
ಚಿಕ್ಕೋಡಿ (ಏ. 17): ಡೈರಿಗಳಿಗೆ ಹತ್ತಿಕಾಳು ಹಿಂಡಿ ಸ್ಟಾಕ್ ಸಪ್ಲೈ ಮಾಡಿ ಬಂದಿದ್ದ ಹಣವನ್ನು, ಕಣ್ಣಲ್ಲಿ ಖಾರ ಎರಚಿ ಯಾರೋ ದರೋಡೆ ಮಾಡಿದ್ದಾರೆಂದು ನಾಟಕವಾಡಿದ್ದ ಚಾಲಕ ಆನಂದನನ್ನು ಪೋಲಿಸರು ಬಂಧಿಸಿದ್ದಾರೆ. 12 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಕಂಪನಿ ಮಾಲಿಕನಿಗೆ ಆನಂದ ಮೋಸ ಮಾಡಿದ್ದು ಕಣ್ಣಲ್ಲಿ ಕಾರದಪುಡಿ ಎರಚಿ ಹಣ ದರೋಡೆ ಮಾಡಿದ್ದಾರೆ ಎಂದು ಸುಳ್ಳು ಹೇಳಿದ್ದ.ಕಳೆದ ಶುಕ್ರವಾರದಂದು ಮಧ್ಯಾಹ್ನ ಹಣ ದರೋಡೆಯಾಗಿದೆ ಎಂದು ಆನಂದ್ ಚಿಕ್ಕೋಡಿ ಪೊಲೀಸರಿಗೆ ದೂರು ನೀಡಿದ್ದ.
ಆದರೆ ಪೊಲೀಸರಿಗೆ ಆನಂದ ದಿಕ್ಕು ತಪ್ಪಿಸಿದ್ದು, ವಿಚಾರಣೆಯಲ್ಲಿ ದರೋಡೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ತನ್ನ ವೈಯಕ್ತಿಕ ಸಾಲಕ್ಕಾಗಿ ದರೋಡೆ ನಾಟಕ ಮಾಡಿದ್ದು, 8 ಲಕ್ಷ 52 ಸಾವಿರ ರೂಪಾಯಿ ದರೋಡೆಯಾಗಿದೆ ಎಂದು ಮನೆಯಲ್ಲಿ ಮುಚ್ಚಿಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ತಾಲೂಕಿನ ಬೆಳಕುಡ ಕ್ರಾಸ್ ಬಳಿ ನಾಲ್ಕು ಜನ ಕಣ್ಣಲ್ಲಿ ಕಾರ ಎರಚಿ ದರೋಡೆ ಮಾಡಿದ್ದಾರೆಂದು ಆನಂದ್ ನಾಟಕವಾಡಿದ್ದ.
ಇದನ್ನೂ ಓದಿ: ಮನೆಗೆ ನುಗ್ಗಿದ ಕಳ್ಳನೊಂದಿಗೆ ಗುದ್ದಾಡಿ ಹಿಡಿದ ಗೃಹಿಣಿ..!
36 ಗಂಟೆಯಲ್ಲೇ ಚಿಕ್ಕೋಡಿ ಪೊಲೀಸರು ಪ್ರಕರಣ ಬೇಧಿಸಿದ್ದು, ಲಾರಿ ಚಾಲಕ ಆನಂದ ಮಲ್ಲಾಡಿಯನ್ನು ಬಂಧಿಸಿದ್ದಾರೆ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಿಕ್ಕೋಡಿ ಕಾಗವಾಡ ತಾಲೂಕಿನ ವಿವಿಧ ಗ್ರಾಮಗಳ ಹಾಲಿನ ಡೈರಿಗಳಿಗೆ ಆನಂದ್ ಹತ್ತಿಕಾಳು ಹಿಂಡಿ (ದನಗಳ ಆಹಾರ) ಸಪ್ಲೈ ಮಾಡುತ್ತಿದ್ದ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ