ಚನ್ನಪಟ್ಟಣ ತಾಲೂಕಿನ ತಿಟ್ಟಮಾರನಹಳ್ಳಿ ಬ್ರಿಡ್ಜ್ ಬಳಿಯ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆಯ ಸರ್ವಿಸ್ ರಸ್ತೆಯಲ್ಲಿ ಕಾರು ಮತ್ತೆ ಕ್ಯಾಂಟರ್ ನಡುವೆ ಅಪಘಾತವಾಗಿದ್ದು ಕಾರಿನಲ್ಲಿದ್ದ ಒಂದೇ ಕುಟುಂಬದ 3 ಜನ ಸಾವನಪ್ಪಿದ್ದಾರೆ.
ರಾಮನಗರ (ಮಾ.27): ಚನ್ನಪಟ್ಟಣ ತಾಲೂಕಿನ ತಿಟ್ಟಮಾರನಹಳ್ಳಿ ಬ್ರಿಡ್ಜ್ ಬಳಿಯ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆಯ ಸರ್ವಿಸ್ ರಸ್ತೆಯಲ್ಲಿ ಕಾರು ಮತ್ತೆ ಕ್ಯಾಂಟರ್ ನಡುವೆ ಅಪಘಾತವಾಗಿದ್ದು ಕಾರಿನಲ್ಲಿದ್ದ ಒಂದೇ ಕುಟುಂಬದ ಶಿವಪ್ರಕಾಶ್ ಬಿನ್ ಜಗದೀಶ್ 37 ವರ್ಷ, ಪುಟ್ಟಗೌರಮ್ಮ ಕೋಂ ಮೋಟೆಗೌಡ 72 ವರ್ಷ, ಶಿವರತ್ನ ಕೋಂ ಚಿನ್ನ ಮತ್ತು 50 ವರ್ಷ ಮೃತಪಟ್ಟಿದ್ದಾರೆ, ಕಾರಿನಲ್ಲಿದ್ದ ಉಳಿದ ನಟರಾಜು 42 ವರ್ಷ, ಹಾಗೂ ಸುಮಾ 36 ವರ್ಷ ಅವರಿಗೆ ಗಂಭೀರ ಗಾಯಗಳಾಗಿವೆ.
ಕಾರಿನಲ್ಲಿ ಇದ್ದ ಎಲ್ಲರೂ ಚನ್ನಪಟ್ಟಣ ತಾಲೂಕಿನ ಮಂಗಾಡಳ್ಳಿ ಗ್ರಾಮದವರು. ಕ್ಯಾಂಟರ್ ನ ಚಾಲಕನಾದ ನಾಗೇಶ್ ರವರಿಗೆ ಗಂಭೀರ ಗಾಯವಾಗಿದ್ದು ಬೆಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಪ್ರಸ್ತುತ ಮೂರು ಜನಗಳ ಮೃತದೇಹವು ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿದ್ದು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧವಾಗಿ ಚನ್ನಪಟ್ಟಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಜೆಪಿ ಸರ್ಕಾರವಿದ್ದಾಗ 17 ಮಂದಿ ಹನಿಟ್ರ್ಯಾಪ್: ಯತೀಂದ್ರ ಸಿದ್ದರಾಮಯ್ಯ
ಚಿತ್ರದುರ್ಗದ ಬಳಿ ಅಪಘಾತ: ಚಿತ್ರದುರ್ಗ ಹೊರವಲಯ ರಾಷ್ಟ್ರೀಯ ಹೆದ್ದಾರಿ 48ರ ಹೊಸ ಬೈಪಾಸ್ ತಮಟಕಲ್ಲು ಬಳಿ ಭಾನುವಾರ ನಿಂತಿದ್ದ ಲಾರಿಗೆ ಇನ್ನೋವಾ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಐವರು ಮೃತಪಟ್ಟು ಓರ್ವನಿಗೆ ಗಾಯಗಳಾಗಿವೆ. ಮೃತಪಟ್ಟವರನ್ನು ಬೆಂಗಳೂರು ಬಿಎಂಟಿಸಿ ನಿವೃತ್ತ ನೌಕರ ಜೆ.ಸಿ.ಶಾಂತಮೂರ್ತಿ(60), ವಿದ್ಯಾರಣ್ಯಪುರದ ಎನ್.ಎಸ್.ರುದ್ರಸ್ವಾಮಿ (69), ಶ್ರೀನಿವಾಸ್, ವಿದ್ಯಾರಣ್ಯಪುರದ ಚಂದ್ರಹಾಸ್ (67) ಹಾಗೂ ಮಲ್ಲಿಕಾರ್ಜುನ (70) ಎಂದು ಗುರುತಿಸಲಾಗಿದೆ.
ಡಿಕ್ಕಿಯಾದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು ಕುಳಿತವರ ಪೈಕಿ ಐವರು ಸ್ಥಳದಲ್ಲಿಯೇ ಅಸು ನೀಗಿದ್ದಾರೆ. ಮತ್ತೋರ್ವನಿಗೆ ಗಾಯಗಳಾಗಿದ್ದು ಚಿತ್ರದುರ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಾವಣಗೆರೆ ಕಡೆಯಿಂದ ಬೆಂಗಳೂರ ಕಡೆಗೆ ಬರುತ್ತಿದ್ದ ಇನ್ನೋವಾ ಕಾರು ತಮಟಕಲ್ಲು ಬಳಿ ಹೆದ್ದಾರಿ ಬದಿ ಮೆಕ್ಕೆಜೋಳ ತುಂಬಿಕೊಂಡು ನಿಂತಿದ್ದ ತಮಿಳುನಾಡು ಮೂಲದ ಲಾರಿಗೆ ಡಿಕ್ಕಿಯಾಗಿ ಅವಘಡ ಸಂಭವಿಸಿದೆ. ಉತ್ತರ ಕರ್ನಾಟಕ ಪ್ರವಾಸ ತೆರಳಿದ್ದ ಬಹುತೇಕರು ನಿವೃತ್ತ ನೌಕರರಾಗಿದ್ದು ಮುಂಜಾನೆಯ ವಾಯುವಿಹಾರಿಗಳಾಗಿದ್ದಾರೆ.
ಶಾಸಕರ ಅಮಾನತು ನನ್ನೊಬ್ಬನ ನಿರ್ಧಾರವಲ್ಲ: ಸ್ಪೀಕರ್ ಯು.ಟಿ.ಖಾದರ್ ಸಂದರ್ಶನ
ಅಪಘಾತದ ನಂತರ ಲಾರಿ ಚಾಲಕ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‍ಕುಮಾರ್ ಬಂಡಾರು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ, ಡಿವೈಎಸ್‍ಪಿ ದಿನಕರ್ ಸೇರಿದಂತೆ ಗ್ರಾಮಾಂತರ ಠಾಣೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.