ಬಿಬಿಎಂಪಿ ನಿರ್ಲಕ್ಷ್ಯದಿಂದ ಬೆಂಗಳೂರು ನಗರಾದ್ಯಂತ ಎಲ್ಲೆಂದರಲ್ಲೆ ಚರಂಡಿ ಬಾಯಿತೆರೆದುಕೊಂಡಿದ್ದು ವಾಹನ ಸವಾರರಿಗೆ ಮೃತ್ಯಕೂಪವಾಗಿವೆ. ದಿನನಿತ್ಯ ರಸ್ತೆ ಗುಂಡಿ, ಚರಂಡಿಗೆ ವಾಹನ ಸವಾರರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ನಿನ್ನೆ ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಪರಿಣಾಮ ಯುವತಿ ಮೃತಪಟ್ಟ ಘಟನೆ ನಡೆದಿದೆ. ಚರಂಡಿ, ರಸ್ತೆ ಗುಂಡಿ ಅವ್ಯವಸ್ಥೆಗೆ ಇನ್ನೆಷ್ಟು ಬಲಿ ಬೇಕು?
ಬೆಂಗಳೂರು (ಸೆ.12) : ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಪರಿಣಾಮ ಯುವತಿ ಮೃತಪಟ್ಟು, ಹಿಂಬದಿ ಸವಾರ ಗಾಯಗೊಂಡಿರುವ ಘಟನೆ ಬಾಣಸವಾಡಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಎಚ್‌ಬಿಆರ್ ಲೇಔಟ್ ನಿವಾಸಿ ಸವರಳು ತಾರಾ ಬಡಾಯಿಕ್(23) ಮೃತ ಯುವತಿ. ಹಿಂಬದಿ ಸವಾರ ದಿಲೀಪ್(38) ಸಣ್ಣ ಗಾಯಗಳಾಗಿದೆ. ಶನಿವಾರ ತಡರಾತ್ರಿ 12.30ರ ಸುಮಾರಿಗೆ ಸಾರಾಯಿಪಾಳ್ಯ ಕಡೆಯಿಂದ ಹೆಣ್ಣೂರು ಕಡೆಗೆ ಹೋಗುವಾಗ ಮಾರ್ಗ ಮಧ್ಯೆ ಈ ದುರ್ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.\ಬೆಂಗಳೂರಿನಲ್ಲಿ
ಮತ್ತೊಂದು ದುರಂತ:ತೆರೆದ ಚರಂಡಿಗೆ ಯುವತಿ ಬಲಿ!
ನೇಪಾಳ(Nepal) ಮೂಲದ ತಾರಾ ಬಡಾಯಿಕ್(Tara Badaik) ಕೆಲ ವರ್ಷಗಳಿಂದ ನಗರದ ಎಚ್‌ಬಿಆರ್ ಲೇಔಟ್(HBR Layout)ನಲ್ಲಿ ನೆಲೆಸಿದ್ದು, ಅಡುಗೆ ವೃತ್ತಿ ಮಾಡಿಕೊಂಡಿದ್ದಳು. ಶನಿವಾರ ರಾತ್ರಿ ಡಿಯೋದಲ್ಲಿ ಸ್ನೇಹಿತ ದಿಲೀಪ್(Dileep)ನನ್ನು ಹಿಂಬದಿ ಕೂರಿಸಿ ಕೊಂಡು ಎಚ್‌ಬಿಆರ್ ಲೇಔಟ್ ಮುಖ್ಯರಸ್ತೆಯಲ್ಲಿ ಸಾರಾಯಿ ಪಾಳ್ಯ (Saraipalya)ಕಡೆಯಿಂದ ಹೆಣ್ಣೂರು(Henooru) ಕಡೆಗೆ ಹೊರಟ್ಟಿದ್ದಳು. ಮಾರ್ಗ ಮಧ್ಯೆ ಖಾಸಾ ಗ್ರ್ಯಾಂಡ್ ಬರಾಲಾ ಆಪಾರ್ಚ್‌ಮೆಂಟ್ ಬಳಿ ನಿಯಂತ್ರಣ ತಪ್ಪಿದ ದ್ವಿಚಕ್ರ ವಾಹನ ರಸ್ತೆ ಪಕ್ಕದ ಚರಂಡಿಗೆ ಬಿದ್ದಿದೆ. ಈ ವೇಳೆ ತಾರಾ ಬಡಾಯಿಕ್ ತಲೆ ಹಾಗೂ ತೊಡೆಗೆ ಗಂಭೀರ ಪೆಟ್ಟಾಗಿ ತೀವ್ರ ರಕ್ತಸ್ರಾವವಾಗಿದೆ. ಕೂಡಲೇ ಸ್ಥಳೀಯರು ನೆರವಿಗೆ ಧಾವಿಸಿ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ತಾರಾ ಬಡಾಯಿಕ್ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅತಿವೇಗವೇ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ತನಿಖೆ ನಂತರ ಅಪಘಾತಕ್ಕೆ ನಿಖರ ಕಾರಣ ತಿಳಿದು ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಬಾಣಸವಾಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹದಗೆಟ್ಟರಸ್ತೆ, ಚರಂಡಿ ದುರಸ್ತಿ ಮಾಡದಿದ್ದರೆ ಮೂರ್ನಾಡು ಬಂದ್: ಗ್ರಾಮಸ್ಥರ ಎಚ್ಚರಿಕೆ