* ವಿಚಾರಣಾಧೀನ ಖೈದಿ ಆಸ್ಪತ್ರೆಯಿಂದ ಎಸ್ಕೇಪ್
* ಚಿಕ್ಕಮಗಳೂರು ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ವಿಚಾರಣಾಧೀನ ಕೈದಿ
* ಪರಾರಿಯಾದ ಕಡೂರು ಮೂಲದ ಖೈದಿ ಧನರಾಜ್
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು, (ಮೇ.26): ಆತ ಗಾಂಜಾ ಪ್ರಕರಣದಲ್ಲಿ ಬಂಧಿತ ಆರೋಪಿ , ಆತನ್ನು ಪೊಲೀಸ್ರು ಬಂಧಿಸಿ ನ್ಯಾಯಾಲಯದ ವಶಕ್ಕೆ ನೀಡಿದ್ದರು. ಕೋರ್ಟ್ ವಿಚಾರಣೆ ನಡೆಯುತ್ತಿರುವ ಹೊತ್ತಿನಲ್ಲಿ ಆತನನ್ನು ಜೈಲಿನಲ್ಲಿ ವಿಚಾರಣಾಧೀನ ಖೈದಿಯಾಗಿ ಇರಿಸಲಾಗಿತ್ತು. ಆದ್ರೆ, ಅನ್ಯಾರೋಗ್ಯದ ಹಿನ್ನಲೆಯಲ್ಲಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಯೆ ಪಡೆಯುತ್ತಿರುವ ಸಮಯದಲ್ಲಿ ಖತರ್ನಾಕ್
ಬುದ್ಧಿ ತೋರಿಸಿ ಎಸ್ಕೇಪ್ ಆಗಿದ್ದಾನೆ..
ಜಿಲ್ಲಾಸ್ಪತ್ರೆಯಿಂದ ಖೈದಿ ಎಸ್ಕೇಪ್
ಅನ್ಯಾರೋಗ್ಯದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ವಿಚಾರಣಾಧೀನ ಖೈದಿ ಆಸ್ಪತ್ರೆಯಿಂದ ಪರಾರಿಯಾಗಿರುವ ಘಟನೆ ಚಿಕ್ಕಮಗಳೂರಿನ ಸರ್ಕಾರಿ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ತಡರಾತ್ರಿ ನಡೆದಿದೆ.ಇತ್ತೀಚೆಗೆ ಗಾಂಜಾ ಸೇವನೆ , ಮಾರಾಟ ಆರೋಪದಲ್ಲಿ ಕಡೂರು ನಿವಾಸಿ 47 ವರ್ಷದ ಧನರಾಜ್ ಎಂಬ ವ್ಯಕ್ತಿ ಬಂಧನಕ್ಕೊಳಗಾಗಿದ್ದರು.ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯಕ್ಕೆ ಪೊಲೀಸರು ಆರೋಪಿಯನ್ನು ಒಪ್ಪಿಸಿದ್ದರು. ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿರುವ ಕಾರಣ ಆರೋಪಿಯನ್ನು ಜೈಲಿನಲ್ಲಿ ವಿಚಾರಣಾಧೀನ ಖೈದಿಯಾಗಿ ಕಳುಹಿಸಲಾಗಿತ್ತು. ಜೈಲಿನಲ್ಲಿ ಎರಡು ದಿನ ಆರಾಮಯಾಗಿದ್ದ ಆರೋಪಿಗೆ ಇದ್ದಕ್ಕಿದ್ದಂತೆ ಆರೋಗ್ಯದಲ್ಲಿ ಏರುಪೇರಾಗಿದೆ. ತೀವ್ರ ಹೊಟ್ಟೆ ನೋವಿನ ಬಾಧೆಯಿಂದ ಆತನನ್ನು ಜೈಲಿನಿಂದ ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಲಾಯಿತು.
ಟಿಫನ್ ಮಾಡಲು ಬಂದ ಅಧಿಕಾರಿಗಳು, ಸರ್ವ್ ಮಾಡಲು ಬಂದ ಬಾಲ ಕಾರ್ಮಿಕನ ರಕ್ಷಣೆ
ಅನಾರೋಗ್ಯದ ಕಾಣಿಸಿಕೊಂಡ ಹಿನ್ನಲೆಯಲ್ಲಿ ಮೇ.24ರಂದು ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ವಿಚಾರಣಾಧೀನ ಖೈದಿ ಕಾವಲಿಗೆ ಓರ್ವ ಜೈಲು ಸಿಬ್ಬಂಧಿ ಮತ್ತು ಗೃಹರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಮೇ 25 ರ ತಡರಾತ್ರಿ ವಿಚಾರಣಾಧೀನ ಖೈದಿ ಧನರಾಜ್ ತಲೆಗೆ ಕೆಲಸ ಕೊಟ್ಟಿದ್ದಾನೆ ಹೇಗಾದರೂ ಮಾಡಿ ಆಸ್ಪತ್ರೆಯಿಂದ ಎಸ್ಕೇಪ್ ಆಗಲೇಬೇಕೆಂದು ನಿರ್ಧರಿಸಿ ಪ್ಲಾನ್ ರೂಪಿಸಿ ಅದರಂತೆ ಎಸ್ಕೇಪ್ ಆಗಿದ್ದಾನೆ...
ಪೊಲೀಸ್ರರಿಗೆ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್
ವಿಚಾರಣಾಧೀನ ಖೈದಿ ಕಾವಲಿಗೆ ಓರ್ವ ಜೈಲು ಸಿಬ್ಬಂದಿ ಮತ್ತು ಗೃಹರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಓರ್ವ ಸಿಬ್ಬಂದಿ ಊಟಕ್ಕೆ ತೆರಳಿದ ಸಂದರ್ಭದಲ್ಲಿ ಮತ್ತೋರ್ವ ಸಿಬ್ಬಂದಿಯನ್ನು ತಳ್ಳಿ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ. ಪರಾರಿ ಆಗುವ ಹೊತ್ತಿನಲ್ಲಿ ಸಿಬ್ಬಂದಿಯನ್ನು ಶೌಚಾಲಯದ ಕೊಠಡಿಗೆ ತಳ್ಳಿ ಎಸ್ಕೇಪ್ ಆಗಿದ್ದಾನೆ.
ಪೊಲೀಸರಿಗೆ ಆತ ಶೌಚಾಲಯಕ್ಕೆ ಹೋಗಬೇಕೆಂದು ತಿಳಿಸಿದ ಹಿನ್ನಲೆಯಲ್ಲಿ ಪೊಲೀಸರು ವಿಚಾರಣಾಧೀನ ಖೈದಿ ಅಂಡ್ ಕ್ಯಾಪ್ ತೆಗೆದು ಶೌಚಾಲಯದ ಕೊಠಡಿಗೆ ಕಳಿಸಿದ್ದರು. ಆ ವೇಳೆಯಲ್ಲಿ ತಲೆಗೆ ಬುದ್ಧಿ ಕೊಟ್ಟ ವಿಚಾರಣಾಧೀನ ಖೈದಿ ಓರ್ವ ಪೊಲೀಸ್ ಪೇದೆ ಇರುವುದನ್ನು ಅರಿತು ಪರಾರಿಯಾಗಿದ್ದಾನೆ.
ಖೈದಿ ಪರಾರಿಯಾಗಿರುವ ಬಗ್ಗೆ ಕಾರಾಗೃಹ ಸಿಬ್ಬಂದಿಗಳು ಜಿಲ್ಲಾ ಸರ್ಜನ್ ಮೋಹನ್ ಕುಮಾರ್ ಗಮನಕ್ಕೆ ತಂದಿದ್ದು, ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆ ನಡೆಸಲಾಗುತ್ತಿದೆ.