ಮಂಡ್ಯದ ಕಾವೇರಿ ನಾಲೆಗೆ ಈಜಲು ಹೋಗಿದ್ದ ಬೆಂಗಳೂರಿನ ಒಂದೇ ಕುಟುಂಬದ ಐವರ ಸಾವು

By Sathish Kumar KHFirst Published Apr 25, 2023, 2:48 PM IST
Highlights

ಮಂಡ್ಯದ ಬಸರಾಳು ಹೋಬಳಿಯ ದೊಡ್ಡಕೊತ್ತಗೆರೆಯ ಕಾಲುವೆಯಲ್ಲಿ ಈಜಲು ಹೋಗಿದ್ದ ಒಂದೇ ಕಟುಟುಂಬದ ಐವರು ಸಾವನ್ನಪ್ಪಿದ ದುರ್ಘಟನೆ ಸಂಭವಿಸಿದೆ. 

ಮಂಡ್ಯ (ಏ.25): ಮಂಡ್ಯದ ಬಸರಾಳು ಹೋಬಳಿಯ ದೊಡ್ಡಕೊತ್ತಗೆರೆಯ ಕಾಲುವೆಯಲ್ಲಿ ಈಜಲು ಹೋಗಿದ್ದ ಒಂದೇ ಕಟುಟುಂಬದ ಐವರು ಸಾವನ್ನಪ್ಪಿದ ದುರ್ಘಟನೆ ಸಂಭವಿಸಿದೆ. 

ಕಾಲುವೆಯಲ್ಲಿ ಈಜಲು ಹೋದ ಐವರು ನೀರು ಪಾಲಾಗಿದ್ದಾರೆ. ಮಂಡ್ಯದ ಬಸರಾಳು ಸಮೀಪದ ದೊಡ್ಡಕೊತ್ತಗೆರೆಯಲ್ಲಿ ಘಟನೆ ನಡೆದಿದೆ. ಬೆಂಗಳೂರಿನ ನೀಲಸಂದ್ರ ಮೂಲದ ಐವರು ನೀರು ಪಾಲಾಗಿರುವ ಘಟನೆ ನಡೆದಿದೆ. ಮಂಡ್ಯದ ಜಿಲ್ಲೆಯಲ್ಲಿದ್ದ ನೆಂಟರ ಮನೆಗೆ ಬಂದಿದ್ದ ಐವರು ಈಜಲು ಕಾಲುವೆಗೆ ತೆರಳಿದ್ದಾರೆ. ಈಜಲು ಕಾಲುವೆಗೆ ಧುಮುಕಿದ ವೇಳೆ ಅವಘಡ ಸಂಭವಿಸಿದೆ. ಅಗ್ನಿಶಾಮಕ ದಳ‌ ಸಿಬ್ಬಂದಿ ಮೂವರ ಮೃತ ದೇಹವನ್ನು ಹೊರ ತೆಗೆದಿದೆ. ಇನ್ನಿಬ್ಬರ ಮೃತ ದೇಹಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ. ಬಸರಾಳು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

Latest Videos

ಬೆಂಗಳೂರು ಅಂಗಡಿ ಮಾಲೀಕರೇ ಹುಷಾರು: ನೀರಿನ ಬಾಟಲಿಗೆ 2 ರೂ. ಹೆಚ್ಚು ಕೇಳಿದ್ದಕ್ಕೆ ಬೇಕರಿಯೇ ಧ್ವಂಸ!

ಬೇಸಿಗೆ ಹಿನ್ನೆಲೆಯಲ್ಲಿ ಮಕ್ಕಳ ಶಾಲೆಗೆ ರಜೆ ಇದ್ದು, ಮಂಡ್ಯ ಜಿಲ್ಲೆಯ ನೆಂಟರಿಷ್ಟರ ಮೆನೆಗೆ ಹೋಗಿದ್ದರು. ಆದರೆ, ಈ ವೇಳೆ ಮನೆಗೆ ಬಂದಿದ್ದ ಎಲ್ಲ ನೆಂಟರು ಸೇರಿಕೊಂಡು ಎರಡು ಕಾರಿನಲ್ಲಿ ಬಸರಾಳು ಬಳಿ ಇರುವ ಕಾವೇರಿ ನಾಲೆಗೆ ಈಜಲು ಹೋಗಿದ್ದಾರೆ. ಈ ವೇಳೆ ನಡೆದ ಅವಘಡದಲ್ಲಿ ಹನಿಸಾ ಬೇಗಂ (34), ಮಹತಾಬ್ (10), ತಸ್ಸ್ಮೀಯಾ (22) ಮೃತಪಟ್ಟಿದ್ದಾರೆ ಎಂದು ಗುರುತಿಸಲಾಗಿದೆ. ಉಳಿದಂತೆ ಹತೀಕಾ, ಅರ್ಷಕ್‌ ಮೃತ ದೇಹಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ಹುಟುಕಾಟ ನಡೆಸಿದ್ದಾರೆ. ಇನ್ನು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಪ್ರವಾಸಕ್ಕೆ ಹೋಗುವ ಮುನ್ನ ಕಾಳಜಿಯಿರಲಿ: ಬೇಸಿಗೆ ಇರುವ ಹಿನ್ನೆಲೆಯಲ್ಲಿ ಎಲ್ಲರಿಗೂ ಮಧ್ಯಾಹ್ನದ ಬಿಸಿಲಿನ ಸಮಯವನ್ನು ನೀರಿನಲ್ಲಿ ಈಜಾಡುವ ಮೂಲಕ ಕಳೆಯಬೇಕು ಎಂದು ಹಾತೊರೆಯುವವರೇ ಹೆಚ್ಚು. ಹೀಗಾಗಿ, ಇಡೀ ಕುಟುಂಬ ಸಮೇತರಾಗಿ ನೀರು ಇರುವ ನದಿ, ಕಾಲುವೆ, ಕೆರೆ, ಜಲಾಶಯ ಸೇರಿ ವಿವಿಧ ನೀರಿನ ಮೂಲಗಳಿಗೆ ಹೋಗುವುದು ಸಾಮಾನ್ಯವಾಗಿದೆ. ಇನ್ನು ಸ್ವಿಮ್ಮಿಂಗ್‌ ಪೂಲ್ ಮೊರೆ ಹೋಗುವವರ ಸಂಖ್ಯೆಯೂ ಅಧಿಕವಾಗಿರುತ್ತದೆ. ಆದರೆ, ಈ ವೇಳೆ ಈಜಲು ಹೋದವರಿಗೆ ಈಜಲು ಬರುತ್ತದೆಯೇ, ರಕ್ಷಣೆ ಮಾಡುವವರು ಯಾರಾದರೂ ಇದ್ದಾರೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಂಡು ಈಜಲು ಹೋಗಬೇಕು. ಜೊತೆಗೆ, ನೀರಿನಲ್ಲಿ ಯಾವ ಪ್ರದೇಶದಲ್ಲಿ ಎಷ್ಟು ಆಳವಿದೆ ಎಂದು ತಿಳಿಯಲು ಸ್ಥಳೀಯರು ಕೂಡ ಲಭ್ಯವಿದ್ದರೆ ಅನುಕೂಲ ಆಗಲಿದೆ.

ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ಮತ್ತೊಂದು ಭೀಕರ ಅಪಘಾತ: ಟಿಪ್ಪರ್‌ ಹರಿದು ಬೈಕ್‌ ಸವಾರ ಸಾವು

ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಡ್ಯಾಂನಲ್ಲಿ ಈಜಲು ಹೋಗಿ ಸಾವು: ಇತ್ತೀಚೆಗೆ (ಏ.1ರಂದು) ಬೆಂಗಳೂರಿನಿಂದ ಚಿಕ್ಕಬಳ್ಳಾಪುರದ ಶ್ರೀನಿವಾಸ ಸಾಗರ ಡ್ಯಾಂಗೆ ಒಂದು ದಿನದ ಹೊರ ಸಂಚಾರಕ್ಕೆ ಹೋಗಿದ್ದ 6 ಜನರು ನೀರಿನಲ್ಲಿ ಈಜಲು ಮುಂದಾಗಿದ್ದು, ಈ ವೇಳೆ ಕಲ್ಲಿನ ಮೇಲೆ ನಿಂತಿದ್ದವರು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ. ಕಾಲು ಜಾರಿ ಬಿದ್ದವರನ್ನು ರಕ್ಷಣೆ ಮಾಡಲು ಮುಂದಾದ ಮತ್ತಿಬ್ಬರು ನೀರಿನೊಳಗೆ ಬಿದ್ದು ಮುಳುಗಿದ್ದರು. ಬೆಂಗಳೂರಿನಲ್ಲಿ ಡಿ ಫಾರ್ಮಸಿ ಓದುತ್ತಿದ್ದ ವಿದ್ಯಾರ್ಥಿಗಳು ಚಿಕ್ಕಬಳ್ಳಾಪುರದ ಶ್ರೀನಿವಾಸ ಸಾಗರ ಡ್ಯಾಂಗೆ ಒಂದು ದಿನದ ಹೊರ ಸಂಚಾರಕ್ಕೆ ಹೋಗಿದ್ದರು.

ಒಬ್ಬರನ್ನು ರಕ್ಷಿಸಲು ಹೋಗಿ ಮತ್ತಿಬ್ಬರು ಸಾವು:  ಮೂವರು ಹುಡುಗರು ಮತ್ತು ಮೂವರು ಹುಡುಗಿಯರು ಬೈಕ್‌ನಲ್ಲಿ ತೆರಳಿದ್ದು, ಮಧ್ಯಾಹ್ನದ ವೇಲೆ ಡ್ಯಾಮ್‌ನಲ್ಲಿ ಈಜಲು ಮುಂದಾಗಿದ್ದಾರೆ. ಈ ವೇಳೆ ಡ್ಯಾಮ್‌ನ ಒಳಗಿದ್ದ ಕಲ್ಲಿನ ಮೇಲೆ ನಿಂತುಕೊಂಡು ಒಬ್ಬರನ್ನೊಬ್ರು ಕೈ ಹಿಡಿದುಕೊಂಡು ಆಳವಿರುವ ಪ್ರದೇಶಕ್ಕೆ ಹೋಗಿದ್ದಾರೆ. ಆದರೆ, ಈ ವೇಳೆ ಒಬ್ಬರು ಕಾಲುಜಾರಿ ಬಿದ್ದಿದ್ದಾರೆ. ಅವರನ್ನು ರಕ್ಷಣೆ ಮಾಡಲು ಎಲ್ಲರೂ ಕೈ- ಕೈ ಹಿಡಿದುಕೊಂಡು ಸರಪಳಿ ರೀತಿಯಲ್ಲು ಮುಂದಾಗಿದ್ದಾರೆ. ಆದರೆ, ಈ ವೇಳೆ ಮೊದಲು ಕಾಲು ಜಾರಿ ಬಿದ್ದ ವಿದ್ಯಾರ್ಥಿನಿಯ ಜೊತೆಗೆ ಮತ್ತಿಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು.

click me!