ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗುತ್ತಿವೆ. ಇದರೊಂದಿಗೆ ದಿನನಿತ್ಯ ವಾಹನಗಳ ಚಾಲನೆ ಹೆಚ್ಚಾದಂತೆ ಅಪಘಾತಗಳು ಕೂಡ ಹೆಚ್ಚುತ್ತಿದೆ ಎಂದು ಎಸ್‌ಪಿ ಆರ್.ಚೇತನ್ ಆತಂಕಕಾರಿ ಎಂದರು.
ಸರಗೂರು (ಸೆ.12) : ಸರಗೂರು ಪಟ್ಟಣದಲ್ಲಿ ನೂತನವಾಗಿ ಆರಂಭಿಸಿದ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿಯನ್ನು ಎಸ್ಪಿ ಆರ್. ಚೇತನ್ ಉದ್ಘಾಟಿಸಿದರು. ಭಾಗದ ಜನರ ತಮ್ಮ ಸಮಸ್ಯೆ ತಿಳಿಸಲು ವೃತ್ತ ನಿರೀಕ್ಷಕರನ್ನು ಭೇಟಿ ಮಾಡಲು ಕಾಡಂಚಿನ ಪ್ರದೇಶಗಳಿಂದ ಎಚ್.ಡಿ. ಕೋಟೆಯಲ್ಲಿನ ವೃತ್ತ ನಿರೀಕ್ಷಕರ ಕಚೇರಿಗೆ ಬರಬೇಕಿತ್ತು. ಇದನ್ನು ತಪ್ಪಿಸಲು ಸರಗೂರು ತಾಲೂಕು ಅತೀ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದ್ದು ಈ ಭಾಗದ ಸಾರ್ವಜನಿಕರ ಅನುಕೂಲಕ್ಕಾಗಿ ಸರಗೂರು ಪಟ್ಟಣದಲ್ಲಿಯೇ ಪ್ರತ್ಯೇಕ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ ಸ್ಥಾಪಿಸಲಾಗಿದೆ ಎಂದರು.
ಕರ್ನಾಟಕದಲ್ಲಿ ಹೊಸದಾಗಿ ಸೈಬರ್ ಪಾಲಿಸಿ ಜಾರಿಗೆ ಸಿದ್ಧತೆ: ಸಿಎಂ ಬೊಮ್ಮಾಯಿ
undefined
ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗುತ್ತಿವೆ. ಇದರೊಂದಿಗೆ ದಿನನಿತ್ಯ ವಾಹನಗಳ ಚಾಲನೆ ಹೆಚ್ಚಾದಂತೆ ಅಪಘಾತಗಳು ಕೂಡ ಹೆಚ್ಚುತ್ತಿದೆ. ಆದ್ದರಿಂದ ನಾಲ್ಕು ಚಕ್ರದ ವಾಹನ ಚಾಲಕರು ವಾಹನಗಳನ್ನು ಚಾಲನೆ ಮಾಡುವ ವೇಳೆ, ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ವಾಹನಗಳನ್ನು ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ನಿಲ್ಲಿಸದೆ ತಮಗೆ ಸೂಚಿಸಿರುವ ಸ್ಥಳದಲ್ಲೇ ನಿಲ್ಲಿಸಬೇಕು ಎಂದು ಅವರು ಹೇಳಿದರು.
ಹೆಚ್ಚಿನ ಪ್ರಯಾಣಿಕರನ್ನು ಕೊಂಡೊಯ್ಯಬಾರದು ಹಾಗೂ ಇನ್ನಿತರ ರಸ್ತೆ ಸುರಕ್ಷತೆಯ ಕ್ರಮ ಅನುಸರಿಸಬೇಕು. ಕೂಡಲೇ ವಾಹನಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಿ ಇದರಿಂದ ಅಪಘಾತದ ಸಮಯದಲ್ಲಿ ಅನುಕೂಲವಾಗುತ್ತದೆ. ದ್ವಿಚಕ್ರ ವಾಹನ ಸವಾರರು ಕೂಡ ತಮ್ಮ ವಾಹನಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಬೇಕು ಹಾಗೂ ಹೆಲ್ಮೆಟ್‌ಗಳನ್ನು ಕಡ್ಡಾಯವಾಗಿ ಧರಿಸಬೇಕು ಎಂದು ಅವರು ಮನವಿ ಮಾಡಿದರು.
ವೃತ್ತ ನಿರೀಕ್ಷಕ ಎನ್. ಆನಂದ್ ಮಾತನಾಡಿ, ಸರಗೂರು ವ್ಯಾಪ್ತಿಗೆ 130 ಗ್ರಾಮಗಳು, 52 ಹಾಡಿಗಳು ಬರಲಿವೆ. ಈ ಸಂಬಂಧ ಸರಗೂರು ಪೊಲೀಸ್ ಠಾಣೆ, ಅಂತರಸಂತೆ ಪೊಲೀಸ್ ಠಾಣೆ, ಬೀಚನಹಳ್ಳಿ ಪೊಲೀಸ್ ಠಾಣೆ ಕೂಡ ಒಳಪಡಲಿದೆ. ನಮ್ಮೊಂದಿಗೆ ಮೂವರು ಆರಕ್ಷಕ ಉಪನಿರೀಕ್ಷಕರು, 67 ಮಂದಿ ಪೊಲೀಸ್ ಸಿಬ್ಬಂದಿ ಇರುತ್ತಾರೆ. ಎಸ್ಪಿ ಆರ್. ಚೇತನ್ ಅವರ ನೇತೃತ್ವದಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸುತ್ತೇವೆ ಎಂದರು. ಗ್ರಾಮೀಣ ಜನತೆ ತಮ್ಮ ಮೊಬೈಲ್‌ಗೆ ಬರುವ ಒಟಿಪಿ ಹೇಳುವ ಮೂಲಕ ಮೋಸ ಹೋಗುತ್ತಿದ್ದಾರೆ. ಇದರ ಜೊತೆಗೆ ಕೆಲಸ ಕೊಡಿಸುವುದಾಗಿ ಬಿಂಬಿಸುವ ಆನ್‌ಲೈನ್ ಜಾಲದ ಮೋಸಕ್ಕೆ ಸಿಲುಕಿ ನಲಗುತ್ತಿದ್ದಾರೆ. ಯಾರೆ ಕೇಳಿದರು ವೈಯಕ್ತಿಕ ವಿಚಾರ ಹಂಚಿಕೊಳ್ಳಬಾರದು ಎಂದು ಅವರು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಹುಣಸೂರು ಡಿವೈಎಸ್ಪಿ ಪಿ. ರವಿಪ್ರಸಾದ್, ಬಿಜೆಪಿ ಮುಖಂಡ ಎಂ. ಅಪ್ಪಣ್ಣ, ಎಸ್‌ಐಗಳಾದ ಶ್ರವಣದಾಸರೆಡ್ಡಿ, ಜಯಪ್ರಕಾಶ್, ಜೆಡಿಎಸ್ ಯುವ ಮುಖಂಡ ಬೀಚನಹಳ್ಳಿ ಜಯಪ್ರಕಾಶ್, ಪಪಂ ಅಧ್ಯಕ್ಷೆ ರಾಧಿಕಾ ಶ್ರೀನಾಥ…, ಉಪಾಧ್ಯಕ್ಷ ವಿನಾಯಕ ಪ್ರಸಾದ್, ಡಾ. ಶರತ್, ಪಪಂ ಮುಖ್ಯಾಧಿಕಾರಿ ಬಿ.ಜಿ. ಸತೀಶ್, ಜಿಪಂ ಸದಸ್ಯ ವೆಂಕಟಸ್ವಾಮಿ, ಪಿ. ರವಿ, ಪಪಂ ಸದಸ್ಯರಾದ ಶ್ರೀನಿವಾಸ್, ಎಸ್.ಎಲ್. ರಾಜಣ್ಣ, ನೂರಾಳಸ್ವಾಮಿ, ಚಲುವಕೃಷ್ಣ, ಶಿವಕುಮಾರ್ (ವೀರೇಶ್), ವರ್ತಕರ ಸಂಘದ ಅಧ್ಯಕ್ಷ ಎಸ್.ಎಂ. ಶ್ರೀನಿವಾಸ್, ನಾಯಕ ಸಮಾಜದ ಶಂಬುಲಿಂಗನಾಯಕ, ಮುಖಂಡ ನವೀನ್ ಕುಮಾರ್, ಬೇಕ್ರಿ ಸ್ವಾಮಿ, ಬುದ್ಧಪ್ರಕಾಶ್, ತಾಪಂ ಮಾಜಿ ಅಧ್ಯಕ್ಷ ಸಿ.ಕೆ. ಗಿರೀಶ್, ತಾಲೂಕು ಬಿಜೆಪಿ ಅಧ್ಯಕ್ಷ ಹಂಚೀಪುರ ಗುರುಸ್ವಾಮಿ, ಯೂತ್ ಬಾP್ಲ… ಕಾಂಗ್ರೆಸ್ ಅಧ್ಯಕ್ಷ ಕಂದೇಗಾಲ ಶಿವರಾಜು, ಬಾಬು ಜಗಜೀವನರಾಂ ವಿಚಾರ ವೇದಿಕೆ ಅಧ್ಯಕ್ಷ ಕಲ್ಲಂಬಾಳು ನಾಗಣ್ಣ, ಸತೀಶ್, ಇಟ್ನ ರಾಜಣ್ಣ, ಸಾಗರೆ ಮಹೇಂದ್ರ, ಹಾದನೂರು ಪ್ರಕಾಶ್, ರಾಜೇಶ್, ಸರಗೂರು ಕೃಷ್ಣ, ದಾಸಪ್ಪ, ಶಿವರಾಜು ಅರಸು, ಮಹದೇವಸ್ವಾಮಿ, ಹೊವಿನ ಕೊಳದ ರಮೇಶ್, ಮಹೇಶ್, ಸಿದ್ದರಾಜು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ಮುಖಂಡರು ಇದ್ದರು.
ಸೆಕ್ಸ್ ಮೆಸೇಜ್ ಬರುತ್ತೆ ಹುಷಾರ್; ಅಪ್ಪಿತಪ್ಪಿ ರಿಪ್ಲೈ ಮಾಡಿದ್ರೆ ನಿಮ್ಮ ಮಾನ ಮೂರು ಕಾಸಿಗೆ ಹರಾಜು!
ಈ ಭಾಗದ ಜನರು ಸಮಸ್ಯೆಯಾದಗ ಎಚ್.ಡಿ. ಕೋಟೆಗೆ ಹೋಗಬೇಕಿತ್ತು. ಆದರೆ ಈಗ ಆ ಸಮಸ್ಯೆ ತಪ್ಪಿದೆ. ಏನೇ ಸಮಸ್ಯೆಯಾದರು ಕೂಡಲೇ ಇಲಾಖೆಯ ಗಮನಕ್ಕೆ ತರಲು ಸಹಕಾರಿಯಾಗಲಿದೆ. ಕಾನೂನು ಬಾಹಿರ ಘಟನೆ ಕಂಡಬಂದಲ್ಲಿ ಸಾರ್ವಜನಿಕರು ಕೂಡಲೇ ಇಲಾಖೆಯ ಗಮನಕ್ಕೆ ತರಬೇಕು.
- ಆನಂದ್, ವೃತ್ತ ನಿರೀಕ್ಷಕ, ಸರಗೂರು ವೃತ್ತ.
ಲಿಂಕ್ ಕಳುಹಿಸಿ 2 ಲಕ್ಷ ಎಗರಿಸಿದ ಸೈಬರ್ ಕಳ್ಳರು:
ಸ್ನೇಹಿತೆಯ ಹೆಸರಿನಲ್ಲಿ ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಬರಲಿದೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಲಿಂಕ್ ಕಳುಹಿಸಿ .1.90 ಲಕ್ಷ ಪಡೆದು ವಂಚಿಸಿರುವ ಸಂಬಂಧ ಕೇಂದ್ರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ವಿಲ್ಸನ್‌ಗಾರ್ಡನ್ ನಿವಾಸಿ ವೇಮು ಶ್ರೀದೇವಿ (26) ಹಣ ಕಳೆದುಕೊಂಡವರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಂಚಕರ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ.
ಇತ್ತೀಚೆಗೆ ಸ್ನೇಹಿತೆಯ ಇನ್‌ಸ್ಟಾಗ್ರಾಮ್ ಖಾತೆಯಿಂದ ದೂರುದಾರ ಯುವತಿ ಗೆ ಲಿಂಕ್‌ವೊಂದು ಬಂದಿದೆ. ಈ ಲಿಂಕ್ ತೆರೆದು ನೋಡಿದಾಗ ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಬರಲಿದೆ ಎಂಬ ಸಂದೇಶವಿತ್ತು. ಇದನ್ನು ನಂಬಿದ ಯುವತಿ ಆ ಲಿಂಕ್‌ನಲ್ಲಿ ನೀಡಲಾಗಿದ್ದ ಬ್ಯಾಂಕ್ ಖಾತೆಗೆ .1.90 ಲಕ್ಷ ವರ್ಗಾಯಿಸಿದ್ದಾರೆ. ಆದರೆ ನಂತರದ ದಿನಗಳಲ್ಲಿ ಯಾವುದೇ ಲಾಭಾಂಶ ಬಂದಿಲ್ಲ. ಈ ಬಗ್ಗೆ ಅನುಮಾನಗೊಂಡು ಸ್ನೇಹಿತೆಯನ್ನು ಸಂಪರ್ಕಿಸಿದಾಗ, ಆಕೆಯ ಇನ್‌ಸ್ಟಾಗ್ರಾಮ್ ಖಾತೆ ಹ್ಯಾಕ್ ಆಗಿರುವುದು ಗೊತ್ತಾಗಿದೆ. ಬಳಿಕ ಇದು ಸೈಬರ್ ವಂಚಕರ ಕೃತ್ಯ ಎಂಬುದು ಗೊತ್ತಾಗಿ ಸೈಬರ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.