ಮುಂಬೈ: ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಶಾಲಾ ಪ್ಯೂನ್‌ ಬಂಧನ

By Suvarna News  |  First Published May 26, 2022, 9:15 PM IST

ಬಾಲಕಿ ಆಟದ ಮೈದಾನದಲ್ಲಿದ್ದಾಗಲೇ ಆಕೆಯನ್ನು ಕರೆದು ಸಂಸ್ಥೆಯ ಕೊಠಡಿಯೊಂದಕ್ಕೆ ಪ್ಯೂನ್‌ ಕರೆದೊಯ್ದಿದ್ದ ಎಂದು ಆರೋಪಿಸಲಾಗಿದೆ


ಮುಂಬೈ (ಮೇ 26): ಸೋಮವಾರ ಸಂಸ್ಥೆಯ ಆವರಣದಲ್ಲಿ 6 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಶಾಲೆಯೊಂದರ 51 ವರ್ಷದ ಪ್ಯೂನ್‌ನನ್ನು ನವಘರ್ ಪೊಲೀಸರು ಬಂಧಿಸಿದ್ದಾರೆ. ಘಟನೆಗೂ ಮುನ್ನ ಬಾಲಕಿ ಆಟದ ಮೈದಾನದಲ್ಲಿದ್ದಳು.ಬೇಸಿಗೆ ರಜೆಗಾಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಆದರೆ ಕೆಲವು ಸಿಬ್ಬಂದಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ಸೋಮವಾರ ಮಧ್ಯಾಹ್ನ, ಮುಲುಂಡ್ ಇಸ್ಟ್‌ ಸ್ಕೂಲಿನ ಪ್ಯೂನ್ ಬಾಲಕಿ ಒಂಟಿಯಾಗಿ ಆಟವಾಡುತ್ತಿರುವುದನ್ನು ಗಮನಿಸಿ ಆಕೆಯನ್ನು ಕರೆದು ಕೋಣೆಗೆ ಕರೆದೊಯ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

“ಆರೋಪಿ, ಹೇಮಂತ್ ವೈಟಿ, 51, ಬಾಗಿಲು ಮುಚ್ಚಿ ಅವಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಲ್ಲದೇ ದಾಳಿಯ ಬಗ್ಗೆ ಯಾರೊಂದಿಗಾದರೂ ಮಾತನಾಡಿದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ" ಎಂದು ನವಘರ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Tap to resize

Latest Videos

ಶಾಲೆಯಿಂದ ಮನೆಗೆ ಹೋಗಿದ್ದ ಹುಡುಗಿ ಮೌನವಾಗಿದ್ದಳು. ಬಾಲಕಿ ಮದಲು ಶಾಲೆಯಲ್ಲಿ ನಡೆದ ಘಟನೆ ಬಗ್ಗೆ ಮಾತನಾಡಿರಲಿಲ್ಲ.  ತಾಯಿ ಮೌನಕ್ಕೆ ಕಾರಣ ಕೇಳಿದಾಗ ಬಳಿಕ ನಡೆದ ಘಟನೆಯನ್ನು ಬಾಲಿಕಿ ವಿವರಿಸಿದ್ದಾಳೆ. ಆಕೆಯ ತಾಯಿ ಕೂಡಲೇ ಬಾಲಕಿಯ ತಂದೆಗೆ ಮಾಹಿತಿ ನೀಡಿದ್ದು, ಅವರು ದೂರು ದಾಖಲಿಸಿಕೊಳ್ಳಲು ಇಬ್ಬರನ್ನೂ ನವಘರ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ನಾವು ದೂರು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದೇವೆ ಎಂದು ಡಿಸಿಪಿ (ವಲಯ 7) ಪ್ರಶಾಂತ್ ಕದಂ ತಿಳಿಸಿದ್ದಾರೆ.

ಹೇಮಂತ್ ವೈಟಿಯನ್ನು ಮಂಗಳವಾರ ಮುಲುಂಡ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಮತ್ತು ಮೇ 30 ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ಆರೋಪಿ ತನ್ನ ಮುಂಬೈಯಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದಾನೆ. ಈತ ಈ ಹಿಂದೆ ಇಂತಹ ಕೃತ್ಯ ಎಸಗಿದ್ದಾನೆಯೇ ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಆತನನ್ನು ವಿಚಾರಣೆ ನಡೆಸಲಿದ್ದಾರೆ.

ಇದನ್ನೂ ಓದಿ: ಬಿಜೆಪಿ ಮುಖಂಡ ಆತ್ಮಹತ್ಯೆ ಕೇಸ್, ಖಾಸಗಿ ವೀಡಿಯೋ ಇದೆ ಎಂಬ ಗೆಳತಿ ಚಾಟಿಂಗ್ ವೈರಲ್

click me!