Chitradurga: ಹೊಳಲ್ಕೆರೆ ಬಿಜೆಪಿ ಶಾಸಕ ಚಂದ್ರಪ್ಪ ಪತ್ನಿ, ಪುತ್ರರ ವಿರುದ್ಧ FIR

By Girish GoudarFirst Published May 5, 2022, 9:05 AM IST
Highlights

*  ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲು 
*  ಆಸ್ತಿ ಲಪಟಾಯಿಸಿದ ಆರೋಪ
*  ಕೋರ್ಟ್ ಮೊರೆ ಹೋದ ಮೃತನ ಸಂಬಂಧಿಕರು 
 

ಚಿತ್ರದುರ್ಗ(ಮೇ.05): ಜಿಲ್ಲೆಯ ಹೊಳಲ್ಕೆರೆ(Holalkere) ಬಿಜೆಪಿ(BJP) ಶಾಸಕ ಎಂ.ಚಂದ್ರಪ್ಪ ಪತ್ನಿ, ಪುತ್ರರ ವಿರುದ್ಧ ಎಫ್‌ಐಆರ್‌(FIR) ದಾಖಲಾಗಿದೆ. ಹೌದು, ಮೃತ ವ್ಯಕ್ತಿಗೆ‌ ಸೇರಿದ ಆಸ್ತಿ ಲಪಟಾಯಿಸಿದ ಆರೋಪದ ಹಿನ್ನೆಲೆಯಲ್ಲಿ ಶಾಸಕ ಎಂ.ಚಂದ್ರಪ್ಪ ಪತ್ನಿ ಚಂದ್ರಕಲಾ, ಪುತ್ರರಾದ ರಘುಚಂದನ್, ದೀಪ್ ಚಂದನ್ ವಿರುದ್ಧ ಕೇಸ್ ದಾಖಲಿಸಲಾಗಿದೆ.

ಶ್ರೀಧರ್ ಎಂಬುವರಿಗೆ ಸೇರಿ‌‌‌ದ ನಿವೇಶನಗಳನ್ನ(Sites) ಕಬಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಶ್ರೀಧರ ಬಳಿ ಜಿಪಿಎ ಪಡೆದಿದ್ದ ನಾಗರಾಜ್‌ರಿಂದ ಆಸ್ತಿ(Property) ಪಡೆಯಲಾಗಿದೆ ಅಂತ ಆರೋಪ(Allegation) ಕೇಳಿ ಬಂದಿದೆ. ಶ್ರೀಧರ್ ಮೃತರಾದ ಬಳಿಕ‌ ಜಿಪಿಎ(GPA) ದುರುಪಯೋಗ ಮಾಡಿಕೊಂಡು ಆಸ್ತಿ ಕಬಳಿಕೆ ಮಾಡಲಾಗಿದೆ.

ಆದಿವಾಸಿ ಮಹಿಳೆ ಅರೆಬೆತ್ತಲೆಗೊಳಿಸಿ ಹಲ್ಲೆ: ಬಿಜೆಪಿ ಮುಖಂಡ ಸೇರಿ 9 ಮಂದಿ ವಿರುದ್ಧ ಎಫ್‌ಐಆರ್‌

ಈ ಹಿನ್ನಲೆಯಲ್ಲಿ ನಾಗರಾಜ್ ಮತ್ತು ಎಂ.ಚಂದ್ರಪ್ಪ(M Chandrappa) ಕುಟುಂಬದ ವಿರುದ್ಧ ಹೊಳಲ್ಕೆರೆ(Holalkere) ಪೊಲೀಸ್(Police) ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಸಂಬಂಧ ಮೃತ ಶ್ರೀಧರ್ ಸಹೋದರಿ ಲತಾ, ಪದ್ಮಜಾ ಮತ್ತಿತರರು ಕೋರ್ಟ್ ಮೊರೆ ಹೋಗಿದ್ದಾರೆ. 

ಆರೋಪಿಗಳಾದ ನಾಗರಾಜ್, ಶಾಸಕ ಚಂದ್ರಪ್ಪ ಪತ್ನಿ ಚಂದ್ರಕಲಾ, ಪುತ್ರ‌ ರಘು ಚಂದನ್, ದೀಪ್ ಚಂದನ್ ಹಾಗೂ ಸಬ್ ರೆಜಸ್ಟರ್ ನಾಗರತ್ನ ವಿರುದ್ಧ ಕೋರ್ಟ್‌ಗೆ ಖಾಸಗಿ ದೂರು ದಾಖಲಾಗಿದೆ. 
ಕೋರ್ಟ್ ಮೂಲಕ ಠಾಣೆಗೆ ಸೂಚನೆ ಬಂದ ಹಿನ್ನೆಲೆಯಲ್ಲಿ ಏ. 30 ರಂದು ಕಲಂ 404, 405, 415, 420, 423, 463, 464, 466, 468, 470, ರೆ/ವಿ 149 ಅಡಿಯಲ್ಲಿ ಪೊಲೀಸರು ಪ್ರಕರಣವನ್ನ ದಾಖಲಿಸಿಕೊಂಡಿದ್ದಾರೆ. 
 

click me!