ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದ ಬೈಕ್‌: ದಂಪತಿ ಸ್ಥಳದಲ್ಲೇ ಸಾವು!

Published : Apr 25, 2023, 04:34 PM ISTUpdated : Apr 25, 2023, 04:45 PM IST
ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದ ಬೈಕ್‌: ದಂಪತಿ ಸ್ಥಳದಲ್ಲೇ ಸಾವು!

ಸಾರಾಂಶ

ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಬೈಕ್‌ ಮುಖಾಮುಖಿ ಡಿಕ್ಕಿಯಾಗಿ ದಂಪತಿ ಸ್ಥಳದಲ್ಲಿಯೇ ಬಿದ್ದು ಸಾವನ್ನಪ್ಪಿರುವ ದುರ್ಘಟನೆ ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಅಂಕುಶದೊಡ್ಡಿ ಗ್ರಾಮದ ಬಳಿ ನಡೆದಿದೆ. 

ರಾಯಚೂರು (ಏ.25): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಬಸ್‌ ಹಾಗೂ ಬೈಕ್‌ ಮುಖಾಮುಖಿ ಡಿಕ್ಕಿಯಾಗಿ ದಂಪತಿ ಸ್ಥಳದಲ್ಲಿಯೇ ಬಿದ್ದು ಸಾವನ್ನಪ್ಪಿರುವ ದುರ್ಘಟನೆ ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಅಂಕುಶದೊಡ್ಡಿ ಗ್ರಾಮದ ಬಳಿ ನಡೆದಿದೆ. 

ಬಳ್ಳಾರಿಯಿಂದ ಕಲಬುರಗಿಗೆ ಹೋಗುತ್ತಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಇಲಾಖೆಯ ಬಸ್‌ಗೆ ಇಂದು ಮಧ್ಯಾಹ್ನದ ವೇಳೆ ಬೈಕ್‌ನಲ್ಲಿ ಹೋಗುವ ದಂಪತಿ ಡಿಕ್ಕಿ ಹೊಡೆದಿದ್ದಾರೆ. ಇನ್ನು ಬಸ್‌ಗೆ ಡಿಕ್ಕಿ ಹೊಡೆದ ಬೆನ್ನಲ್ಲೇ ತೀವ್ರ ಗಾಯಗೊಂಡ ರಸ್ತೆಗೆ ಬಿದ್ದ ದಂಪತಿ ಸ್ಥಳದಲ್ಲಿಯೇ ತೀವ್ರ ರಕ್ತಸ್ರಾವ ಉಂಟಾಗಿ ಸಾವನ್ನಪ್ಪಿದ್ದಾರೆ. ಈ ಘಟನೆ ನಡೆಯುತ್ತಿದ್ದಂತೆಯೇ ಬಸ್‌ನ ಚಾಲಕ ಹಾಗೂ ನಿರ್ವಾಹಕರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ನಂತರ, ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತ ದೇಹಗಳನ್ನು ಮಸ್ಕಿ ತಾಲೂಕು ಆಸ್ಪತ್ರೆಗೆ ರವಾನೆ ಮಾಡದ್ದಾರೆ. 

ಮಂಡ್ಯದ ಕಾವೇರಿ ನಾಲೆಗೆ ಈಜಲು ಹೋಗಿದ್ದ ಬೆಂಗಳೂರಿನ ಒಂದೇ ಕುಟುಂಬದ ಐವರ ಸಾವು

ಮೃತರನ್ನ ಲಕ್ಷ್ಮಿ (26), ಅಮರೇಗೌಡ ( 30) ಎಂದು ಗುರುತಿಸಲಾಗಿದೆ. ಮೃತ ದಂಪತಿಯನ್ನು ಸಿಂಧನೂರು ತಾಲೂಕಿನ ರತ್ನಾಪುರ ಗ್ರಾಮದವರಾಗಿದ್ದಾರೆ. ಇನ್ನು ಸಾರಿಗೆ ಇಲಾಖೆಯ ಬಸ್‌ ಅನ್ನು ನಿಲ್ಲಿಸಿದ್ದು, ಬಸ್‌ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಘಟನೆಯ ಬಗ್ಗೆ ಪರಿಶೀಲನೆ ಮಾಡುತ್ತಿದ್ದು, ಘಟನೆಯ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಘಟನೆ ಕುರಿತು ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. 

ದಾಂಡೇಲಿ ಸಂಡೇ ಮಾರ್ಕೆಟ್‌ನಲ್ಲಿ ಬೆಂಕಿ: ಉತ್ತರಕ‌ನ್ನಡ (ಏ.25): ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ನಗರದ ಸಂಡೇ ಮಾರ್ಕೆಟಿನಲ್ಲಿ ಬೆಂಕಿ ಅನಾಹುತ ನಡೆದಿದೆ. ನಿನ್ನೆ ತಡರಾತ್ರಿ‌ ಸುಮಾರು 1 ಗಂಟೆಗೆ ಸಂಡೆ ಮಾರ್ಕೆಟಿನ ಅಂಗಡಿಯೊಂದರಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿತ್ತು. ಶಾರ್ಟ್ ಸರ್ಕ್ಯೂಟ್‌ನಿಂದ ಅಂಗಡಿಯೊಂದರಲ್ಲಿ  ಬೆಂಕಿ ಕಾಣಿಸಿಕೊಂಡು ಉಳಿದ ಅಂಗಡಿಗಳಿಗೂ ಹಬ್ಬಿತ್ತು. ಘಟನೆಯಲ್ಲಿ ಸ್ಟೇಷನರಿ, ಹಣ್ಣು ಹಂಪಲು ಮುಂತಾದ ಅಂಗಡಿಗಳು ಬೆಂಕಿಹಾಹುತಿ ಆಗಿವೆ. ಹೀನಾ, ಮೊಯ್ನುದ್ದೀನ್, ಮೆಹಬೂಬ, ಸವಿತಾ ಮತ್ತು ಬಸವರಾಜ ಎಂಬವರಿಗೆ ಸೇರಿದ ಅಂಗಡಿಗಳಿಗೆ ಬೆಂಕಿಬಿದ್ದಿದೆ.

ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ಮತ್ತೊಂದು ಭೀಕರ ಅಪಘಾತ: ಟಿಪ್ಪರ್‌ ಹರಿದು ಬೈಕ್‌ ಸವಾರ 

ಯಾವುದೇ ಪರಿಹಾರ ಸಿಗೊಲ್ಲ:  ಇನ್ನು ಅಕ್ಕ ಪಕ್ಕದ ಇನ್ನೂ ನಾಲ್ಕು ಅಂಗಡಿಗಳಿಗೂ ಬೆಂಕಿ ಹಬ್ಬುವ ಸಾಧ್ಯತೆಗಳಿತ್ತು. ಆದರೆ, ಅಗ್ನಿಶಾಮಕದಳ‌ ಹಾಗೂ ಸ್ಥಳೀಯರು ಬೆಂಕಿ‌‌ ನಂದಿಸಿದ್ದರಿಂದ ತಪ್ಪಿದ ಭಾರೀ ಅವಘಡ ಸಂಭವಿಸುವುದು ತಪ್ಪಿದೆ. ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಆದರೆ, ಇದಕ್ಕೆ ಶಾರ್ಟ್‌ ಸರ್ಕ್ಯೂಟ್‌ ಅಲ್ಲದೇ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆಯೇ ಎಂಬ ಅನುಮಾನಗಳು ಕೂಡ ವ್ಯಕ್ತವಾಗಿವೆ. ಆದರೆ, ಮಳಿಗೆ ಮಾಲೀಕರು ಯಾವುದೇ ವಿಮೆಯನ್ನು ಹೊಂದಿರದ ಹಿನ್ನೆಲೆಯಲ್ಲಿ ಅಂಗಡಿಗೆ ಹಾಕಿದ್ದ ಎಲ್ಲ ಬಂಡವಾಲವೂ ಕೂಡ ಬೆಂಕಿಯಲ್ಲಿ ಹೋಮ ಮಾಡಿದಂತಾಗಿದೆ ಎಮದು ಮಳಿಗೆ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!