ಬೈಕ್‌ ಕಳ್ಳರ ಜಾಲ ಭೇದಿಸಿದ ರಾಯಚೂರು ಪೊಲೀಸ್ರು, ಖದೀಮರ ಖತರ್ನಾಕ್ ಐಡಿಯಾ ಕೇಳಿ ಪೊಲೀಸರೇ ಶಾಕ್

Published : Sep 12, 2022, 07:07 PM IST
ಬೈಕ್‌ ಕಳ್ಳರ ಜಾಲ ಭೇದಿಸಿದ ರಾಯಚೂರು ಪೊಲೀಸ್ರು, ಖದೀಮರ ಖತರ್ನಾಕ್ ಐಡಿಯಾ ಕೇಳಿ ಪೊಲೀಸರೇ ಶಾಕ್

ಸಾರಾಂಶ

ಖಾಕಿ ಪಡೆ ಅದೊಂದು ನಟೋರಿಯಸ್ ಬೈಕ್‌ ಕಳ್ಳರ ಜಾಲವನ್ನ ಭೇದಿಸುವಲ್ಲಿ ರಾಯಚೂರು ಪೊಲೀಸರು ಯಶ್ವಸಿಯಾಗಿದ್ದಾರೆ. ವಿಚಾರಣೆ ವೇಳೆ ಕಳ್ಳರ ಖತರ್ನಾಕ್ ಐಡಿಯಾ ಕೇಳಿ ಪೊಲೀಸರೇ ದಂಗಾಗಿದ್ದಾರೆ.

ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್


ರಾಯಚೂರು, (ಸೆಪ್ಟೆಂಬರ್.12):
ರಾಯಚೂರು ಜಿಲ್ಲೆ ಆಂಧ್ರ ಮತ್ತು ತೆಲಂಗಾಣ ಗಡಿ ಹೊಂದಿರುವ ಜಿಲ್ಲೆಯಾಗಿದೆ. ಅಷ್ಟೇ ಅಲ್ಲದೆ ಇತ್ತ ಬಳ್ಳಾರಿ, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಯ ಜನರು ನಿತ್ಯ ರಾಯಚೂರು ಜಿಲ್ಲೆಗೆ ಬಂದು ಹೋಗುತ್ತಾರೆ. ಗಡಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಅತೀ ಹೆಚ್ಚು ಬೈಕ್ ಗಳ ಕಳ್ಳತನವಾಗುತ್ತಿದ್ದು, ಖಾಕಿ ಪಡೆ ಅದೊಂದು ನಟೋರಿಯಸ್ ಕಳ್ಳರ ಜಾಲವನ್ನ ಭೇದಿಸುವಲ್ಲಿ ಯಶ್ವಸಿಯಾಗಿದ್ದಾರೆ. ಬೈಕ್ ಖದೀಮರನ್ನ ಬಂಧಿಸಿ ವಿಚಾರಣೆ ನಡೆಸಿದ ವೇಳೆ ಕಳ್ಳರ ಖತರ್ನಾಕ್ ಐಡಿಯಾ ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ.

ಎಲ್ಲೆಂದರಲ್ಲಿ ಪಾರ್ಕ್ ಮಾಡಿದ ಬೈಕ್ ಗಳು ಕಳ್ಳತನ: 
ಕಳ್ಳರಲ್ಲಿ ಹತ್ತಾರು ಮಾದರಿಯ ಕಳ್ಳರನ್ನ ನಾವು ನೋಡಿರುತ್ತೇವೆ. ಆದ್ರೆ ಈ ಖದೀಮರು ಪಾರ್ಕಿಂಗ್ ಸ್ಥಳದಲ್ಲಿ ಇಲ್ಲದ ಬೈಕ್ ಗಳು ಮಾತ್ರ ಕಳ್ಳತನ ಮಾಡುವುದು ಇವರು ಕಾಯಕ ಮಾಡಿಕೊಂಡಿದ್ರು‌. ತುರ್ತು ಕೆಲಸದ ನಿಮಿತ್ತ ರಸ್ತೆ ಬದಿಯಲ್ಲಿ, ರೈಲ್ವೆ ನಿಲ್ದಾಣದ ಬಳಿ, ಇಲ್ಲವೇ ಬಸ್ ನಿಲ್ದಾಣದ ರಸ್ತೆಯ ಬಳಿ ನಿಲ್ಲಿಸಿ ಹೋದ ಬೈಕ್ ಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ರು. ಅಲ್ಲದೆ ಕಳ್ಳತನ ಮಾಡಿದ ಬೈಕ್  ರಾಯಚೂರು ಜಿಲ್ಲೆಗೆ ಗಡಿ ಹೊಂದಿರುವ ಮತ್ತೊಂದು ಜಿಲ್ಲೆಗೆ ತೆಗೆದುಕೊಂಡು ಹೋಗಿ ಅಲ್ಲಿ ಮಾರಾಟ ಮಾಡಿ ಮತ್ತೆ ಎಂದಿನಂತೆ ಓಡಾಟ ನಡೆಸುತ್ತಿದ್ರು. ಹೀಗಾಗಿ ಯಾರಿಗೂ ಇವರ ಮೇಲೆ ಯಾವುದೇ ಅನುಮಾನ ಬರುತ್ತಿರಲಿಲ್ಲ.

ಗ್ರಾಮೀಣ ಪ್ರದೇಶದಲ್ಲೂ ಸೈಬರ್ ಅಪರಾಧ ಹೆಚ್ಚಳ; ಎಸ್‌ಪಿ ಆರ್‌. ಚೇತನ್‌

ರಾಯಚೂರು ಪೊಲೀಸರಿಂದ 25 ಲಕ್ಷ ಮೌಲ್ಯದ 43 ಬೈಕ್ ಸೀಜ್

ಆಂಧ್ರ ಹಾಗೂ ತೆಲಂಗಾಣ ಗಡಿಯಲ್ಲಿರುವ ರಾಯಚೂರು ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಬೈಕ್ ಕಳ್ಳತನ ಕೇಸ್ ಗಳು  ಹೆಚ್ಚಾಗ್ತಿವೆ..ಗ್ರಾಮೀಣ ಭಾಗದ ಜನ ಎಲ್ಲೆಂದರಲ್ಲಿ ಬೈಕ್ ನಿಲ್ಲಿಸಿ ಹೋಗ್ತಿರೋದನ್ನೆ ಬಂಡವಾಳ ಮಾಡಿಕೊಳ್ತಿರುವ ಖದೀಮರು ಕ್ಷಣಾರ್ಧದಲ್ಲೇ ಬೈಕ್ ಕಳ್ಳತನ ಮಾಡುತ್ತಿದ್ರು. ಅದರಲ್ಲೂ ಬಸ್ ನಿಲ್ದಾಣ, ಆಸ್ಪತ್ರೆಗಳು, ಮಾರ್ಕೆಟ್ ಗಳ ಬಳಿ ಬೈಕ್ ನಿಲ್ಲಿಸಿದ್ರೆ, ವಾಪಸ್ ಬರೋವಷ್ಟರಲ್ಲಿ ಬೈಕ್ ಮಾಯವಾಗಿ ಹೋಗುತ್ತಿತ್ತು.ಹೀಗೆ ಸರಣಿ ಬೈಕ್ ಕಳ್ಳತನ ಪ್ರಕರಣಗಳು ಸಿಟಿಯಲ್ಲಿ ದಾಖಲು ಆಗಿದ್ದವು. ಹೀಗಾಗಿ ರಾಯಚೂರು ಪೊಲೀಸರು ತಂಡವೊಂದು ಖದೀಮರ ಬೇಟೆಗೆ ಮುಂದಾಗಿ ಒಟ್ಟು 25 ಲಕ್ಷ ಮೌಲ್ಯದ 43 ಬೈಕ್ ಗಳ ನನ್ನ ಸೀಜ್ ಮಾಡಿದ್ದಾರೆ.

ಅದರಲ್ಲಿ ಮುಖ್ಯವಾಗಿ ಜಾಲಹಳ್ಳಿ ಪೊಲೀಸರು ವಿರುಪಾಕ್ಷ ಹಾಗೂ ಪವನ್ ಕುಮಾರ್ ಅನ್ನೋ ಖಿಲಾಡಿ ಕಳ್ಳರನ್ನ ಬಂಧಿಸಿದ್ದಾರೆ..ಈ ಕಳ್ರು,  ಪೊಲೀಸರ ನಾಕಾ ಬಂದಿ ಕಂಡು ಎಸ್ಕೇಪ್ ಆಗಲು ಯತ್ನಿಸಿದ್ರು..ಆಗ ಪೊಲೀಸರು ಅನುಮಾನಗೊಂಡು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ಕುಖ್ಯಾತರು, ಬಳ್ಳಾರಿ,ಸಿಂಧನೂರು,ರಾಯಚೂರು,ಇಳಕಲ್ ನಲ್ಲೂ ಬೈಕ್ ಕದ್ದಿರೋದಾಗಿ ಬಾಯ್ಬಿಟ್ಟಿದ್ದಾರೆ..ಮೋಜು ಮಸ್ತಿಗಾಗಿ ಬೈಕ್ ಕದಿಯುತ್ತಿದ್ದದ್ದಾಗಿ ಆರೋಪಿಗಳು ಬಾಯ್ಬಿಟ್ಟಿದ್ದು, ಬಂಧಿತರಿಂದ ಒಟ್ಟು 12 ಲಕ್ಷ ಮೌಲ್ಯದ 25 ಬೈಕ್ ಸೀಜ್ ಮಾಡಲಾಗಿದೆ. 

ಮೋಜು ಮಸ್ತಿಗಾಗಿ ಸಾಲ: ಸಾಲ ತೀರಿಸಲು ಮಹಿಳೆ ಹತ್ಯೆ: ಬಾಲಪರಾಧಿ ಸೇರಿ ಮೂವರ ಬಂಧನ

ಇನ್ನೂ ಇತ್ತ ಏಕಾಂಕಿಯಾಗಿ ಓಡಾಡುತ್ತಾ ಬೈಕ್ ಕದಿಯುತ್ತಿದ್ದ ನಟೋರಿಯಸ್ ಕಳ್ಳ ವೆಂಕಟೇಶ್ ಅನ್ನೋನನ್ನ ಗಬ್ಬೂರು ಪೊಲೀಸರು ಬಂಧಿಸಿದ್ದಾರೆ..ಈತ ರಾಯಚೂರು,ಕಲಬುರಗಿ ಹಾಗೂ ಯಾದಗಿರಿ ಸೇರಿ ಮೂರು ಜಿಲ್ಲೆಗಳಲ್ಲಿ ತನ್ನ ಕೈ ಚಳಕ ತೋರಿಸಿದ್ದ ಈಗ ಅಂದರ್ ಆಗಿ ಮೂರು ಜಿಲ್ಲೆಗೆ ಬೇಕಾಗಿದ್ದ ಕಳ್ಳ ಸದ್ಯ ಸೆರೆಸಿಕ್ಕಿದ್ದು ಬಂಧಿತ ಬೈಕ್ ಕಳ್ಳ ವೆಂಕಟೇಶ್ ನಿಂದ 5 ಲಕ್ಷ ಮೌಲ್ಯದ 12 ಬೈಕ್ ಜಪ್ತಿ ಮಾಡಲಾಗಿದೆ..ಇದಷ್ಟೇ ಅಲ್ಲ, ಮದ್ಯಪಾನ ಮಾಡಲು ಹಣವಿಲ್ಲದಿದ್ದಕ್ಕೆ ಕಳ್ಳ ಸ್ನೇಹಿತರ ಗ್ಯಾಂಗ್ ವೊಂದು ಬೈಕ್ ಕಳ್ಳತನ ಮಾಡುತ್ತಿದ್ದ ಕೇಸ್ ಕೂಡ ಬೆಳಕಿಗೆ ಬಂದಿದೆ.

ಸ್ನೇಹಿತರನ್ನ ಕರೆದುಕೊಂಡು ಬೈಕ್ ಕಳ್ಳತನ ಮಾಡಿ ಅಂದರ್

ಇತ್ತ ರಾಯಚೂರು ಜಿಲ್ಲೆ  ಮಸ್ಕಿ ಪಟ್ಟಣದಲ್ಲಿ ನಡೆಯುತ್ತಿದ್ದ ಸರಣಿ ಬೈಕ್  ಕಳ್ಳತನ ಪ್ರಕರಣವನ್ನು  ಬಂಧಿಸುವಲ್ಲಿ ಪೊಲೀಸರು ಯಶ್ವಸಿಯಾಗಿದ್ದಾರೆ. ಒಬ್ಬ ಬೈಕ್ ನಿಂದ ಇಡೀ ಕಳ್ಳ ಸ್ನೇಹಿತರ ಬಳಗವೇ ಲಾಕ್ ಆಗಿದೆ.ಅಮರೇಶ್,ನಿರುಪಾದೆಪ್ಪ ಹಾಗೂ ನಿರುಪಾದಿ ಅನ್ನೋ ಸ್ನೇಹಿತರನ್ನ ಬಂಧಿಸಲಾಗಿದ್ದು, ಬಂಧಿತರಿಂದ 5.2 ಲಕ್ಷ ಮೌಲ್ಯದ 6 ಬೈಕ್ ಜಪ್ತಿ ಮಾಡಲಾಗಿದೆ.ಬಂಧಿತರು ಮೂರು ಪ್ರತ್ಯೇಕ ಕೇಸ್ ಗಳಲ್ಲಿ ಆರೋಪಿಗಳು ಆಗಿದ್ದು ಕದ್ದ ಬೈಕ್ ಗಳ ನನ್ನ ಮತ್ತೊಂದು ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಕಡಿಮೆ ದರಕ್ಕೆ ಮಾರಾಟ ಮಾಡ್ತಿದ್ದದ್ದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. 

ಒಟ್ಟಿನಲ್ಲಿ ಪಟ್ಟಣ,ನಗರಕ್ಕೆ ಬರೋ ಗ್ರಾಮೀಣ ಭಾಗದ ಜನ ಬೈಕ್ ಗಳ ನನ್ನ ಎಲ್ಲೆಂದರಲ್ಲಿ ಪಾರ್ಕ್ ಮಾಡಿ, ಕೆಲವೊಮ್ಮೆ ಹ್ಯಾಂಡ್ ಲಾಕ್ ಕೂಡ ಮಾಡ್ತಿಲ್ಲ. ಹೀಗಾಗಿ ಹ್ಯಾಂಡ್ ಲಾಕ್ ಇಲ್ಲದ ಬೈಕ್ ಗಳನ್ನು ಹಾಗೂ ನಂಬರ್ ಪ್ಲೇಟ್ ಇಲ್ಲದ ಬೈಕ್ ಗಳನ್ನು ಖದೀಮರು ಟಾರ್ಗೆಟ್ ಮಾಡಿ  ಕಳ್ಳತನ ಮಾಡಲಾಗ್ತಿದೆ. ಹೀಗಾಗಿ ಜನರು ಕೂಡ ಅಲರ್ಟ್ ತಮ್ಮ ಬೈಕ್ ಗಳಿಗೆ ಕಡ್ಡಾಯವಾಗಿ ಹ್ಯಾಂಡ್ ಲಾಕ್ ಹಾಕುವುದು ಮರೆಯಬೇಡಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!