ಜಗಳ ಮಾಡುವ ಭರದಲ್ಲಿ ಕೋಪದ ಕೈಗೆ ಬುದ್ಧಿ ಕೊಟ್ಟ ಪತ್ನಿಯೊಬ್ಬಳು ತನ್ನ ಗಂಡ ನಾಲಿಗೆಯನ್ನು ತುಂಡರಿಸಿ ತಾನೂ ಸಾಯಲು ಹೊರಟಿರುವ ಘಟನೆ ನಡೆದಿದೆ. ಆಗಿದ್ದೇನು?
ಗಂಡ-ಹೆಂಡಿರ ಜಗಳ ಉಂಡು ಮಲಗುವ ತನಕ ಎನ್ನುವ ನಾಣ್ಣುಡಿ ಇದೆ. ಆದರೆ ಈಗ ಗಂಡ ಹೆಂಡಿರ ಜಗಳ ಕೊರ್ಟ್ ಮೆಟ್ಟಿಲೇರುವ ತನಕ... ಡಿವೋರ್ಸ್ ಪಡೆಯುವ ತನಕ... ಆಗಿಬಿಟ್ಟಿದೆ. ಇದಾದರೂ ಪರವಾಗಿರಲಿಲ್ಲ. ಆದರೆ ಇಲ್ಲೊಂದು ಭಯಾನಕ ಘಟನೆ ನಡೆದೇ ಹೋಗಿದೆ. ಪತಿ-ಪತ್ನಿಯ ನಡುವೆ ನಡೆದಿರುವ ಜಗಳದಲ್ಲಿ ಗಂಡ ನಾಲಿಗೆಯನ್ನೇ ಕಳೆದುಕೊಳ್ಳಬೇಕಾಗಿ ಬಂದಿದೆ! ಕೋಪದ ರಭಸದಲ್ಲಿ ಗಂಡನ ಮೇಲೆ ಇಷ್ಟು ವರ್ಷಗಳವರೆಗೆ ಇದ್ದ ಸೇಡನ್ನೆಲ್ಲಾ ಒಟ್ಟಿಗೇ ತೀರಿಸಿಕೊಂಡವಳಂತೆ ಹೆಂಡತಿ ಗಂಡನ ನಾಲಿಗೆಯನ್ನೇ ಕಚ್ಚಿ ತುಂಡು ಮಾಡಿ ಹಾಕಿದ್ದಾಳೆ! ಸಿಟ್ಟು ವಿಪರೀತಕ್ಕೆ ಹೋದ ಸಂದರ್ಭದಲ್ಲಿ ದಂಪತಿ ಜಗಳ ಮಾಡಿಕೊಳ್ಳುವುದು, ಹೊಡೆದಾಡುವುದು ಬಹುತೇಕ ಕಡೆಗಳಲ್ಲಿ ಕಾಣಸಿಗುತ್ತದೆ. ಕೆಲವೊಮ್ಮೆ ಜಗಳ ಬೀದಿಯವರೆಗೂ ಬರುತ್ತದೆ. ಆದರೆ, ಇಲ್ಲಿ ನಡೆದದ್ದು ಬೇರೆಯದ್ದೇ ರೀತಿಯ ಅನಾಹುತ!
ಇಂಥದ್ದೊಂದು ಘಟನೆ ನಡೆದಿರುವುದು ರಾಜಸ್ಥಾನದ ಝಲವಾರಾ ಜಿಲ್ಲೆಯ ಬಕಾನಿ ಎನ್ನುವ ಗ್ರಾಮದಲ್ಲಿ. ಪತಿ ಮತ್ತು ಪತ್ನಿ ಯಾವುದೋ ಕ್ಷುಲ್ಲಕ ಕಾರಣಕ್ಕೆ ಆರಂಭಿಸಿದ್ದ ಜಗಳ ವಿಕೋಪಕ್ಕೆ ಹೋದ ಪರಿಣಾಮ, ಇದೇ ಸಿಟ್ಟಿನ ಭರದಲ್ಲಿ ಪತ್ನಿ ಗಂಡನ ನಾಲಿಗೆಯನ್ನೇ ಕಚ್ಚಿ ತುಂಡರಿಸಿದ್ದಾಳೆ. ಪೊಲೀಸರ ಪ್ರಕಾರ, ಈ ಘಟನೆ ನಡೆದಿರುವುದು ಇದೇ 20ರಂದು. ಈ ದಂಪತಿ ಯಾವುದೋ ವಿಷಯಕ್ಕೆ ಜಗಳವಾಡಿದ್ದರು. ಈ ಜಗಳ ತಾರಕಕ್ಕೇರಿ ಈ ಘಟನೆಯಾಗಿದೆ ಎಂದಿದ್ದಾರೆ. ಸದ್ಯ ಗಂಡನ ನಾಲಿಗೆ ಕಚ್ಚಿದ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
'ಕೊನೆಯ ಅಡುಗೆ ಮಾಡಿದ್ದೇನೆ, ಊಟ ಮಾಡಿ, ಜೀವನ ಸಾಕಾಗಿದೆ' ಎಂದು ಪತಿಗೆ ಹೇಳಿ ಜೀವಕ್ಕೆ ವಿದಾಯ ಹೇಳಿದ ಶಿಕ್ಷಕಿ!
ಘಟನೆಯ ವಿವರ: 25 ವರ್ಷದ ಬಕಾನಿ ಪಟ್ಟಣದ ಕನ್ಹಯ್ಯಾಲಾಲ್ ಸೈನ್ ಅಲ್ಲಿಯೇ ಸಮೀಪದ ಸುನೆಲ್ ಗ್ರಾಮದ ರವಿನಾ ಸೈನ್ ಎನ್ನುವವರನ್ನು ಮದುವೆಯಾಗಿದ್ದಾರೆ. ಇವರ ಮದುವೆಯಾಗಿ ಒಂದೂವರೆ ವರ್ಷವಾಗಿದೆಯಷ್ಟೇ. ಆದರೆ ಮದುವೆ ಆದಾಗಿನಿಂದಲೂ ಇವರು ಆಗಾಗ್ಗೆ ಜಗಳ ಆಡುತ್ತಲೇ ಇದ್ದಾರೆ ಎಂದು ನೆರೆಹೊರೆಯವರು ತಿಳಿಸಿದ್ದಾರೆ. ಆದರೆ, ಈ ಅದು ಹೆಚ್ಚಾಗಿ ಈ ಅನಾಹುತ ನಡೆದಿದೆ. ಕೋಪದಲ್ಲಿದ್ದ ಹೆಂಡತಿ ಗಂಡನ ನಾಲಿಗೆಯನ್ನೇ ಕಚ್ಚಿ ತುಂಡರಿಸಿದ್ದಾಳೆ. ಕೂಗಾಟ ಕೇಳಿ ಅಕ್ಕಪಕ್ಕದ ಮನೆಯವರು ಬಂದು ಕನ್ಹಯ್ಯಾಲಾಲ್ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದಾರೆ. ಕೊನೆಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದಾಗಿ. ಸದ್ಯ ಈ ನಾಲಿಗೆಯನ್ನು ಹೊಲಿದು ಸರಿ ಮಾಡಬಹುದು ಎಂದು ವೈದ್ಯರು ಹೇಳಿದ್ದಾರೆ ಎನ್ನಲಾಗಿದೆ.
ಘಟನೆ ಇಲ್ಲಿಗೇ ನಿಲ್ಲಲಿಲ್ಲ. ಕೋಪದ ಕೈಗೆ ಬುದ್ಧಿ ಕೊಟ್ಟ ಪತ್ನಿಗೆ ನಾಲಿಗೆ ಕಟ್ ಮಾಡಿದ ಬಳಿಕ ತಾನು ಮಾಡಿರುವುದು ತಪ್ಪು ಎಂದು ತಿಳಿಯಿತೋ ಗೊತ್ತಿಲ್ಲ, ಕೋಣೆಗೆ ಹೋಗಿ ಬಾಗಿಲು ಮುಚ್ಚಿ ಮಣಿಕಟ್ಟನ್ನು ಕತ್ತರಿಸಿ ಸಾಯಲು ರೆಡಿಯಾಗಿದ್ದಳು. ಕೊನೆಗೆ ಆಕೆಯನ್ನೂ ರಕ್ಷಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಕನ್ಹಯ್ಯಾಲಾಲ್ ಸಹೋದರ ದೂರು ನೀಡಿದ್ದಾರೆ. ವಿವಿಧ ಸೆಕ್ಷನ್ಗಳ ಅಡಿ ಕೇಸು ದಾಖಲಿಸಲಾಗಿದೆ.
ಸಂಬಂಧ ಹಾಳಾಗ್ಬಾರ್ದಾ? ಹಾಗಿದ್ರೆ ಇವ್ರನ್ನ ಮದ್ವೆಯಾಗಿ ಎಂದ ಟೆಕ್ಕಿ: ಏನ್ ತಲೆ ಗುರೂ ಅಂತಿರೋ ನೆಟ್ಟಿಗರು!