ಉಪನ್ಯಾಸಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಾಚಾರ್ಯ ಶರಣಪ್ಪ ಅಮಾನತು

By Kannadaprabha NewsFirst Published Jun 9, 2023, 1:48 PM IST
Highlights

ಇಲ್ಲಿನ ಅಲ್ಲಂ ಸುಮಂಗಳಮ್ಮ ಮಹಿಳಾ ಕಾಲೇಜಿನ ಉಪನ್ಯಾಸಕಿಗೆ ಕಳೆದ 6 ತಿಂಗಳಿಂದ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲೇಜಿನ ಪ್ರಾಚಾರ್ಯ ಶರಣಪ್ಪ (59) ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಬಳ್ಳಾರಿ (ಜೂ.9) ಇಲ್ಲಿನ ಅಲ್ಲಂ ಸುಮಂಗಳಮ್ಮ ಮಹಿಳಾ ಕಾಲೇಜಿನ ಉಪನ್ಯಾಸಕಿಗೆ ಕಳೆದ 6 ತಿಂಗಳಿಂದ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲೇಜಿನ ಪ್ರಾಚಾರ್ಯ ಶರಣಪ್ಪ (59) ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ವೀವಿ ಸಂಘದ ಕಚೇರಿಯಲ್ಲಿ ಗುರುವಾರ ಜರುಗಿದ ಆಡಳಿತ ಮಂಡಳಿ ಸಭೆಯಲ್ಲಿ ಶರಣಪ್ಪ ಅವರನ್ನು ಸೇವೆಯಿಂದ ಅಮಾನತುಗೊಳಿಸುವ ನಿಲುವು ತೆಗೆದುಕೊಳ್ಳಲಾಯಿತು.

ಸಂತ್ರಸ್ತೆ ದೂರಿನ ಮೇರೆಗೆ ನಗರದ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಾಚಾರ್ಯ ಶರಣಪ್ಪ ವಿರುದ್ಧ ಲೈಂಗಿಕ ಪ್ರಚೋದನೆ, ಲೈಂಗಿಕ ಕಿರುಕುಳ, ಪ್ರಾಣಬೆದರಿಕೆ ಆರೋಪದಡಿ ಐಪಿಸಿ 354(ಎ), 504, 506, 509 ಸೆಕ್ಷನ್ಸ್‌ ಅಡಿ ಪ್ರಕರಣ ದಾಖಲಿಸಲಾಗಿದೆ.

ಬಳ್ಳಾರಿ: ಮಗಳ ವಯಸ್ಸಿನ ಉಪನ್ಯಾಸಕಿ ಮೇಲೆ ಪ್ರಾಂಶುಪಾಲರಿಂದಲೇ ಲೈಂಗಿಕ ದೌರ್ಜನ್ಯ!

ಈ ಕುರಿತು ಆಡಳಿತ ಮಂಡಳಿ ನೋಟಿಸ್‌ ಜಾರಿ ಮಾಡಿ ಘಟನೆಯ ಬಗ್ಗೆ ವಿವರಣೆ ನೀಡುವಂತೆ ತಿಳಿಸಿತ್ತು. ಆದರೆ ಪ್ರಾಂಶುಪಾಲ ನೋಟೀಸ್‌ಗೆ ಪ್ರತಿಕ್ರಿಯಿಸದ ಹಿನ್ನೆಲೆ ಆಡಳಿತ ಮಂಡಳಿಯ ಸಭೆಯಲ್ಲಿ ಅಮಾನತು ಮಾಡಿ ಆದೇಶಿಸಲಾಗಿದೆ.

‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ ವೀವಿ ಸಂಘದ ಖಜಾಂಚಿ ಗೋನಾಳ್‌ ರಾಜಶೇಖರಗೌಡ, ಪ್ರಾಂಶುಪಾಲ ಶರಣಪ್ಪ ಅವರ ವಿರುದ್ಧದ ಪ್ರಕರಣವನ್ನು ಸಂಘ ಗಂಭೀರವಾಗಿ ಪರಿಗಣಿಸಿದ್ದು, ಗುರುವಾರ ಜರುಗಿದ ಸಭೆಯಲ್ಲಿ ಅಮಾನತುಗೊಳಿಸುವ ನಿರ್ಧಾರ ಕೈಗೊಂಡಿದ್ದು, ಈ ಸಂಬಂಧ ತನಿಖಾ ಸಮಿತಿಯನ್ನು ರಚಿಸಲು ನಿರ್ಧರಿಸಲಾಗಿದೆ ಎಂದರು.

ಲೈಂಗಿಕ ಕಿರುಕುಳದ ಪ್ರಕರಣದ ತನಿಖೆ ನಡೆಯುತ್ತಿದ್ದು, ಮುಂದಿನ ಹಂತದ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಂಜಿತ್‌ಕುಮಾರ್‌ ಬಂಡಾರು ತಿಳಿಸಿದ್ದಾರೆ. ಪ್ರಕರಣದ ಆರೋಪಿ ಶರಣಪ್ಪ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಛೀ ಪಾಪಿ: ಅಪ್ರಾಪ್ತ ಮಲಮಗಳ ಮೇಲೆ ಹಲವು ಬಾರಿ ಅತ್ಯಾಚಾರ; ಕೊನೆಗೂ ಜೈಲು ಪಾಲಾದ!

ಉಪನ್ಯಾಸಕಿ ಮೇಲೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣವನ್ನು ಸಂಘವ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಆರೋಪಿ ಶರಣಪ್ಪರನ್ನು ಅಮಾನತುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತು ತನಿಖಾ ಸಮಿತಿ ರಚಿಸಲಾಗುವುದು.

ಗೋನಾಳ್‌ ರಾಜಶೇಖರಗೌಡ, ಖಜಾಂಚಿ, ವೀವಿ ಸಂಘ, ಬಳ್ಳಾರಿ

click me!