ಹೆಬ್ಬಾವಿನ ಮರಿ ಎಂದು ವಿಷದ ಹಾವಿನ ಮರಿ ಹಿಡಿದು ಕಚ್ಚಿಸಿಕೊಂಡಿದ್ದ ವ್ಯಕ್ತಿ ಮೃತಪಟ್ಟ ಘಟನೆ ಮಂಗಳೂರು ಹೊರವಲಯದ ಬಜ್ಪೆ ಎಂಬಲ್ಲಿ ನಡೆದಿದೆ.
ಮಂಗಳೂರು (ಸೆ.14): ಹೆಬ್ಬಾವಿನ ಮರಿ ಎಂದು ವಿಷದ ಹಾವಿನ ಮರಿ ಹಿಡಿದು ಕಚ್ಚಿಸಿಕೊಂಡಿದ್ದ ವ್ಯಕ್ತಿ ಮೃತಪಟ್ಟ ಘಟನೆ ಮಂಗಳೂರು ಹೊರವಲಯದ ಬಜ್ಪೆ ಎಂಬಲ್ಲಿ ನಡೆದಿದೆ.
ರಾಮಚಂದ್ರ ಪೂಜಾರಿ (58) ಮೃತ ದುರ್ದೈವಿ. ಮೂಲತಃ ಬಂಟ್ವಾಳವರಾದ ರಾಮಚಂದ್ರ ಪೂಜಾರಿ ಇಲ್ಲಿನ ಮರವೂರಿನ ಮನೆಯೊಂದರಲ್ಲಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡು ಜೀವನ ಸಾಗಿಸಿದ್ದ. ಕಳೆದ ಸೆ.4ರಂದು ಮಧ್ಯಾಹ್ನ ವೇಳೆ ಮನೆಯ ಮೆಟ್ಟಿಲು ಸಮೀಪ ಹಾವಿನ ಮರಿಯೊಂದು ಕಾಣಿಸಿಕೊಂಡಿದೆ. ಅದು ವಿಷದ ಹಾವಿನ ಮರಿಯೆಂಬುದು ತಿಳಿಯದೆ ಹೆಬ್ಬಾವಿನ ಮರಿ ಎಂದು ಭಾವಿಸಿ ಬರಿಗೈಲಿ ಹಿಡಿದಿದ್ದ ರಾಮಚಂದ್ರ ಪೂಜಾರಿ.
ಮಂಗಳೂರು: ಶ್ರೀಮತಿ ಶೆಟ್ಟಿ ಬರ್ಬರ ಕೊ*ಲೆ ಪ್ರಕರಣ; ಮೂವರ ಕೃತ್ಯ ಸಾಬೀತು, ಸೆ.17ಕ್ಕೆ ಶಿಕ್ಷೆ ಪ್ರಮಾಣ ಪ್ರಕಟ
ಹಾವಿನ ಮರಿ ಹಿಡಿಯುವ ಸಂದರ್ಭ ಕೈಗೆ ಕಚ್ಚಿತ್ತು. ಆದರೂ ಅದು ಹೆಬ್ಬಾವಿನ ಮರಿ ಕಚ್ಚಿದರೂ ಏನಾಗಲ್ಲ ಎಂಬ ನಂಬಿಕೆಯಲ್ಲಿ ಚಿಕಿತ್ಸೆ ಪಡೆಯದೇ ನಿರ್ಲಕ್ಷ್ಯ ಮಾಡಿದ್ದ ಪೂಜಾರಿ. ಆದರೆ ವಿಷ ದೇಹ ವ್ಯಾಪಿಸಿ ತೀವ್ರ ಅಸ್ವಸ್ಥಗೊಂಡ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ ಆ ಹೊತ್ತಿಗಾಗಲೇ ಕೈಮೀರಿ ಹೋಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯ್ತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.