
ಅಜ್ಮೀರ್ (ಸೆ. 30): ತನ್ನ ಇಬ್ಬರು ಮಕ್ಕಳೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 23 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆ ತಪ್ಪಿಸಿಕೊಳ್ಳುವುದನ್ನು ತಡೆಯಲು ಆಕೆಯ ಬಟ್ಟೆಗಳನ್ನು ಆರೋಪಿ ಕಳಚಿದ್ದಾನೆ ಎಂದು ವರದಿಗಳು ತಿಳಿಸಿವೆ. ಮಹಿಳೆ ತನ್ನ ಮಕ್ಕಳೊಂದಿಗೆ ಭೋಪಾಲ್‌ನಿಂದ ಭಿಲ್ವಾರಕ್ಕೆ ಪ್ರಯಾಣಿಸುತ್ತಿದ್ದಳು. ರೈಲು ಅಜ್ಮೀರ್ ತಲುಪಿದಾಗ ಆಹಾರ ಖರೀದಿಸಲು ಮುಂದಾದಾಗ ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಭಗವಾನ್ ಗಂಜ್ ಪ್ರದೇಶದ ರವಿ ಎಂದು ಗುರುತಿಸಲಾದ ಆರೋಪಿ ಆಕೆಯನ್ನು ಹಿಂಬಾಲಿಸಲು ಪ್ರಾರಂಭಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಜ್ಮೀರ್ ನಿಲ್ದಾಣದ ಬಳಿ ಇರುವ ಹೋಟೆಲ್‌ವೊಂದಕ್ಕೆ ಹೋದಾಗ ವ್ಯಕ್ತಿ ತನ್ನನ್ನು ಹಿಂಬಾಲಿಸಲು ಪ್ರಾರಂಭಿಸಿದನು ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ. ರಾತ್ರಿ ಉಳಿದುಕೊಳ್ಳಲು ಅಗ್ಗದ ಹೋಟೆಲ್ ಹುಡುಕಿ ಕೊಡುವುದಾಗಿ ಆರೋಪಿ ಮಹಿಳೆಗೆ ಭರವಸೆ ನೀಡಿದ್ದಾನೆ. ಆರೋಪಿ ಮಹಿಳೆ ಒಂಬತ್ತು ವರ್ಷದ ಮಗನನ್ನು ರೈಲ್ವೇ ನಿಲ್ದಾಣದಲ್ಲಿ ಅವರಿಗಾಗಿ ಕಾಯುವಂತೆ ಒತ್ತಾಯಿಸಿದ್ದು ಮಹಿಳೆ ಮತ್ತು ಅವಳ ನಾಲ್ಕು ವರ್ಷದ ಮಗಳನ್ನು ತನ್ನೊಂದಿಗೆ ಕರೆದೊಯ್ದಿದ್ದಾನೆ.
ಆರೋಪಿ ರವಿ ತಾಯಿ ಮತ್ತು ಮಗಳನ್ನು ಕುಂದನ್ ನಗರದ ನಿರ್ಜನ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಮಹಿಳೆ ತಪ್ಪಿಸಿಕೊಳ್ಳಲು ಸಾಧ್ಯವಾಗದಂತೆ ಬಟ್ಟೆಗಳನ್ನು ಕಳಚಿದ್ದಾನೆ. ಆದರೆ ಮಹಿಳೆ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಸಮೀಪದ ಪೊಲೀಸ್ ಠಾಣೆಗೆ ಬಂದಿದ್ದಾಳೆ.
Crime News Today: 10 ವರ್ಷದ ಬಾಲಕನ ಮೇಲೆ ಗ್ಯಾಂಗ್ ರೇಪ್ ಪ್ರಕರಣ: ಅಪ್ರಾಪ್ತ ಆರೋಪಿಗಳ ಬಂಧನ
ಮಹಿಳೆಯು ಸೆಪ್ಟೆಂಬರ್ 27 ರಂದು ಟವೆಲ್‌ನಲ್ಲಿ ಮೈ ಸುತ್ತಿಕೊಂಡು ಠಾಣೆಗೆ ಬಂದು ಇಡೀ ಘಟನೆಯನ್ನು ವಿವರಿಸಿದ್ದಾಳೆ ಎಂದು ಠಾಣೆಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ತನ್ನ ಮಗಳು ಆ ವ್ಯಕ್ತಿಯ ವಶದಲ್ಲಿದ್ದಾಳೆ ಎಂದೂ ಹೇಳಿದ್ದಾಳೆ. ಆರೋಪಿ ರವಿಯನ್ನು ಪೊಲೀಸರು ಗುರುವಾರ ಬಂಧಿಸಿ ರಿಮಾಂಡ್‌ಗೆ ಒಪ್ಪಿಸಿದ್ದಾರೆ.
ಸುಬ್ರಹ್ಮಣ್ಯ: ಬಾಲಕಿ ಮೇಲೆ ಅತ್ಯಾಚಾರ: 14 ಮಂದಿ ವಿರುದ್ಧ ದೂರು: 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ದೂರಿನ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಮಹಿಳೆ ಸೇರಿ 14 ಮಂದಿ ವಿರುದ್ಧ ದೂರು ದಾಖಲಾಗಿದೆ. ಸುಬ್ರಹ್ಮಣ್ಯದ 14 ವರ್ಷದ ಬಾಲಕಿಯ ಮೇಲೆ 2015ರ ಜನವರಿಯಿಂದ 2022ರ ಮೇ ವರೆಗೆ ಬೇರೆ ಬೇರೆ ಆರೋಪಿಗಳು ಬೇರೆ ಬೇರೆ ಸ್ಥಳದಲ್ಲಿ ಅತ್ಯಾಚಾರ ನಡೆಸಿದ ಬಗ್ಗೆ ದೂರಿನಲ್ಲಿ ತಿಳಿಸಲಾಗಿದೆ.
ವೇದಾವತಿ, ವಿನೋದ್ ಮಣಿಯಾಣಿ, ಪ್ರವೀಣ್, ದಯಾನಂದ, ಹನುಮಂತ, ಆನಂದ, ಪ್ರದೀಪ್, ಅಚ್ಯುತಾ, ಸತೀಶ್ ಗೌಡ, ಜಯಪ್ರಕಾಶ್, ಜಯಪ್ರಕಾಶ್ ತಮ್ಮ, ಮಾಂಕು, ಗುತ್ತಿಗಾರಿನ ಅಪರಿಚಿತ ವ್ಯಕ್ತಿ ಎಂಬವರ ಮೇಲೆ ದೂರು ದಾಖಲಾಗಿದೆ. ಬಾಲಕಿ 5ನೇ ತರಗತಿಯಲ್ಲಿ ಇರುವ ಸಂದರ್ಭದಲ್ಲಿ ಆಕೆಯ ಅತ್ತಿಗೆ ವೇದಾವತಿ ಎಂಬಾಕೆ ಸಲಿಂಗ ಕಾಮಕ್ಕೆ ಬಾಲಕಿಯನ್ನು ಬಳಸಿಕೊಂಡಿದ್ದಾಳೆ ಎಂದು ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ. ಬಳಿಕ ವಿವಿಧ ಆರೋಪಿಗಳು ಬೇರೆ ಬೇರೆ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬೆದರಿಕೆ ಒಡ್ಡಿರುವ ಬಗ್ಗೆಯೂ ದೂರಿನಲ್ಲಿ ತಿಳಿಸಲಾಗಿದೆ. ಆರೋಪಿಗಳ ವಿರುದ್ಧ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದಲ್ಲಿ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ. ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ