ಥಿತಿಯನ್ನು ನೋಡಿ ತಾಯಿ (Mother) ಪ್ರಶ್ನೆ ಮಾಡಿದಾಗ ಪ್ರಕರಣ ಗೊತ್ತಾಗಿತ್ತು.
ಪ್ರಗೆನ್ಸಿ ಟೆಸ್ಟ್ ಮಾಡಿಸಿದಾಗ ಗರ್ಭಿಣಿ ಎನ್ನುವುದು ಗೊತ್ತಾಗಿದೆ ಎಂದಿದ್ದಾಳೆ ಈ ವೇಳೆ ತಾಯಿ ಶಾಕ್ ಗೆ ಒಳಗಾಗಿದ್ದಾಳೆ. 40 ವರ್ಷದ ಮಿನಿ ಬಸ್ ಚಾಲಕನೊಬ್ಬ ತನ್ನ ಮೇಲೆ ದೌರ್ಜನ್ಯ ಎಸಗಿರುವ ವಿಚಾರವನ್ನು ತಿಳಿಸಿದ್ದಾಳೆ.
ಬಾಲಕಿ ವಾಸವಿದ್ದ ಪ್ರದೇಶದ 40 ವರ್ಷದ ಆರೋಪಿ ಅಪ್ರಾಪ್ತ ಬಾಲಕಿಯೊಂದಿಗೆ ಸ್ನೇಹ ಬೆಳೆಸಿದ್ದ. ಹುಡುಗಿ ತನ್ನ ಬಸ್ಸಿನಲ್ಲಿ ಪ್ರಯಾಣಿಸಿದಾಗಲೆಲ್ಲಾ ಅವನು ಅವಳೊಂದಿಗೆ ಮಾತನಾಡುತ್ತಿದ್ದ. ಸೆಪ್ಟೆಂಬರ್ 4ರಂದು ಆಕೆಯ ಮನೆಗೆ ತೆರಳಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ತನ್ನ ಹೆಂಡತಿಯಿಂದ ದೂರವಾಗಿರುವುದರಿಂದ ಅವಳನ್ನು ಮದುವೆಯಾಗಲು ಬಯಸುವುದಾಗಿಯೂ ಹೇಳಿದ್ದ. ಮನೆಯಲ್ಲಿ ಬಾಲಕಿ ಒಬ್ಬಳೆ ಇದ್ದಾಗ ಹಲವು ಸಾರಿ ಬಂದು ಹೋಗಿದ್ದ.
ಬಾಲಕಿ ಗರ್ಭಿಣಿಯಾಗಿರುವ ವಿಷಯ ತಿಳಿದ ನಂತರ ಬಾಲಕಿಯ ತಾಯಿ ಪೊಲೀಸ್ ದೂರು ದಾಖಲಿದ್ದರು. ಆಕೆಯ ದೂರಿನ ಆಧಾರದ ಮೇಲೆ ಪೊಲೀಸರು ಸೂಕ್ತ ನಿಬಂಧನೆಗಳ ಅಡಿಯಲ್ಲಿ ಆರೋಪಿಯನ್ನು ದಾಖಲಿಸಿ ಶುಕ್ರವಾರ ಆರೋಪಿಯನ್ನು ಬಂಧಿಸಿದ್ದರು.
ಪುಣೆ ಪ್ರಕರಣ: ಮಹಾರಾಷ್ಟ್ರದ ಪುಣೆಯ ಹಡಪ್ಸರ್‌ನ 25 ವರ್ಷದ ಮಾಡೆಲ್ (Model) ಮೂವರ ವಿರುದ್ಧ ದೂರು ದಾಖಲಿಸಿದ್ದರು. ತನ್ನನ್ನು ಲೈಂಗಿಕವಾಗಿ (Sexual Harassment)ಬಳಸಿಕೊಂಡಿದ್ದು ಅಲ್ಲದೇ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದರು. ರೂಪದರ್ಶಿಯ ದೂರು ಆಧರಿಸಿ ವಾರ್ಜೆ ಪೊಲೀಸರು ಚಲನಚಿತ್ರ (Bollywood)ನಿರ್ಮಾಪಕ ಸೇರಿ ಮೂವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದರು.
ಎರಡು ಕೋಟಿ ರೂ. ವಂಚನೆ: ಸಿನಿಮಾದಲ್ಲಿ ಅವಕಾಶ ಹುಡುಕುತ್ತಿದ್ದವರಿಗೆ ಪಾತ್ರದ ಭರವಸೆ ನೀಡಿ ಸುಮಾರು 80 ಜನರಿಗೆ 2 ಕೋಟಿ ರೂ. ವಂಚಿಸಿದ್ದ ಪ್ರಕರಣ ಕಳೆದ ಜೂನ್ ನಲ್ಲಿ ಬೆಳಕಿಗೆ ಬಂದಿತ್ತು. ಅಶ್ವಿನ್ ದೌಡಾ (47) ಎಂಬಾತ ಯುವ ಕಲಾವಿದರಿಗೆ ವಂಚನೆ ಮಾಡಿದ್ದ. ಬೋರಿವ್ಲಿ ನಿವಾಸಿ ಮಹೇಶ್ ಗುಪ್ತಾ (47) ದೂರು ನೀಡಿದಾಗ ವಂಚನೆಯ ಕರಾಳ ಮುಖ ಬಹಿರಂಗವಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ