
ಉತ್ತರಪ್ರದೇಶ (ಜೂ. 30): ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ತಾಂತ್ರಿಕನೊಬ್ಬನನ್ನು ಬುಧವಾರ ಜಗ್ನೇರ್‌ನಲ್ಲಿ ದೇವಿ ಮಾತೆಯನ್ನು ಸಮಾಧಾನಪಡಿಸಲು 2.5 ವರ್ಷದ ಬಾಲಕನನ್ನು ‘ಬಲಿ’ ಕೊಟ್ಟ ಆರೋಪದ ಮೇಲೆ ಬಂಧಿಸಲಾಗಿದೆ. ಆರೋಪಿ, ಭೋಲಾ ತಾನು 'ತಾಂತ್ರಿಕ' ಎಂದು ಹೇಳಿಕೊಂಡಿದ್ದಾನೆ. ಎರಡು ಕುಟುಂಬಗಳ ನಡುವಿನ ಆಸ್ತಿ ವಿವಾದದ ಲಾಭ ಪಡೆಯಲು ಈತ ಪ್ರಯತ್ನಿಸಿದ್ದು ಚಿಕ್ಕ ಮಗುವನ್ನು ದೇವಿಗೆ ಅರ್ಪಿಸಿದರೆ ಅವರ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದು ನಂಬಿದ್ದ ಎನ್ನಲಾಗಿದೆ.
ಬಲಿ ನೀಡುಲು ಈ ವ್ಯಕ್ತಿ ಎದುರಾಳಿ ಕುಟುಂಬದ ಮಗುವನ್ನು ಆಯ್ಕೆ ಮಾಡಿದ್ದಾನೆ. ಮಗುವನ್ನು ಕೊಂದ ನಂತರ ಮಗುವಿನ ರಕ್ತವನ್ನು ದೇವಿಗೆ ಅರ್ಪಿಸಿ, ಶವವನ್ನು ಗೋಣಿಚೀಲದಲ್ಲಿ ಸುತ್ತಿ ನದಿಯಲ್ಲಿ ಎಸೆದಿದ್ದಾನೆ. ಈ ಘಟನೆಯು ಪ್ರದೇಶದಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿದೆ. ಕೊಲೆಯ ವಿಷಯ ತಿಳಿದ ತಕ್ಷಣ ಪೊಲೀಸರು ಭೋಲಾನನ್ನು ಬಂಧಿಸಿದ್ದಾರೆ.
ಬರಿಗಾವನ್ ಗ್ರಾಮದ ನಿವಾಸಿ ರಾಮ್ ಅವತಾರ್ ತನ್ನ ಮಗ ರಿತಿಕ್ ನಾಪತ್ತೆಯಾಗಿದ್ದಾನೆ ಎಂದು ವರದಿ ಮಾಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ತನಿಖೆ ನಡೆಸಿದ ಪೊಲೀಸರಿಗೆ ಕಿವಾರ್ ನದಿಯ ದಡದಲ್ಲಿ ಗೋಣಿಚೀಲದಲ್ಲಿ ಬಾಲಕನ ಶವ ಪತ್ತೆಯಾಗಿದೆ. ಬಳಿಕ ಮೃತದೇಹವನ್ನು ಗುರುತಿಸಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು.
ಇದನ್ನೂ ಓದಿ: ಚಾಮರಾಜನಗರ: ಮನುಷ್ಯನನ್ನೇ ಬಲಿ ಕೊಟ್ಟು ಮತ್ತೆ ಬದುಕಿಸುವ ಸೀಗಮಾರಮ್ಮ ಬಲಿ ರಹಸ್ಯ!
ಹೆಚ್ಚಿನ ತನಿಖೆಯಲ್ಲಿ ಹುಕುಮ್ ಸಿಂಗ್, ಅಲಿಯಾಸ್ ಭೋಲಾ, ಮಗು ಕಣ್ಮರೆಯಾಗುವ ಮೊದಲು ಮಗುವಿನೊಂದಿಗೆ ಕಾಣಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಭೋಲಾ ಮಗುವನ್ನು ಕರೆದೊಯ್ದಿರುವ ಬಗ್ಗೆ ಯಾರಿಗಾದರೂ ಹೇಳಿದರೆ, ತನ್ನ ಇಡೀ ಕುಟುಂಬವನ್ನು ಚಾಮದ್ ದೇವಿ ಮಾ ದೇವಸ್ಥಾನದಲ್ಲಿ ಬಲಿ ನೀಡುವುದಾಗಿ ಭೋಲಾ ಬೆದರಿಕೆ ಹಾಕಿದ್ದಾನೆ ಎಂದು ಸ್ಥಳೀಯ ಮಗುವೊಂದು ಖಚಿತಪಡಿಸಿದೆ.
ತಪ್ಪೊಪ್ಪಿಕೊಂಡ ಆರೋಪಿ: ವಚಾರಣೆಯ ನಂತರ, ಭೋಲಾ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದು ರಿತಿಕ್‌ನನ್ನು ಉಸಿರುಗಟ್ಟಿಸಿ ಕೊಂದಿರುವುದಾಗಿ ತಿಳಿಸಿದ್ದಾನೆ. ಬಳಿಕ ನಂತರ ಅವನ ದೇಹವನ್ನು ಚಮದ್ ದೇವಿ ಮಾವಿಗೆ ಅರ್ಪಿಸಿರುವುದಾಗಿ ಹೇಳಿದ್ದಾನೆ. ತ್ಯಾಗದ ನಂತರ, ದೇಹವನ್ನು ಕಿವಾರ್ ನದಿಗೆ ಎಸೆದಿದ್ದು, ಪ್ರವಾಹವು ದೇಹವನ್ನು ದೂರ ಕೊಂಡೊಯ್ಯುತ್ತದೆ ಎಂದು ಭಾವಿಸಿರುವುದಾಗಿ ಹೇಳಿದ್ದಾನೆ.
ರಾಮ್ ಅವತಾರ್ ಮತ್ತು ಅವರ ಮಲತಂದೆ ಗರೀಬಾ ಮಧ್ಯೆ ಆಸ್ತಿ ವಿವಾದವು ಭುಗಿಲೆದ್ದಿತ್ತು. ರಿತಿಕ್‌ನ ಮರಣದ ನಂತರ ರಾಮ್ ಅವತಾರ್ ಗ್ರಾಮವನ್ನು ತೊರೆಯುತ್ತಾನೆ ಮತ್ತು ಅವನು ಗರೀಬಾನ ಆಸ್ತಿಯನ್ನು ಅತೀ ಕಡಿಮೆ ಬೆಲೆಗೆ ಖರೀದಿಸಬಹುದು ಎಂದು ಭೋಲಾ ಭಾವಿಸಿದ್ದ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ