ಕೊರೋನಾ ಪಾಸಿಟಿವ್; ಆಸ್ಪತ್ರೆಯಿಂದ ಜಿಗಿದು ಪತ್ರಕರ್ತ ಆತ್ಮಹತ್ಯೆ

By Suvarna News  |  First Published Jul 6, 2020, 11:21 PM IST

ಕೊರೋನಾ ಸೋಂಕಿತ ಪತ್ರಕರ್ತ ಆತ್ಮಹತ್ಯೆ/ ದೆಹಲಿ ಏಮ್ಸ್ ನಿಂದ ಜಿಗಿದ ಕೊರೋನಾ ಸೋಂಕಿತ ಪತ್ರಕರ್ತ/ ಖಿನ್ನತೆಗೆ ಒಳಗಾಗಿದ್ದರು/ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ


ನವದೆಹಲಿ (ಜು. 06) ಕೊರೋನಾ ಸೋಂಕಿತ, ಪ್ರಮುಖ ಹಿಂದಿ ದಿನಪತ್ರಿಕೆಯೊಂದರ 37 ವರ್ಷದ ಪತ್ರಕರ್ತರೊಬ್ಬರು ಆಸ್ಪತ್ರೆ ಮೇಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದೆಹಲಿಯ ಏಮ್ಸ್ ಆಸ್ಪತ್ರೆಯ ನಾಲ್ಕನೆ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಆತ್ಮಹತ್ಯೆಗೆ ಯತ್ನಿಸಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಏಮ್ಸ್ ಐಸಿಯುಗೆ ದಾಖಲಿಸಿದರೂ ಪ್ರಯೋಜನವಾಗಿಲ್ಲ.

Tap to resize

Latest Videos

ರಾಘವೇಂದ್ರ ಬ್ಯಾಂಕ್ ವಾಸುದೇವ ಮಯ್ಯ ಆತ್ಮಹತ್ಯೆ

ಆತ್ಮಹತ್ಯೆ  ಮಾಡಿಕೊಂಡ ಪತ್ರಕರ್ತಗೆ ಕೊರೋನಾ ಪಾಸಿಟಿವ್ ಇತ್ತು. ಕೆಲ ದಿನಗಳ ಹಿಂದೆ ಮೆದುಳಿನ ಚಿಕಿತ್ಸೆಗೂ ಒಳಗಾಗಿದ್ದರು. ಕೊರೋನಾ ಕಾಣಿಸಿಕೊಂಡ ಮೇಲೆ ಆಸ್ಪತ್ರೆಗೆ ದಾಖಲಾಗಿದ್ದರು.  ಖಿನ್ನತೆಗೆ ಒಳಗಾಗಿದ್ದೇ ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗಿದೆ.

ಆತ್ಮಹತ್ಯೆ ಮಾಡಿಕೊಂಡ ತರುಣ್ ಸಿಸೋಡಿಯಾ ಹಿಂದಿ ದೈನಿಕವೊಂದರಲ್ಲಿ ಕೆಲಸ ಮಾಡುತ್ತಿದ್ದು ಈಶಾನ್ಯ ದೆಹಲಿಯಲ್ಲಿ ವಾಸವಿದ್ದರು.

click me!