
ಜೈಪುರ(ಜು.07) ಅಕ್ರಮ ಸಂಬಂಧಗಳ ಸ್ಟೋರಿ ಬಹುತೇಕ ಅಂತ್ಯವಾಗುವುದು ಕೊಲೆಯಲ್ಲೇ.. ಇಲ್ಲಿ ಸಹ ಹಾಗೆ ಆಗಿದೆ. ವಿದ್ಯುತ್ ಶಾಕ್ ನಿಂದ ಗಂಡ ಸತ್ತಿದ್ದಾನೆ ಎಂದು ಕೊಲೆ ಮಾಡಿ ನಂಬಿಸಿದ್ದ ಪತ್ನಿ ಕೊನೆಗೂ ತಪ್ಪು ಒಪ್ಪಿಕೊಂಡಿದ್ದಾಳೆ.
ರಾಜಸ್ಥಾನದ ಬಾರ್ಮರ್ ಜಿಲ್ಲೆಯ ದೀನಘರ್ ಪ್ರದೇಶದಲ್ಲಿ ನಡೆದ ಪ್ರಕರಣದ ಕತೆ ಹೇಳುತ್ತೇವೆ ಕೇಳಿ. ಪಪ್ಪು ದೇವಿ(30) ಎಂಬವಾಕೆ ಪತಿ ಮನರಾಮ್(35 )ನ ಹತ್ಯೆ ಮಾಡಿ ಕರೆಂಟ್ ಶಾಕ್ ಕತೆ ಕಟ್ಟಿದ್ದಾಳೆ.
ಪತ್ನಿ ಪಪ್ಪು ದೇವಿ ಇನ್ನೊಬ್ಬನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಈ ಸಂಗತಿ ಪತಿಗೆ ಗೊತ್ತಾತಾಗ ಬೆಚ್ಚಿಬಿದ್ದಿದ್ದಾಳೆ. ಅಂತಿಮವಾಗಿ ಕೊಲೆ ಮಾಡುವ ನಿರ್ಧಾರಕ್ಕೆ ಬಂದಿದ್ದಾಳೆ.
ಪ್ರಿಯತಮನೊಂದಿಗೆ ಕಾಮದಾಹ ತೀರಿಸಿಕೊಳ್ಳಲು ಗಂಡನ ರುಂಡ ಮುಂಡ ಬೇರೆ ಬೇರೆ
ಪತಿಯ ಕೊಲೆಗೆ ಪ್ರಿಯಕರನ ನೆರವು ಪಡೆದುಕೊಂಡ ಮಹಿಳೆ ಗಂಡನಿಗೆ ನಿದ್ರೆ ಮಾತ್ರೆ ಹಾಕಿದ್ದಾಳೆ. ಗಂಡ ಗಾಢವಾದ ನಿದ್ರೆಗೆ ಜಾರಿದ್ದನ್ನು ಖಚಿತ ಮಾಡಿಕೊಂಡು ಪ್ರಿಯಕರನ ಸಹಾಯದಿಂದ ಕಾಲಿಗೆ ವಿದ್ಯುತ್ ಶಾಕ್ ನೀಡಿ ಹತ್ಯೆ ಮಾಡಿದ್ದಾಳೆ.
ಕೊಲೆಯಾದ ಮನರಾಮ್ ಸಂಬಂಧಿಕರಿಗೆ ಜೂನ್ 15ರಂದು ಕರೆ ಮಾಡಿದ ಪಪ್ಪು ದೇವಿ 'ಕೂಡಲೇ ಬನ್ನಿ, ಗಂಡ ಹಾಸಿಗೆಯ ಮೇಲೆ ಬಿದ್ದಿದ್ದಾರೆ' ಎಂದಿದ್ದಾಳೆ. ಹೀಗೆ ಎಲ್ಲರೂ ಸಹೋದರನ ಮನೆಗೆ ಓಡಿದ್ದಾರೆ. ಅಲ್ಲಿ ಆತ ಕೊಲೆಯಾಗಿ ಬಿದ್ದಿದ್ದ. ಸಹೋದರನ ಕಾಲಿನಲ್ಲಿ ರಕ್ತ ಹರಿಯುತ್ತಿತ್ತು. ಕರೆಂಟ್ ಶಾಕ್ ಹೊಡೆದು ಹೀಗಾಗಿದೆ ಎಂದು ಪತ್ನಿ ನಾಟಕವಾಡುತ್ತಲೇ ಇದ್ದಳು.
ಅನುಮಾನಗೊಂಡ ಸಂಬಂಧಿಕರು ದೂರು ದಾಖಲಿಸಿದ್ದಾರೆ. ಮನರಾನ್ ಮೃತಪಟ್ಟ 12 ದಿನಗಳ ಬಳಿಕ ಮತ್ತೆ ಪಪ್ಪು ದೇವಿಯನ್ನು ಕುಟುಂಬಸ್ಥರು ಪ್ರಶ್ನೆ ಮಾಡಿದಾಗ ಆಕೆ ಸತ್ಯ ಒಪ್ಪಿಕೊಂಡಿದ್ದಾಳೆ. ದ್ದಾರೆ. ಈ ವೇಳೆ ಆಕೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ತನಗೆ ಹನುಮನ್ರಾಮ್ ಎಂಬಾತನ ಜೊತೆ ಅಕ್ರಮ ಸಂಬಂಧ ಇತ್ತು. ಇದು ಗಂಡನಿಗೆ ಗೊತ್ತಾದ್ದರಿಂದ ಕೊಲೆ ಮಾಡಿದೆ ಎಂದು ಒಪ್ಪಿಕೊಂಡಿದ್ದಾಳೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ