
ಧನಾಬಾದ್(ಮೇ.29): ದೇಶದ ಹಲವು ಭಾಗದಲ್ಲಿ ಇಂದು ಅಹಿತಕರ ಘಟನೆಗಳೇ ನಡೆದಿದೆ. ಮೈಸೂರಿನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ 10 ಮಂದಿ ಮೃತಪಟ್ಟಿದ್ದಾರೆ, ಶಿವಮೊಗ್ಗ, ಅಸ್ಸಾಂ ಅಪಘಾತದಲ್ಲಿ ವಿದ್ಯಾರ್ಥಿಗಳು ಬಲಿಯಾಗಿದ್ದಾರೆ. ದೆಹಲಿಯಲ್ಲಿ ಅಪ್ತಾಪ್ತೆ ಬಾಲಕಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಎಲ್ಲಾ ಘಟನೆಗಳ ನಡುವೆ ಇದೀಗ ಕೂಲಿ ಕಾರ್ಮಿಕರ ಮೇಲೆ ಹೈಟೆನ್ಶನ್ ವಿದ್ಯುತ್ ವೈಯರ್ ಬಿದ್ದು 8 ಮಂದಿ ಮೃತಪಟ್ಟ ಘಟನೆ ಜಾರ್ಖಂಡ್‌ನ ಧನಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.
ನಿಚಿತುಪರ ರೈಲ್ವೇ ಗೇಟ್ ಬಳಿ ಕಾಮಾಗಾರಿ ಕೈಗೆತ್ತಿಕೊಳ್ಳಲಾಗಿದೆ. ಇಲ್ಲಿ ಹೊಸ ವಿದ್ಯುತ್ ಕಂಬ, ಸೂಚನಾ ಫಲಕ ಸೇರಿದಂತೆ ಹಲವು ದುರಸ್ತಿ ಕಾಮಾಗಾರಿಯಲ್ಲಿ ಕಾರ್ಮಿಕರು ತೊಡಿಗಿದ್ದಾರೆ. ಇದೇ ವೇಳೆ 25,000 ವೋಲ್ಟ್‌ನ ಹೈಟೆನ್ಶನ್ ವಿದ್ಯುತ್ ವೈಯರ್ ಕೂಲಿ ಕಾರ್ಮಿಕರ ಮೇಲೆ ಬಿದ್ದಿದೆ. ಇದರಿಂದ ಸ್ಥಳದಲ್ಲೇ 8 ಮಂದಿ ಮೃತಪಟ್ಟಿದ್ದಾರೆ. ಕೆಲಸ ಮಾಡುತ್ತಿದ್ದ ಇತರ ಕಾರ್ಮಿಕರು ಗಾಯಗೊಂಡಿದ್ದಾರೆ. ತಕ್ಷಣವೇ ಗಾಯಗೊಂಡ ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Mysuru Road Accident: ಟಿ.ನರಸೀಪುರದಲ್ಲಿ ಭೀಕರ ರಸ್ತೆ ಅಪಘಾತ, ಬಳ್ಳಾರಿಯ 10 ಮಂದಿ ಬಲಿ!
ಘಟನೆಯಿಂದ ನಿಚಿತಪುರ ರೈಲ್ವೇ ಗೇಟ್ ಬಂದ್ ಮಾಡಲಾಗಿತ್ತು. ಹೀಗಾಗಿ ಈ ದಾರಿಯಲ್ಲಿ ಸಂಚರಿಸಬೇಕಿದ್ದ ಹಲವು ರೈಲುಗಳನ್ನು ಬೇರೆ ಬೇರೆ ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು. ಇದರಿಂದ ಪ್ರಯಾಣಿಕರು ಪರದಾಡುವಂತಾಗಿತ್ತು.
ಮೇ29 ರ ಸೋಮವಾರ ಅತೀ ಹೆಚ್ಚು ಕರಾಳಗಳ ಘಟನೆಗಳೇ ನಡೆದಿದೆ. ಮೈಸೂರಿನ ಟಿ ನರಸೀಪುರದ ಬಳಿ ಇನೋವಾ ಕಾರು ಬಸ್ ಮುಖಾಮುಖಿ ಡಿಕ್ಕಿಯಾಗಿ 10 ಮಂದಿ ಮೃತಪಟ್ಟಿದ್ದಾರೆ. ಬಳ್ಳಾರಿಯಿಂದ ಮೈಸೂರು ಪ್ರವಾಸಕ್ಕೆ ಆಗಮಿಸಿದ ಕುಟುಂಬದ ಸದಸ್ಯರು ಆ ಅಪಘಾತದಲ್ಲಿ ಮಡಿದಿದ್ದಾರೆ. ಇಂದು ನಡೆದ ಅಪಘಾತಗಳ ಪೈಕಿ ಇದು ಭೀಕರ ಅಪಘಾತವಾಗಿದೆ.
ಕಾಲೇಜಿಗೆ ತೆರಳುತ್ತಿದ್ದ ವೇಳೆ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು 7 ವಿದ್ಯಾರ್ಥಿಗಳು ಸಾವನ್ನಪ್ಪಿದ ಘಟನೆ ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿ ನಡೆದಿದೆ. ಮೃತರು ಅಸ್ಸಾಂ ಎಂಜಿನಿಯರ್‌ರಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು. ಕಾರು ವಿಭಜಜಕ್ಕೆ ಡಿಕ್ಕಿ ಹೊಡೆದ ಬಳಿಕ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅದರಲ್ಲಿದ್ದ 6 ಜನರು ಗಾಯಗೊಂಡಿದ್ದು ಈ ಪೈಕಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
20 ಬಾರಿ ಚಾಕುವಿನಿಂದ ಇರಿದು ಗೆಳತಿ ಕೊಂದ ಆರೋಪಿ ಸಾಹಿಲ್ ಅರೆಸ್ಟ್, ಭೀಕರ ವಿಡಿಯೋ ವೈರಲ್!
ಶಿವಮೊಗ್ಗದಲ್ಲಿ ವಿದ್ಯಾರ್ಥಿ ಮೇಲೆ ಬಸ್ ಹರಿದು ಘಟನೆ ವರದಿಯಾಗಿದೆ. ಇನ್ನು ದೆಹಲಿಯಲ್ಲಿ 16ರ ಬಾಲಕಿ ಮೇಲೆ ಗೆಳೆಯ 20 ಬಾರಿ ಚಾಕುವಿನಿಂದ ಇರಿದು, ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ ಘಟನೆ ನಡೆದಿದೆ. ಇದರೊಂದಿಗೆ ಇದೀಗ ವಿದ್ಯುತ್ ವಯರ್ ಬಿದ್ದು 8 ಮಂದಿ ದಾರುಣವಾಗಿ ಅಂತ್ಯಕಂಡ ಘಟನೆ ನಡೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ