ಸಾಲ ವಾಪಸ್ ಕೇಳಲು ಹೋಗಿದ್ದ ಬ್ಯಾಂಕ್ ಮ್ಯಾನೇಜರ್‌ಗೆ ಸಾಲಗಾರ ಗನ್ ತೋರಿಸಿ ಬೆದರಿಕೆ ಹಾಕಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ. ಕೃಷ್ಣ ಕಿಶೋರ್ ಹಾಗೂ ಅಖಿಲೇಶ್ ಗನ್ ತೋರಿಸಿದ ಆರೋಪಿಗಳು.
ದಕ್ಷಿಣ ಕನ್ನಡ (ಸೆ.27): ಸಾಲ ವಾಪಸ್ ಕೇಳಲು ಹೋಗಿದ್ದ ಬ್ಯಾಂಕ್ ಮ್ಯಾನೇಜರ್‌ಗೆ ಸಾಲಗಾರ ಗನ್ ತೋರಿಸಿ ಬೆದರಿಕೆ ಹಾಕಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.
ಕೃಷ್ಣ ಕಿಶೋರ್ ಹಾಗೂ ಅಖಿಲೇಶ್ ಗನ್ ತೋರಿಸಿದ ಆರೋಪಿಗಳು. ಬಲ್ನಾಡು ಉಜುರುಪಾದೆ ನಿವಾಸಿಗಳಾಗಿರುವ ತಂದೆ-ಮಗ. ಸಾಲ ವಾಪಸ್ ಕೇಳಲು ಬಂದ ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್‌ಗೆ ಚಿನ್ಮಯ ಬೆದರಿಕೆ ಹಾಕಿದ ಆರೋಪಿಗಳು.
ಬಂಟ್ವಾಳದಲ್ಲಿ ಕೆಸರುಗದ್ದೆ ಕ್ರೀಡಾಕೂಟ: ಕೆಸರಲ್ಲಿ ಮಕ್ಕಳಂತೆ ಆಡಿ ಸಂಭ್ರಮಿಸಿದ ದ.ಕ. ಜಿಲ್ಲಾಧಿಕಾರಿ..!
ಘಟನೆ ಹಿನ್ನೆಲೆ
ಎಸ್‌ಬಿಐನಿಂದ 2 ಕೋಟಿ ಸಾಲ ಪಡೆದಿದ್ದ ಅಖಿಲೇಶ್ ಪತ್ನಿ ಕೀರ್ತಿ ಅಖಿಲೇಶ್. ಆದರೆ ಕಾಲಕಾಲಕ್ಕೆ ಸಾಲ ಮರುಪಾವತಿಸದೇ ನಿರ್ಲಕ್ಷ್ಯ ಮಾಡಿದ್ದಾರೆ. ಈ ಹಿನ್ನೆಲೆ ಸಾಲ ಪಡೆದಿದ್ದ ಕೀರ್ತಿ ಅಖಿಲೇಶ್ ಬ್ಯಾಂಕ್ ಖಾತೆ ಎನ್‌ಪಿಎ ಆಗಿದೆ. ಸಾಲ ಮರುಪಾವತಿಸುವಂತೆ ಹಲವು ಬಾರಿ ವಕೀಲ ಮೂಲಕ ನೋಟಿಸ್ ಕಳಿಸಿದ್ದ ಬ್ಯಾಂಕ್ ಮ್ಯಾನೇಜರ್. ಆದರೆ ಬ್ಯಾಂಕ್ ನೋಟಿಸ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಹೀಗಾಗಿ ಬ್ಯಾಂಕ್ ಮ್ಯಾನೇಜರ್ ಚಿನ್ಮಯ್ ತನ್ನ ಬ್ಯಾಂಕ್ ಸಿಬ್ಬಂದಿಯೊಂದಿಗೆ ಸಾಲಗಾರರಾದ ಕೀರ್ತಿ ಅಖಿಲೇಶ್ ಮನೆಗೆ ತೆರಳಿದ್ದರು.
ಬ್ಯಾಂಕ್ ಸಿಬ್ಬಂದಿ ಮನೆಗೆ ಬಂದ ಕಾರಣದಿಂದ ಆಕ್ರೋಶಗೊಂಡಿದ್ದ ಕೀರ್ತಿ ಪತಿ ಅಖಿಲೇಶ್ ಹಾಗೂ ಆತನ ತಂದೆ ಕೃಷ್ಣ ಕಿಶೋರ್. ಬ್ಯಾಂಕ್ ಮ್ಯಾನೇಜರ್ ಜೊತೆಗೆ ತಗಾದೆ ತೆಗೆದಿದ್ದಾರೆ. ಈ ವೇಳೆ ಬ್ಯಾಂಕ್ ಸಾಲ ವಾಪಸ್ ಕೊಡುವಂತೆ ಮ್ಯಾನೇಜರ್ ಕೇಳಿದ್ದಾರೆ. ಅದರಿಂದ ನಡೆದ ಮಾತಿನ ಚಕಮಕಿಯಲ್ಲಿ ಮನೆಯಲ್ಲಿದ್ದ ಪಿಸ್ತೂಲ್ ತೆಗೆದ ಕೃಷ್ಣ ಕಿಶೋರ್, ಬ್ಯಾಂಕ್ ಮ್ಯಾನೇಜರ್‌ಗೆ ತೋರಿಸಿ ಶೂಟ್ ಮಾಡಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆಂದು ಆರೋಪಿಸಲಾಗಿದೆ.
ಸಿಎಂ ರಾಜೀನಾಮೆ ಕೇಳಿದ ಕಾಂಗ್ರೆಸ್ ಹಿರಿಯ ನಾಯಕನ ವಿರುದ್ಧ ಎಂಬಿ ಪಾಟೀಲ್ ಗರಂ!
ಸದ್ಯ ಪ್ರಕರಣ ಸಂಬಂಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬ್ಯಾಂಕ್ ನೋಟಿಸ್‌ಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳು ಜನರ ನಡುವೆ ಇವರು ಬ್ಯಾಂಕ್ ಸಾಲ ಕೇಳಲು ಬಂದವರಿಗೇ ಗನ್ ತೋರಿಸಿ ಬೆದರಿಕೆಯೊಡ್ಡುವುದು ವಿಚಿತ್ರವಾಗಿದೆ.