ಅಧಿಕೃತವಾಗಿ ಆರ್ಡರ್ ಕಾಪಿ ಮೊದಲೇ PSI ಡ್ರೆಸ್ ಧರಿಸಿ ಭಾಷಣ ಮಾಡಿದ್ದ ಕಾನ್ಸ್​​ಟೇಬಲ್ ಸಸ್ಪೆಂಡ್!

By Suvarna News  |  First Published May 5, 2022, 5:30 PM IST

* ಪಿಎಸ್‌ಐ ಅಕ್ರಮ ನೇಮಕಾತಿ ಹಗರಣ
* ಅಧಿಕೃತವಾಗಿ ಆಯ್ಕೆಯಾಗುವುದಕ್ಕೂ ಮೊದಲೇ PSI ಡ್ರೆಸ್ ಧರಿಸಿ ಭಾಷಣ
* PSI ಡ್ರೆಸ್ ಧರಿಸಿ ಭಾಷಣ ಮಾಡಿದ್ದ ಕಾನ್ಸ್​​ಟೇಬಲ್ ಸಸ್ಪೆಂಡ್


ಬೆಂಗಳೂರು, (ಮೇ.05): 545 ಪೊಲೀಸ್​ ಸಬ್​ ಇನ್ಸ್ ಪೆಕ್ಟರ್​ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮಗಳು (PSI Recruitment Scam) ಪ್ರಕರಣಕ್ಕೆ ದಿನಕ್ಕೊಂದು ಆಯಾಮ ಸಿಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕೃತವಾಗಿ ಆಯ್ಕೆಯಾಗುವುದಕ್ಕೂ ಮೊದಲೆ ಸಮವಸ್ತ್ರ ಧರಿಸಿ, ತಮ್ಮೂರಿನಲ್ಲಿ ಭಾಷಣ ಬಿಗಿದಿದ್ದ ಕಾನ್ಸ್​​ಟೇಬಲ್‌ ಸಸ್ಪೆಂಡ್ ಆಗಿದ್ದಾರೆ.  

ಬೆಂಗಳೂರಿನ ವಿವೇಕನಗರ ಠಾಣೆಯ (Viveknagar constable) ಕಾನ್ಸ್​​ಟೇಬಲ್, ಹಾವೇರಿಯ​​ (Haveri) ಬಸನಗೌಡ ಕರಿಬಸವನಗೌಡ ಸೇವೆಯಿಂದ ಅಮಾನತುಗೊಂಡವರು (Suspend). ಕಾನ್ಸ್​​ಟೇಬಲ್​​ ಬಸನಗೌಡ PSI ತಾತ್ಕಾಲಿಕ ನೇಮಕಾತಿ ಪಟ್ಟಿಯಲ್ಲಿ 27ನೇ Rank ನಲ್ಲಿ ಉತ್ತೀರ್ಣನಾಗಿದ್ದರು. ಅವರು ಮಾಡಿದ ಅಪರಾಧವೆಂದರೆ ಆಯ್ಕೆ ಆದೇಶ ಪ್ರತಿ ಅಧಿಕೃತವಾಗಿ ಕೈಗೆ ಸಿಗುವ ಮೊದಲೇ ಸಮವಸ್ತ್ರ ಧರಿಸಿ, ತಮ್ಮೂರಿನಲ್ಲಿ ಭಾಷಣ ಮಾಡಿದ್ದರು.

Tap to resize

Latest Videos

undefined

ಕಾನ್ಸಟೇಬಲ್ ಹುದ್ದೆಗೆ ರಾಜೀನಾಮೆ ನೀಡದೆ ಪಿಎಸ್‌ಐ ಬಟ್ಟೆ ಧರಿಸಿದ್ದ, ಪೊಲೀಸ್ ನಿಯಮಾವಳಿಯ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ. PSI ಸಮವಸ್ತ್ರ ಧರಿಸಿದ್ದ ಫೋಟೋ ವೈರಲ್ ಆಗಿದ್ದ ಹಿನ್ನೆಲೆಯಲ್ಲಿ ಇಲಾಖೆಗೆ ಮುಜುಗರ ತಂದನೆಂದು ವಿವೇಕನಗರ ಠಾಣೆ ಪಿಸಿ ಹಾವೇರಿಯ​​ ಬಸನಗೌಡ ಕರಿಬಸವನಗೌಡ ಸೇವೆಯಿಂದ ಅಮಾನತುಗೊಳಿಸಿ, ಕೇಂದ್ರ ವಿಭಾಗದ ಡಿಸಿಪಿ M.N.ಅನುಚೇತ್ ಆದೇಶ ಹೊರಡಿಸಿದ್ದಾರೆ.

PSI recruitment scam ಪೊಲೀಸ್ ಇಲಾಖೆಗೆ ಸುತ್ತಿಕೊಂಡ PSI ಅಕ್ರಮ!

ಒಂದೆಡೆ ಅಕ್ರಮ ನಡೆದಿರುವ ಬಗ್ಗೆ ಸಿಐಡಿ ಅಧಿಕಾರಿಗಳು ತೀವ್ರ ತನಿಖೆ ನಡೆಸಿದ್ದು, ಇದರಲ್ಲಿ ಭಾಗಿಯದವರನ್ನ ಒಬ್ಬೊಬ್ಬರೇ ಖೆಡ್ಡಕ್ಕೆ ಕೆಡವುತ್ತಿದ್ದಾರೆ. ಅಭ್ಯರ್ಥಿಗಳು, ರಾಜಕಾರಣಿಗಳು ಸೇರಿದಂತೆ ಅಭ್ಯರ್ಥಿಗಳನ್ನು ಸಹ ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ಇದರ ಮಧ್ಯೆ ಹಾವೇರಿ ಮೂಲದ ಪೇದೆಯೊಬ್ಬರು ತಾವು ಪಿಎಸ್‌ಐ ಆಗಿ ಆಯ್ಕೆಯಾಗಿರುವದಕ್ಕೆ ಸಂತಸಗೊಂಡು ರೂಲ್ಸ್ ಬ್ರೇಕ್ ಮಾಡಿದ್ದಾನೆ. ಅಧಿಕೃತ ಆದೇಶ ಪ್ರತಿ ಕೈಸೇರುವ ಮುನ್ನವೇ ಪೇದೆ ಪಿಎಸ್‌ಐ ಡ್ರೆಸ್‌ನಲ್ಲಿ ಮಿಂಚಿದ್ದಾನೆ. ಅಲ್ಲದೇ ಅವರ ಅಭಿಮಾನಿಗಳು, ಸಂಬಂಧಿಗಳು, ಗ್ರಾಮಸ್ಥರು ಪಿಎಸ್‌ಐ ಆಗಿರುವುದಕ್ಕೆ ಬಾನರ್ ಹಾಕಿ ಜೈಕಾರ ಹಾಕಿದ್ದಾರೆ. ಸಾಲದಕ್ಕೆ ಅಭಿನಂದನೆ ಸಮಾರಭವನ್ನು ಸಹ ಮಾಡಿದ್ದಾರೆ. ಈ ಸಮಾರಂಭದಲ್ಲಿ ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿದ್ದ ಪೇದೆಯ ಭಾಷಣ ಮಾಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿದೆ.

ಒಟ್ಟಿನಲ್ಲಿ ಕೂಸು ಹುಟ್ಟುವ ಮುನ್ನ ಕುಲಾಯಿ ಹೊಲಿದರು ಎನ್ನುವಂತೆ ಪಿಎಸ್‌ಐ ಆರ್ಡರ್ ಕಾಪಿ ಕೈ ಸೇರುವ ಮೊದಲೇ ಪಿಎಸ್‌ಐ ಡ್ರೆಸ್‌ ಹಾಕಿಕೊಂಡು ಇದೀಗ ಕಾನ್ಸ್‌ಟೇಬಲ್ ಹುದ್ದೆಯಿಂದ ಸಸ್ಪೆಂಡ್ ಆಗಿದ್ದಾನೆ. ಇದೀಗ ಅತ್ತ ಕಾನ್ಸ್‌ಟೇಬಲ್ ಇಲ್ಲ. ಇತ್ತ ಪಿಎಸ್‌ಐನೂ ಇಲ್ಲ. ಇದು ಬೇಕಿತ್ತಾ?

click me!