ಮಂಗಳೂರು: ಶ್ರೀಮತಿ ಶೆಟ್ಟಿ ಬರ್ಬರ ಕೊ*ಲೆ ಪ್ರಕರಣ; ಮೂವರ ಕೃತ್ಯ ಸಾಬೀತು, ಸೆ.17ಕ್ಕೆ ಶಿಕ್ಷೆ ಪ್ರಮಾಣ ಪ್ರಕಟ

By Ravi Janekal  |  First Published Sep 14, 2024, 12:35 PM IST

ಐದು ವರ್ಷಗಳ ಹಿಂದೆ ಮಂಗಳೂರು ನಗರವನ್ನೇ ಬೆಚ್ಚಿಬಿಳಿಸಿದ್ದ ಶ್ರೀಮತಿ ಶೆಟ್ಟಿ ಬರ್ಬರ ಹತ್ಯೆ ಪ್ರಕರಣದ ಆರೋಪಿಗಳ ಕೃತ್ಯ ಸಾಬೀತಾದ ಹಿನ್ನೆಲೆ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್‌.ಎಸ್‌ ತೀರ್ಪು ನೀಡಿದ್ದಾರೆ. 


ಮಂಗಳೂರು (ಸೆ.14): ಐದು ವರ್ಷಗಳ ಹಿಂದೆ ಮಂಗಳೂರು ನಗರವನ್ನೇ ಬೆಚ್ಚಿಬಿಳಿಸಿದ್ದ ಶ್ರೀಮತಿ ಶೆಟ್ಟಿ ಬರ್ಬರ ಹತ್ಯೆ ಪ್ರಕರಣದ ಆರೋಪಿಗಳ ಕೃತ್ಯ ಸಾಬೀತಾದ ಹಿನ್ನೆಲೆ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್‌.ಎಸ್‌ ತೀರ್ಪು ನೀಡಿದ್ದಾರೆ. 

ಸೂಟರ್‌ಪೇಟೆಯ ಜೋನಸ್ ಸ್ಯಾಮ್ಸನ್(40), ವಿಕ್ಟೋರಿಯಾ ಮಥಾಯಿಸ್(47) ಮರಕಡ ತಾರಿಪಾಡಿ ಗುಡ್ಡೆಯ ರಾಜು(34) ಪ್ರಕರಣ ಆರೋಪಿಗಳು. ಆರೋಪಿಗಳ ಪೈಕಿ ವಿಕ್ಟೋರಿಯಾ ಮಥಾಯಿಸ್ ಜೋನಸ್ ಸ್ಯಾಮ್ಸನ್ ಪತ್ನಿಯಾಗಿದ್ದಾಳೆ.

Tap to resize

Latest Videos

ಕಸಬರಿಗೆ ಹಿಡಿದು ಟಾಯ್ಲೆಟ್ ಕ್ಲೀನ್ ಮಾಡ್ತಾರೆ ದರ್ಶನ್, ಇದಕ್ಕೆ ಬಳ್ಳಾರಿ ಜೈಲು ಬೇಡ ಅಂತಿರೋದಾ?

ಪ್ರಕರಣ ಹಿನ್ನೆಲೆ:

ಅತ್ತಾವರ ನಿವಾಸಿ ಶ್ರೀಮಂತಿ ಶೆಟ್ಟಿ(42) ಶ್ರೀ ಪೊಳಲಿ ಎಲೆಕ್ಟ್ರಾನಿಕ್ಸ್ ಅಂಗಡಿ ನಡೆಸುವುದರ ಜೊತೆಗೆ ಚಿಟ್ ಫಂಡ್ ವ್ಯವಹಾರ ಮಾಡಿಕೊಂಡಿದ್ದರು. ಇದೇ ಚಿಟ್‌ಫಂಡ್‌ನಲ್ಲಿ ಕೊಲೆ ಆರೋಪಿ ಜೋನಸ್ ಸ್ಯಾಮ್ಸನ್ ಅವಧಿಗೆ ಮೊದಲೇ ಎರಡೂ ಸದಸ್ಯತ್ವದ ಹಣವನ್ನು ಪಡೆದುಕೊಂಡಿದ್ದ. ಆದರೆ ಮಾಸಿಕ ಕಂತು ಪಾವತಿಸಲು ವಿಫಲನಾಗಿದ್ದ ಜೋನಸ್. ಹೀಗಾಗಿ ಕಂತು ಪಾವತಿಸುವಂತೆ ಶ್ರೀಮತಿ ಶೆಟ್ಟಿ ಒತ್ತಾಯಿಸಿದ್ದರು. ಆದರೂ ಕಂತು ಪಾವತಿಸದೇ ನಿರ್ಲಕ್ಷ್ಯ ಮುಂದುವರಿಸಿದ್ದ ಕೊಲೆ ಆರೋಪಿ. ಕೇಳಿ ಕೇಳಿ ಬೇಸತ್ತ ಶ್ರೀಮತಿ ಶೆಟ್ಟಿ 2019 ಮೇ.11ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಹಣ ಕೇಳುವುದಕ್ಕೆ ಸ್ಯಾಮ್ಸನ್ ಮನೆಗೆ ತೆರಳಿದ್ದರು. ಮನೆಗೆ ಬಂದು ಕೇಳಿದ್ರೂ ಹಣ ಕೊಡದ್ದಕ್ಕೆ ಕೋಪಗೊಂಡು ಬೈದಿದ್ದ ಶ್ರೀಮತಿ ಶೆಟ್ಟಿ. ಈ ವೇಳೆ ಮರದ ತುಂಡಿನಿಂದ ಶ್ರೀಮತಿ ಶೆಟ್ಟಿ ತಲೆಗೆ ಬಲವಾಗಿ ಹೊಡೆದಿದ್ದ ಆರೋಪಿ. ಬಲವಾದ ಹೊಡೆತದಿಂದ ಪ್ರಜ್ಞಾಹೀನಳಾಗಿ ಬಿದ್ದಿದ್ದ ಶ್ರೀಮತಿ ಶೆಟ್ಟಿಯನ್ನು ಜೋನಸ್ ಪತ್ನಿ ವಿಕ್ಟೋರಿಯಾ  ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಶ್ರೀಮತಿ ಶೆಟ್ಟಿಯನ್ನು ಬಚ್ಚಲು ಮನೆಗೆ ಎಳೆದೊಯ್ದು ಮೈಮೇಲಿನ ಚಿನ್ನಾಭರಣ ದೋಚಿದ ಬಳಿಕ ಚಿನ್ನಾಭರಣಗಳನ್ನು ಮೂರನೇ ಆರೋಪಿ ರಾಜುಗೆ ನೀಡಿದ್ದರು ಕೊಲೆ ಆರೋಪಿಗಳು. 

ಕೊಪ್ಪಳ: ಶೀಲ ಶಂಕಿಸಿ ಪತ್ನಿ ಕೊಂದು ಅವಸರದಲ್ಲಿ ಮೃತದೇಹ ದಹನ..!

ಕೊಲೆ ಮಾಡಿದ ವಿಚಾರ ತಿಳಿದರೂ ರಾಜು ಚಿನ್ನಾಭರಣ ಪಡೆದುಕೊಂಡು ಆರೋಪಿಗಳಿಗೆ ಆಶ್ರಯ ನೀಡಿದ್ದರಿಂದ  ಬಂಧಿಸಲಾಗಿತ್ತು. ಬಳಿಕ ಜಾಮೀನು ಪಡೆದು ಬಿಡುಗಡೆಯಾಗಿದ್ದ. ಮತ್ತೆ ಬಂಧಿಸಿದ್ದ ಪೊಲೀಸರು.  ಶ್ರೀಮತಿ ಶೆಟ್ಟಿ ಹತ್ಯೆಯ ಇಡೀ ಪ್ರಕರಣದ ತನಿಖೆಯಾಗಿ  ಮಂಗಳೂರು ಪೂರ್ವ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಮಹೇಶ್‌ ಎಂ. ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಮೂವರು ಆರೋಪಿಗಳ ಕೃತ್ಯ ಸಾಬೀತಾಗಿರುವ ಹಿನ್ನೆಲೆ ತೀರ್ಪು ನೀಡಿದ ಕೋರ್ಟ್.  ಆರೋಪಿಗಳಿಗೆ ಯಾವ ಪ್ರಮಾಣದ ಶಿಕ್ಷೆ ವಿಧಿಸಬೇಕು ಎಂಬ ಬಗ್ಗೆ ನ್ಯಾಯಾಲಯ ಸೆ.17ರಂದು ಪ್ರಕಟಿಸಲಿದೆ.

click me!