ಮೋಜಿಗಾಗಿ ದುಬಾರಿ ಬೈಕ್‌ ಕದಿಯುತ್ತಿದ್ದ ಕಂಪನಿ ನೌಕರ

By Kannadaprabha NewsFirst Published Jul 1, 2022, 4:15 AM IST
Highlights

*  ಖಾಸಗಿ ಕಂಪನಿ ಉದ್ಯೋಗಿಯೊಬ್ಬನನ್ನ ಸೆರೆ ಹಿಡಿದ ಪೊಲೀಸರು 
*  ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಸಾಗರ್‌ ಬಂಧಿತ ಆರೋಪಿ
*  ಬೈಕ್‌ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದ ಸಾಗರ್‌
 

ಬೆಂಗಳೂರು(ಜು.01): ಮೋಜು ಮಸ್ತಿಗೆ ಬೈಕ್‌ಗಳನ್ನು ಕಳವು ಮಾಡುತ್ತಿದ್ದ ಖಾಸಗಿ ಕಂಪನಿ ಉದ್ಯೋಗಿಯೊಬ್ಬ ರಾಜಾಜಿ ನಗರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಸಾಗರ್‌ ಬಂಧಿತನಾಗಿದ್ದು, ಆರೋಪಿಯಿಂದ .11.6 ಲಕ್ಷ ಮೌಲ್ಯದ 8 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ರಾಜಾಜಿ ನಗರ 3ನೇ ಹಂತದ ಕರಿಗಿರಿ ಬೇಕರಿ ಮುಂದೆ ಬೈಕ್‌ ಕಳ್ಳತನವಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.

Latest Videos

ಬಾಗಲಕೋಟೆ: ಊಟ, ಒಳ ಉಡುಪುಗಳನ್ನು ಕದಿಯೋದೆ ಈ ಖದೀಮನ ಟಾರ್ಗೆಟ್‌..!

ಶಿಡ್ಲಘಟ್ಟ ಮೂಲದ ಸಾಗರ್‌ ವೃತ್ತಿಪರ ಬೈಕ್‌ ಕಳ್ಳನಾಗಿದ್ದು, ಆತನ ಮೇಲೆ ಶಿಡ್ಲಘಟ್ಟಸೇರಿದಂತೆ ಇತರೆಡೆ ಪ್ರಕಣಗಳಿವೆ. ನಗರದ ಖಾಸಗಿ ಕಂಪನಿಯಲ್ಲಿ ನೌಕರಿಯಲ್ಲಿದ್ದ ಆತ, ಕೆಲಸ ಮುಗಿದ ಬಳಿಕ ರಾತ್ರಿ ವೇಳೆ ಪಿಜಿ ಹಾಗೂ ಮನೆ ಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸುತ್ತಿದ್ದ ದುಬಾರಿ ಬೈಕ್‌ಗಳನ್ನು ಕಳವು ಮಾಡುತ್ತಿದ್ದ. ಬಳಿಕ ಆ ಬೈಕ್‌ಗಳಲ್ಲಿ ಜಾಲಿ ರೈಡ್‌ ಮಾಡಿ ಪ್ರೆಟೋಲ್‌ ಖಾಲಿಯಾದ ಬಳಿಕ ಎಲ್ಲಂದರಲ್ಲೇ ಬಿಟ್ಟು ಹೋಗುತ್ತಿದ್ದ. ಕೆಲವು ಬೈಕ್‌ಗಳನ್ನು ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
 

click me!