Mysuru Accident: ಸಾವಿನ ದವಡೆಯಲ್ಲಿದ್ದರೂ ಅಪ್ಪನನ್ನು ಕೇಳುತ್ತಿರುವ ಮಗು, ಅನಾಥನಾದ ಅರಿವೇ ಇಲ್ಲ

By Sathish Kumar KH  |  First Published May 29, 2023, 11:30 PM IST

ಮೈಸೂರಿನ ಬಳಿ ನಡೆದ ಇನ್ನೋವಾ ಕಾರು ಹಾಗೂ ಖಾಸಗಿ ಬಸ್‌ ಅಪಘಾತದಲ್ಲಿ ಸಾವನ್ನಪ್ಪಿದ 10 ಮಂದಿ ಬಳ್ಳಾರಿ ಬಳಿಯ ಸಂಗನಕಲ್ಲು ಗ್ರಾಮದ ಲಿಂಗಾಯತ ಸಮುದಾಯದವರು. 


ಮೈಸೂರು (ಮೇ 29): ಮೈಸೂರು ಜಿಲ್ಲೆಯ ಟಿ. ನರಸೀಪುರದ ಬಳಿ ನಡೆದ ಇನ್ನೋವಾ ಕಾರು ಹಾಗೂ ಖಾಸಗಿ ಬಸ್‌ ನಡುವೆ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ 10 ಮಂದಿಯೂ ಬಳ್ಳಾರಿಯ ಸಂಗನಕಲ್ಲು ಗ್ರಾಮದ ಒಂದೇ ಕುಟುಂಬದವರಾಗಿದ್ದು, ಖಾನಾವಳಿಗೆ ರೊಟ್ಟಿ ಸುಟ್ಟುಕೊಡುತ್ತಿದ್ದ ಲಿಂಗಾಯತ ಸಮುದಾಯದವರಾಗಿದ್ದಾರೆ. ಅನ್ನ ಹಾಕುವ ಕೈಗಳೇ ಈಗ ದುರಂತದಲ್ಲಿ ಇಲ್ಲದಂತಾಗಿವೆ. ಆದರೆ, ಸಾವಿನ ದವಡೆಯಲ್ಲಿರುವ ಮಗು ತನ್ನ ಅಪ್ಪ ಎಲ್ಲಿ ಹೇಗಿದ್ದಾನೆ ಎಂದು ಕೇಳುತ್ತಿರುವುದು ಎಲ್ಲರ ಮನವನ್ನು ಕಲಕುತ್ತಿದೆ. ಸಾವಿನ ಸನಿಹದಲ್ಲಿಯೂ ತನ್ನವರಿಗಾಗಿ ಪುಟ್ಟ ಹೃದಯ ಹಂಬಲಿಸುತ್ತಿದೆ. ಆದರೆ, ತಾನು ಅನಾಥನಾಗಿದ್ದೇನೆ ಎಂಬ ಅರಿವು ಮಗುವಿಗೆ ಇಲ್ಲದಂತಾಗಿದೆ.

ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವಂತೆ ನಡೆದ ಮೈಸೂರು ಜಿಲ್ಲೆಯ ಟಿ. ನರಸೀಪುರ ಬಳಿಯ ರಸ್ತೆ ಅಪಘಾತವು ಕರಾಳ ಸೋಮವಾರ ಎನ್ನುವಷ್ಟು ಕಹಿಯನ್ನು ತೋರಿಸಿದೆ. ಮೇ.27 ಕ್ಕೆ ಬಳ್ಳಾರಿ ಸಂಗನಕಲ್ಲು ಗ್ರಾಮದ ಈ ಕುಟುಂಬ ಟ್ರೈನ್ ಮೂಲಕ ಮೈಸೂರಿಗೆ ಬಂದಿತ್ತು. ಮೈಸೂರಲ್ಲೇ ಟ್ರಾವೆಲ್ಸ್ ಮೂಲಕ ಇನೋವಾ ಕಾರು ಬುಕ್ ಮಾಡಿ ಮೈಸೂರಿನ ಅಂಬಾವಿಲಾಸ ಅರಮನೆ, ಚಾಮರಾಜೇಂದ್ರ ಮೃಗಾಲಯಕ್ಕೆ ತೆರಳಿ ಪ್ರಾಣಿ ಪಕ್ಷಿಗಳನ್ನ ನೊಡ್ಕೊಂಡು ಆಮೇಲೆ ಮಹದೇಶ್ವರ ಬೆಟ್ಟ, ಬಿಳಿಗಿರಿ ರಂಗನಬೆಟ್ಟಕ್ಕೆ ತೆರಳಿ ದೇವರ ದರ್ಶನ ಪಡೆದು ವಾಪಸ್ ಆಗುತ್ತಿತ್ತು. ಆದರೆ ವಾಪಸ್ ಕೊಳ್ಳೆಗಾಲ ಮಾರ್ಗವಾಗಿ ಟಿ.ನರಸೀಪುರ ಕಡೆ ಬರುವ ವೇಳೆ ಕುರುಬೂರು ಸಮೀಪದ ಪಿಂಜರಪೋಲ್ ಕಾಸ್‌ನಲ್ಲಿ ಎದುರಾದ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ 10 ಸಾವನ್ನಪ್ಪಿದ್ದಾರೆ. ಈ ಭೀಕರ ದೃಶ್ಯ ಬಸ್‌ನ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Latest Videos

undefined

Mysuru Road Accident: ಟಿ.ನರಸೀಪುರದಲ್ಲಿ ಭೀಕರ ರಸ್ತೆ ಅಪಘಾತ, ಬಳ್ಳಾರಿಯ 10 ಮಂದಿ ಬಲಿ!

ಗಂಭೀರ ಸ್ಥಿತಿಯಲ್ಲಿರುವ ಗು ಅಪ್ಪನನ್ನು ಕೇಳುತ್ತಿದೆ: ರಸ್ತೆ ಅಫಘಾತ ಪ್ರಕರಣದ ಬಗ್ಗೆ ಮಾತನಾಡಿದ ಸಚಿವ ಬಿ. ನಾಗೇಂದ್ರ ಅವರು, ಮೃತ 10 ಜನರು ಒಂದೇ ಕುಟುಂಬದವರು. ಖಾನಾವಳಿಗಳಿಗೆ ರೊಟ್ಟಿ ಮಾಡಿಕೊಡುವುದು ಅವರ ವೃತ್ತಿ ಆಗಿತ್ತು. ಮನೆಯವರೆಲ್ಲಾ ಸೇರಿ ರೊಟ್ಟಿ ಮಾರಿ ಜೀವನ ನಡೆಸುತ್ತಿದ್ದರು. ಎಲ್ಲರೂ ಲಿಂಗಾಯತ ಸಮುದಾಯದವರು. ನಾನು ಈ ಕುಟುಂಬವನ್ನ ಬಹಳ ಹತ್ತಿರದಿಂದ ಬಲ್ಲೆನಾಗಿದ್ದೇನೆ. ಎಲ್ಲರಿಗೂ ಅನ್ನ ಹಾಕುತ್ತಿದ್ದವರೇ ಇಂದು ದುರ್ಮರಣಕ್ಕೆ ಒಳಗಾಗಿದ್ದಾರೆ. ಇನ್ನೂ ಮೂವರು ಸ್ಥಿತಿ ಗಂಭೀರವಾಗಿದೆ. ಅದರಲ್ಲಿ ಒಂದು ಮಗುವಿನ ಸ್ಥಿತಿ ಮನಕಲುಕುತ್ತಿದೆ. ಗಾಯಾಳುವಾಗಿರುವ ಮಗು ನನ್ನ ತಂದೆಯನ್ನ ಕೇಳುತ್ತಿದೆ ಎಂದು ನೋವಿನ ಘಟನೆಯ ಬಗ್ಗೆ ಮಾಹಿತಿ ಬಿಚ್ಚಿಟ್ಟರು. 

ಅಪಘಾತದಲ್ಲಿ ಸಾವನಪ್ಪಿದವರ ಮಾಹಿತಿ
1. ಮಂಜುನಾಥ್ (35)
2. ಪೂರ್ಣಿಮಾ (30)
3. ಪವನ್ (10)
4. ಕಾರ್ತಿಕ್ (8)
5. ಸಂದೀಪ್ (24)
6. ಸುಜಾತ (40)
7. ಕೊಟ್ರೇಶ್ (45)
8. ಗಾಯಿತ್ರಿ (35)
9. ಶ್ರೇಯಾ (3)
10. ಆದಿತ್ಯ (ಡ್ರೈವರ್)

ಗಾಯಾಳುಗಳ ಮಾಹಿತಿ
1. ಶಶಿಕುಮಾರ್ (ಗಂಭೀರ ಗಾಯ)
2. ಜನಾರ್ಧನ್ (40)
3. ಪುನೀತ್ (5)

ಒಂದೇ ಕಡೆ ಬಳ್ಳಾರಿಯಲ್ಲಿ ಅಂತ್ಯಕ್ರಿಯೆ: ಮೈಸೂರಿಗೆ ಪ್ರವಾಸಕ್ಕೆ ಆಗಮಿಸುವ ವೇಳೆ ಇವರೊಂದಿಗೆ ಇದೇ ಕುಟುಂಬದ ಇನ್ನಷ್ಟು ಜನರು ಪ್ರವಾಸಕ್ಕೆ ಬರಬೇಕಿತ್ತು. ಆದರೆ, ಕಾರಣಂತರದಿಂದ ಪ್ರವಾಸಕ್ಕೆ ಬಂದಿಲ್ಲ. ಈ ಸಾವು ನನಗೆ ವಯಕ್ತಿಕವಾಗಿ ಬಹಳ ನೋವು ಕೊಟ್ಟಿದೆ. ಅವರ ಅಂತ್ಯ ಸಂಸ್ಕಾರವನ್ನ ಅವರ ಊರಿನಲ್ಲಿ ಒಂದೇ ಕಡೆ ಮಾಡುತ್ತೇವೆ. ಅವರ ಮನೆಗಳಿಗೆ ಖುದ್ದು ಭೇಟಿ ಕೊಟ್ಟು ವಯಕ್ತಿಕ ಪರಿಹಾರ ನೀಡುತ್ತೇನೆ ಎಂದು ಸಚಿವ ನಾಗೇಂದ್ರ ಹೇಳಿದರು.

ಶಿವಮೊಗ್ಗದಲ್ಲಿ ಕುರಿ ಮೇಯಿಸಲು ಹೋದ ಮಹಿಳೆ ಸಿಡಿಲಿಗೆ ಬಲಿ

ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ: ಒಟ್ಟಿನಲ್ಲಿ ಪ್ರವಾಸ ಮುಗಿಸಿ ಮನೆ ಸೇರಬೇಕಿದ್ದ ಹತ್ತು ಮಂದಿಯ ಬದುಕಿನಲ್ಲಿ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಕಾರು ರಸ್ತೆಯ ಮಧ್ಯ ಭಾಗಕ್ಕೆ ಬಂದಿರೋದು ಸ್ಪಷ್ಟವಾಗಿ ಕಾಣೋದ್ರಿಂದ ಕಾರು ಚಾಲಕನ ಅಜಾಗರೂಕತೆಯೋ ಅಥವಾ ಬಲಭಾಗದ ಟಯರ್ ಸ್ಪೋಟಗೊಂಡು ಅಪಘಾತವಾಗಿದ್ಯ ಅನ್ನೋದು ತನಿಖೆಯಿಂದ ಬೆಳಕಿಗೆ ಬರಬೇಕಿದೆ. ಸ್ಥಳಕ್ಕೆ ಭೇಟಿ ನೀಡಿದ ಎಸ್ಪಿ ಸೀಮಾ ಲಾಟ್ಕರ್ ಘಟನೆ ತನಿಖೆ ನಡೆಸುವ ಭರವಸೆ ನೀಡಿದ್ದಾರೆ‌. ಘಟನೆ ಸಂಬಂಧ ಟ್ವಿಟ್ ಮಾಡಿರೋ ಸಿಎಂ ಸಿದ್ದರಾಮಯ್ಯ ಮೃತಪಟ್ಟವರಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ.

click me!