ಒಡಹುಟ್ಟಿದವನ್ನು ಹೊಲಕ್ಕೆ ಕರೆದು ಕೊಡಲಿಯಿಂದ ಕೊಚ್ಚಿ ಕೊಂದ ಸಹೋದರರು!

By Gowthami K  |  First Published Jun 30, 2023, 8:36 PM IST

ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ಆಸ್ತಿ ವಿಚಾರಕ್ಕೆ ಆರಂಭವಾದ ಗಲಾಟೆ ಸಹೋದರನ ಹತ್ಯೆಯಲ್ಲಿ ಅಂತ್ಯವಾಗಿದೆ.


ಗದಗ (ಜೂ.30): ಆಸ್ತಿ ವಿಚಾರಕ್ಕೆ ಆರಂಭವಾದ ಗಲಾಟೆ ಸಹೋದರನ ಹತ್ಯೆಯಲ್ಲಿ ಅಂತ್ಯವಾಗಿದೆ.. ರೋಣ ಪಟ್ಟಣದ ಹೊರ ವಲಯದ ಜಿಗಳೂರು ರಸ್ತೆಯ ಜಮೀನಲ್ಲಿ ನಡೆದ ಸಹೋದರರ ಗಲಾಟೆಯಲ್ಲಿ ಶೇಕಪ್ಪ ನವಲಗುಂದ (35) ಎಂಬಾತನನ್ನ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಪಟ್ಟಣದ ಹೊರವಲಯದಲ್ಲಿರೋ ಏಳು ಎಕರೆ ಆಸ್ತಿ ವಿಚಾರವಾಗಿ ಶೇಕಪ್ಪ ಹಾಗೂ ಸಹೋದರರಾದ ಲೋಕಪ್ಪ, ರೇಣುಕಪ್ಪ, ಬಸಪ್ಪ ಮಧ್ಯೆ ಗಲಾಟೆ ಇತ್ತು. ತಿಂಗಳ ಹಿಂದೆಯೇ ಕಿರಿಯ ಸಹೋದರ ಶೇಕಪ್ಪ ಹಾಗೂ ಲೋಕಪ್ಪ ಮಧ್ಯೆ ಜಗಳ ಆಗಿತ್ತಂತೆ. ನಾಲ್ವರು ಸಹೋದರರು ಮಧ್ಯೆ ಹಣ, ಜಮೀನು ವಿಷಯವಾಗಿ ನಿನ್ನೆಯೂ ಗಲಾಟೆ ನಡೆದಿದೆ.

ನೇತ್ರಾವತಿ ಪೀಕ್ ಸ್ಪಾಟ್ ಚಾರಣ ಹೋಗಿದ್ದ ಮೈಸೂರು ಯುವಕ ಹೃದಯಘಾತದಿಂದ ಸಾವು

Tap to resize

Latest Videos

undefined

ಆಸ್ತಿ ವಿಷಯವಾಗಿ ಮಾತ್ನಾಡೋಣ ಅಂತಾ ಜಮೀನಿಗೆ ಕರೆದಿದ್ದ ಲೋಕಪ್ಪ, ಸಹೋದರನನ್ನ ಹತ್ಯೆ ಮಾಡಿದ್ದಾನೆ.  ಜಮೀನು, ಸೈಟ್ ವಿಷಯವಾಗಿ ಆಗಾಗ ಗಲಾಟೆ ನಡೀತಿತ್ತು. ಮಾತ್ನಾಡೊಣ ಅಂತಾ ಕರೆದು ಲೋಕಪ್ಪ, ರೇಣುಕಪ್ಪ, ಬಸಪ್ಪ ಕೊಲೆ ಮಾಡಿದ್ದಾರೆ ಅಂತಾ ಮೃತ ಶೇಕಪ್ಪ ಪತ್ನಿ ವಿದ್ಯಾ ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರೋ ರೋಣ ಪೊಲೀಸರು, ತನಿಖೆ ನಡೆಸಿದ್ದಾರೆ.. ತಲೆ ಮರೆಸಿಕೊಂಡಿರೋ ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.

ಹೊಸಪೇಟೆ ಬಳಿ ಭೀಕರ ಅಪಘಾತ: ಬಳ್ಳಾರಿ ಕೌಲ್‌ಬಜಾರ್‌ನ ನಾಲ್ವರು ಸಾವು

ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ವ್ಯಕ್ತಿಯ ಕೊಲೆಗೈದು ಪರಾರಿ
ಬೆಂಗಳೂರು: ವ್ಯಕ್ತಿಯೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ದುಷ್ಕರ್ಮಿಗಳು ಹತ್ಯೆಗೈದು ಪರಾರಿಯಾಗಿರುವ ಘಟನೆ ತಲಘಟ್ಟಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತನ ಹೆಸರು ಪತ್ತೆಯಾಗಿಲ್ಲ. ಆತನ ವಯಸ್ಸು 28-30 ವರ್ಷವಾಗಿದ್ದು, ಸೊಂಟಕ್ಕೆ ಕಪ್ಪು ಧಾರ ಕಟ್ಟಿಕೊಂಡಿದ್ದಾನೆ. ನೈಸ್‌ ರಸ್ತೆಯ ಸೋಂಪುರ ಸಮೀಪ ಹೆಮ್ಮಿಗೆಪುರಕ್ಕೆ ಸಾಗುವ ದಾರಿಯಲ್ಲಿ ಗುರುವಾರ ಬೆಳಗ್ಗೆ 6.50ರಲ್ಲಿ ರಕ್ತಸಿಕ್ತವಾಗಿ ಬಿದ್ದಿದ್ದ ಅಪರಿಚಿತನ ಮೃತದೇಹ ಕಂಡು ಪೊಲೀಸರಿಗೆ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು, ಮೃತ ದೇಹವನ್ನು ಪರಿಶೀಲಿಸಿದ್ದಾರೆ. ಆದರೆ ಆತನ ಗುರುತು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ಹೆಮ್ಮಿಗೆಪುರ ರಸ್ತೆಗೆ ಕರೆತಂದು ಕೊಲೆ ಮಾಡಿರಬಹುದು ಎಂದು ಶಂಕಿಸಿರುವ ಪೊಲೀಸರು, ಈ ಕೃತ್ಯ ನಸುಕಿನ 2ರಿಂದ 4 ಗಂಟೆಯೊಳಗೆ ನಡೆದಿದೆ ಎಂದು ಹೇಳಿದ್ದಾರೆ. ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

click me!