
ಮಂಡ್ಯ(ಜೂ.10): ಪ್ರೀತಿಸುತ್ತಿದ್ದ ಹುಡುಗಿ ಪೋಷಕರ ಮಾತು ಕೇಳಿ ತನ್ನಿಂದ ಅಂತರ ಕಾಯ್ದುಕೊಂಡಳು ಎಂಬ ಕಾರಣಕ್ಕೆ ಯುವತಿಗೆ ಪಾಗಲ್ ಪ್ರೇಮಿಯೊಬ್ಬ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮಂಡ್ಯದ ಮೆಡಿಕಲ್ ಕಾಲೇಜು ಆವರಣದಲ್ಲಿ ನಡೆದಿದೆ. ವೈ.ಯರಹಳ್ಳಿ ಗ್ರಾಮದ ಸಂಪತ್ ಕುಮಾರ್ (20) ರಿಪಿಸ್ ಪಟ್ಟಿಯಿಂದ ಯುವತಿ ತಲೆಗೆ ಮನಸ್ಸೋ ಇಚ್ಛೆ ಥಳಿಸಿದ್ದು. ಪ್ಯಾರಾ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದ ಗಿರಿಜಾ (20)(ಹೆಸರು ಬದಲಾಯಿಸಲಾಗಿದೆ) ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರೀತಿಗೆ ಪೋಷಕರ ವಿರೋಧ, ಪ್ರಿಯಕರನಿಂದ ದೂರಾಗಿದ್ದ ವಿದ್ಯಾರ್ಥಿನಿ
ವೈ.ಯರಹಳ್ಳಿ ಗ್ರಾಮದವರೇ ಆದ ಸಂಪತ್ ಕುಮಾರ್ ಹಾಗೂ ಗಿರಿಜಾ ಕಳೆದ ಎರಡ್ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಕಳೆದೊಂದು ವರ್ಷದ ಹಿಂದೆ ಪ್ರೀತಿ ವಿಚಾರ ಗಿರಿಜಾ ಪೋಷಕರಿಗೆ ಗೊತ್ತಾಗಿದೆ. ಮಂಡ್ಯದಲ್ಲಿ ಪ್ಯಾರ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದ ಗಿರಿಜಾಗೆ ತಂದೆ ಪರಮೇಶ್ ಬುದ್ದಿವಾದ ಹೇಳಿದ್ದಾರೆ. ಮೊದಲು ಓದು ಮುಗಿಸು ಸಂಪತ್ ಕುಮಾರ್‌ನಿಂದ ದೂರವಿರುವಂತೆ ಎಚ್ಚರಿಸಿದ್ದಾರೆ. ನಂತರ ಪ್ರಿಯಕರನಿಂದ ಅಂತರ ಕಾಯ್ದುಕೊಂಡ ಗಿರಿಜಾ ಆತನ ಪ್ರೀತಿಯನ್ನ ನಿರಾಕರಿಸುತ್ತಾ ಬಂದಿದ್ದಳು. ಆದರೆ ಪ್ರೀತಿಯ ಹುಚ್ಚು ಹಿಡಿಸಿಕೊಂಡಿದ್ದ ಸಂಪತ್ ಕುಮಾರ್ ಪ್ರೀತಿಸುವಂತೆ ಪದೇ ಪದೇ ಪೀಡಿಸುತ್ತಿದ್ದನು.
ಎಲೆಕ್ಷನ್‌ನಲ್ಲಿ ಸೋತ ಸಹೋದರ- ತಾಯಿ: ಗೆದ್ದವನ ಕೊಲೆಗೆ ಸುಪಾರಿ ಕೊಟ್ಟ ಪೊಲೀಸಪ್ಪ..!
ಸ್ನೇಹಿತರ ಜೊತೆ ವಿದ್ಯಾರ್ಥಿನಿ ಬರ್ತಡೇ ಪಾರ್ಟಿ, ತನ್ನ ಜೊತೆ ಬಾರದಕ್ಕೆ ಹಲ್ಲೆ
ಪೋಷಕರ ಬುದ್ದಿವಾದ ಬಳಿಕ ಪ್ರಿಯಕರನಿಂದ ದೂರಾಗಿದ್ದ ಗಿರಿಜಾ ಎಷ್ಟೇ ಪೀಡಿಸಿದ್ರು ಮತ್ತೆ ಆತನ ಪ್ರೀತಿ ಒಪ್ಪಿರಲಿಲ್ಲ. ಮೊನ್ನೆ ಗಿರಿಜಾ ಹುಟ್ಟುಹಬ್ಬ ಇದ್ದುದ್ದರಿಂದ ಸಂಪತ್ ಕುಮಾರ್ ತನ್ನ ಜೊತೆ ಬರುವಂತೆ ಕರೆದಿದ್ದನು ಆದರೆ ಆಕೆ ಸಂಪತ್ ಜೊತೆ ಹೋಗಲು ಒಪ್ಪದೆ ಕಾಲೇಜು ಸ್ನೇಹಿತರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡು ಫೋಟೋ ಅಪ್‌ಲೋಡ್ ಮಾಡಿದ್ದಳು. ಇದು ಸಂಪತ್ ಕುಮಾರ್ ಕೋಪಕ್ಕೆ ಕಾರಣವಾಗಿತ್ತು. ಬಳಿಕ ಗಿರಿಜಾ ಮನೆಗೆ ತೆರಳಿ ಗಲಾಟೆ ಕೂಡ ನಡೆಸಿದ್ದ ಸಂಪತ್ ನಾವಿಬ್ಬರು ಜೊತೆಯಲ್ಲಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಬೆದರಿಸಿದ್ದ, ಗಿರಿಜಾಳನ್ನ ಮದುವೆ ಮಾಡಿಕೊಡುವಂತೆ ಒತ್ತಾಯಿಸಿದ್ದ ಆದರೆ ನವ್ಯಾ ತಂದೆ ಪರಮೇಶ್ ಬೈದು ಕಳುಹಿಸಿದ್ದರು.
ಬಾಗಲಕೋಟೆ: ಪತ್ನಿ, ಅಮ್ಮನಿಗೆ 1.60 ಕೋಟಿ ವರ್ಗಾಯಿಸಿದ ಎಸ್‌ಬಿಐ ಕ್ಯಾಶಿಯರ್..!
ಬೆಳಿಗ್ಗಿನಿಂದಲೂ ಹೊಂಚು ಹಾಕಿ ಹಲ್ಲೆ
ಪ್ರೀತಿ ನಿರಾಕರಿಸಿದ ಗಿರಿಜಾ ಮೇಲೆ ಹಲ್ಲೆ ನಡೆಸಲು ಪ್ಲಾನ್ ಮಾಡಿದ್ದ ಸಂಪತ್ ಕುಮಾರ್ ಗುರುವಾರ ಬೆಳಿಗ್ಗಿನಿಂದಲೂ ಕಾಲೇಜು ಬಳಿಯೇ ಹೊಂಚು ಹಾಕಿ ಕಾದಿದ್ದನು. ಹಲ್ಲೆ ನಡೆಸುವುದಕ್ಕಾಗಿಯೇ ನಂಬರ್ ಪ್ಲೇಟ್ ಇಲ್ಲದ ಡಿಯೋ ಗಾಡಿಯಲ್ಲಿ ಬಂದಿದ್ದ ಆತ ಮೊಳೆಯಿದ್ದ ರಿಪಿಸ್ ಪಟ್ಟಿ ರೆಡಿಮಾಡಿಕೊಂಡು ಬಂದಿದ್ದಾನೆ. ಸಂಜೆ ಕಾಲೇಜು ಬಿಡುವ ವೇಳೆಗೆ ಆವರಣಕ್ಕೆ ಬಂದ ಸಂಪತ್ ಏಕಾಏಕಿ ರಿಪಿಸ್ ಪಟ್ಟಿಯಿಂದ ನವ್ಯ ತಲೆಗೆ ಮನಸ್ಸೋ ಇಚ್ಛೆ ಹೊಡೆದಿದ್ದಾನೆ.
ಗಂಭೀರವಾಗಿ ಗಾಯಗೊಂಡ ಗಿರಿಜಾಳನ್ನ ಸ್ನೇಹಿತರು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ರು. ಇತ್ತ ಹಲ್ಲೆ ನಡೆಸಿದ್ದ ಸಂಪತ್ ಕುಮಾರ್‌ಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ