ಲವ್ ಕೇಸರಿ ಕರೆಕೊಟ್ಟ ಶ್ರೀರಾಮಸೇನೆ ಮುಖಂಡರು ಕಂಬಿ ಹಿಂದೆ

Published : Apr 17, 2022, 05:50 PM ISTUpdated : Apr 17, 2022, 05:52 PM IST
ಲವ್ ಕೇಸರಿ ಕರೆಕೊಟ್ಟ ಶ್ರೀರಾಮಸೇನೆ ಮುಖಂಡರು ಕಂಬಿ ಹಿಂದೆ

ಸಾರಾಂಶ

* ಲವ್ ಕೇಸರಿ ಮತ್ತು ವಿವಾದಾತ್ಮಕ ಹೇಳಿಕೆ ಪ್ರಕರಣ * ವಿವಾದಾತ್ಮಕ ಹೇಳಿಕೆ ನೀಡಿದ್ದ  ರಾಜಾಚಂದ್ರ ರಾಮನಗೌಡ, ಮಂಜುನಾಥ ಬಾವಿ ಬಂಧನ * ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಮಂಜುನಾಥ ಬಾವಿ, ಜಿಲ್ಲಾ ಸಂಚಾಲಕ ರಾಜಾಚಂದ್ರ ರಾಮನಗೌಡ  

ರಾಯಚೂರು, (ಏ.17): ಲವ್ ಕೇಸರಿ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಚೂರು ಪಶ್ಚಿಮ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ರಾಯಚೂರು ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಮಂಜುನಾಥ ಭಾವಿ ಹಾಗೂ ಜಿಲ್ಲಾ ಸಂಚಾಲಕ ರಾಜಾಚಂದ್ರ ರಾಮನಗೌಡ ಅವರನ್ನು ಇಂದು(ಭಾನುವಾರ) ಬಂಧಿಸಲಾಗಿದೆ.

ಏಪ್ರಿಲ್ 10 ರಂದು ನಡೆದಿದ್ದ ಶ್ರೀರಾಮನವಮಿಯಂದು ಶ್ರೀರಾಮಸೇನೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದು, ಲವ್ ಜಿಹಾದ್ ಬದಲು ಲವ್ ಕೇಸರಿ ಟ್ರೆಂಡ್​ಗೆ ಕರೆ ನೀಡಲಾಗಿತ್ತು. ಹಿಂದುಗಳ ಮೇಲೆ ದಾಳಿ ಮಾಡಿದವರನ್ನ ಕೊಚ್ಚಿ ಹಾಕಿ ನಾವೀದ್ದೀವಿ ಎಂದು ರಾಜಾಚಂದ್ರ ಹೇಳಿದ್ದರು. ಅಲ್ಲದೇ ಇದೇ ವೇಳೆ ವೇದಿಕೆ ಮೇಲೆ ಖಡ್ಗ ಪ್ರದರ್ಶಿಸದ್ದರು.

Love Jihad : ಲವ್ ಕೇಸರಿ ಶುರು ಮಾಡಿ.. ತಲವಾರ್ ಹಂಚಿದ ಶ್ರೀರಾಮಸೇನೆ!

ಲವ್ ಜಿಹಾದ್ ಬದಲಿಗೆ ಲವ್ ಕೇಸರಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ರಾಜಾಚಂದ್ರ ರಾಮನಗೌಡ, ಮಂಜುನಾಥ್ ಎಂಬವರ ವಿರುದ್ಧ ದೆ. ರಾಯಚೂರು ಪಶ್ಚಿಮ ಪೊಲೀಸ್ ಠಾಣೆಯಲ್ಲಿ  FIR ದಾಖಲು ಮಾಡಲಾಗಿತ್ತು.  ಅನ್ಯ ಧರ್ಮದ ವಿರುದ್ಧ ಪ್ರಚೋದನಕಾರಿ ಹೇಳಿಕೆ ಆರೋಪದಲ್ಲಿ ಅವರ ವಿರುದ್ಧ ಐಪಿಸಿ ಸೆಕ್ಷನ್‌ 153, 153(A), 295(A)ರ ಅಡಿ ಎಫ್‌ಐಆರ್‌ ದಾಖಲು ಮಾಡಲಾಗಿತ್ತು.

ಮಣಿಕಾಂತ್ ಎಂಬುವವರು ಮತೀಯ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ರೀತಿಯಲ್ಲಿ ಭಾಷಣ ಮಾಡಿ, ಅನ್ಯ ಧರ್ಮೀಯರಲ್ಲಿ ಭಯಹುಟ್ಟಿಸುವಂತ ಕಾರ್ಯಕ್ರಮ ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಈ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಗೋವಾದಲ್ಲಿ ಆರೋಪಿಗಳನ್ನು ಬಂಧಿಸಿದ್ದು ವಿಚಾರಣೆ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳ ವೈದ್ಯಕೀಯ ತಪಾಸಣೆ ಹಾಗೂ ವಿಚಾರಣೆ ನಂತರ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
ಮಂಗಳಮುಖಿಯರಿಂದ ಯುವಕನ ಅಪಹರಣ; ಶಸ್ತ್ರಚಿಕಿತ್ಸೆ ನಡೆಸಿ ಪರಿವರ್ತನೆಗೆ ಯತ್ನ?