
ಮುಂಬೈ (ಜೂ.19): ಬರೋಬ್ಬರಿ 30 ವರ್ಷಗಳ ಹಿಂದೆ ತನ್ನ 19ನೇ ವರ್ಷದಲ್ಲಿ ವ್ಯಕ್ತಿಯೊಬ್ಬ ಲೋನಾವಾಲದಲ್ಲಿ ವೃದ್ಧ ದಂಪತಿಗಳನ್ನು ಕೊಲೆ ಮಾಡಿದ್ದ. ಆದರೆ, ಎಷ್ಟು ಹುಡುಕಿದರೂ ಪೊಲೀಸರಿಗೆ ಕೊಲೆಗಾರ ಯಾರು ಅನ್ನೋದೇ ಗೊತ್ತಾಗಿರಲಿಲ್ಲ. ಬರೋಬ್ಬರಿ 30 ವರ್ಷಗಳ ಬಳಿಕ ಈ ವ್ಯಕ್ತಿಯ ಬಂಧನವಾಗಿದೆ. ಪೊಲೀಸ್ ಫೈಲ್‌ನಲ್ಲಿ ಮುಚ್ಚಿ ಹೋಗಿದ್ದ ಈ ಕೇಸ್‌ಗೆ ಸಿಕ್ಕಿದ ಟ್ವಿಸ್ಟ್ ಆದರೂ ಏನು ಅನ್ನೋ ಕುತೂಹಲವೂ ಇರಬಹುದು. ಅದರೆ, ಸ್ವತಃ ಕೊಲೆಗಾರನೇ ತಾನು ಮಾಡಿದ ಕೊಲೆಯ ಬಗ್ಗೆ ಇಂಚಿಂಚೂ ವಿವರಣೆ ನೀಡಿದ್ದಾನೆ. ಇದಕ್ಕೆ ಕಾರಣವಾಗಿದ್ದು ಮದ್ಯ. ಎಣ್ಣೆ ಕುಡಿದು ಫುಲ್ ಟೈಟ್ ಆಗಿದ್‌ದ ವ್ಯಕ್ತಿ, ಧೈರ್ಯವಾಗಿ ತಾನು 30 ವರ್ಷಗಳ ಹಿಂದೆ ಮಾಡಿದ್ದ ಜೋಡಿ ಕೊಲೆಯ ಬಗ್ಗೆ ಸ್ನೇಹಿತರ ಎದುರು ಮಾತನಾಡಿದ್ದ. ಇದರ ಬೆನ್ನಲ್ಲಿಯೇ ಪೊಲೀಸ್ ಆರೋಪಿ ಅವಿನಾಶ್ ಭೀಮರಾವ್ ಪವಾರ್‌ನನ್ನು ಬಂಧಿಸಿದ್ದಾರೆ. 30 ವರ್ಷಗಳ ಹಿಂದೆ ಲೋನಾವಾಲಾ ಪ್ರದೇಶದದಲ್ಲಿ ದಂಪತಿಗಳಾದ ಧನರಾಜ್ ಥಾಕರ್ಸಿ ಕುರ್ವಾ ಹಾಗೂ ಧನಲಕ್ಷ್ಮೀ ಧನರಾಜ್ ಕುರ್ವಾರನ್ನು ಕೊಲೆ ಮಾಡಿ ಮನೆಯಲ್ಲಿದ್ದ ಚಿನ್ನ ಹಾಗೂ ಹಣವನ್ನು ದೋಚಿಕೊಂಡು ಹೋಗಿದ್ದ. ಆ ಬಳಿಕ ಅಮಿತ್ ಭೀಮರಾವ್ ಪವಾರ್ ಎಂದು ಹೆಸರು ಬದಲಾಯಿಸಿಕೊಂಡಿದ್ದ ಆರೋಪಿ ಬಂಧನದಿಂದ ತಪ್ಪಿಸಿಕೊಳ್ಳು ಊರಿಂದ ಊರಿಗೆ ತಿರುಗಾಟ ನಡೆಸಿದ್ದ ಕೊನೆಗೆ ವಿಕ್ರೋಲಿ ಪೂರ್ವದ ಟಾಗೋರ್ ನಗರದ ಎಂಎಚ್‌ಎಡಿಎ ಚಾವ್ಲ್‌ನಲ್ಲಿ ಸಿಕ್ಕಿಬಿದ್ದಿದ್ದಾರೆ.
ಮುಂಬೈ ಕ್ರೈಂ ಬ್ರ್ಯಾಂಚ್ ಕಳೆದ ಶುಕ್ರವಾರ 49 ವರ್ಷದ ಅವಿನಾಶ್‌ನನ್ನು ಬಂಧಿಸಿದ್ದಾರೆ. ಇಷ್ಟು ವರ್ಷಗಳ ಕಾಲ ತನ್ನ ಹೆಸರನ್ನು ಸಾಕಷ್ಟು ಬಾರಿ ಬದಲಾಯಿಸಿಕೊಂಡು ಊರೂರು ತಿರುಗಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರ ಪ್ರಕಾರ 55 ವರ್ಷದ ಧನರಾಜ್ ಕುರ್ವಾ ಹಾಗೂ 50 ವರ್ಷದ ಧನಲಕ್ಷ್ಮೀ ಕುರ್ವಾ, ವಾಲ್ವಮಂ ಸತ್ಯಂ ಸೊಸೈಟಿಯ ಯಶೋಧಾ ಬಂಗಲೆಯಲ್ಲಿದ್ದ ತಮ್ಮ ಫ್ಲ್ಯಾಟ್‌ನ ಎದುರುಗಡೆ ಸ್ವಂತ ಅಂಗಡಿಯನ್ನು ನಡೆಸುತ್ತಿದ್ದರು. 19 ವರ್ಷದವನಾಗಿದ್ದ ಅವಿನಾಶ್ ಭೀಮರಾವ್ ಪವಾರ್ ಅಹ್ಮದ್‌ನಗರ ಮೂಲದವರಾಗಿದ್ದರು. ಲೋನಾವಾಲದಲ್ಲಿ ತನ್ನ ಅಜ್ಜಿಯೊಂದಿಗೆ ವಾಸವಾಗಿದ್ದ ಮಾತ್ರವಲ್ಲದೆ ಪ್ರತಿನಿತ್ಯ ಈ ಅಂಗಡಿಗೆ ಭೇಟಿ ನೀಡುತ್ತಿದ್ದ ಕಾರಣಕ್ಕೆ ಅವರಿಗೂ ಪರಿಚಿತನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
1993ರ ಅಕ್ಟೋಬರ್ 4 ರಂದು ಪವಾರ್ ತನ್ನಿಬ್ಬರು ಸ್ನೇಹಿತರಾದ ಅಮೋಲ್ ಜಾನ್ ಕಾಳೆ ಅಲಿಯಾಸ್ ಟಿಲ್ಲು ಹಾಗೂ ವಿಜಯ್ ಅರುಣ್ ದೇಸಾಯೊ ಜೊತೆ ಸೇರಿಸ ದರೋಡೆ ಮಾಡುವ ಉದ್ದೇಶದಿಂದ ದಂಪತಿಗಳ ಮನೆಗೆ ನುಗ್ಗಿದ್ದರು. ನೇಣು ಬಿಗಿದಿದ್ದಲ್ಲದೆ, ಚೂರಿ ಇರಿದು ಕೊಲೆ ಮಾಡಿದ್ದರು. ಮನೆಯಲ್ಲಿದ್ದ ನಗದು ಹಾಗೂ ಚಿನ್ನವನ್ನು ದೋಚಿಕೊಂಡು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಗೆ ಚಿಕಿತ್ಸೆ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ ನಕಲಿ ವೈದ್ಯ: ಕಾಮುಕನನ್ನು ರೆಡ್‌ಹ್ಯಾಂಡ್ ಆಗಿ ಹಿಡಿದ ಪತಿ
ಆ ಬಳಿಕ ಶಿರಡಿಗೆ ತೆರಳಿದ್ದ ಪವಾರ್ ಅಲ್ಲಿ ಎರಡು ದಿನ ಉಳಿದುಕೊಂಡಿದ್ದ. ಬಳಿಕ ದೆಹಲಿಗೆ ತೆರಳಿ ಅಲ್ಲಿ ಒಂದು ವರ್ಷ ಕೆಲಸ ಮಾಡಿದ್ದ. ಆ ಬಳಿಕ ಮಹಾರಾಷ್ಟ್ರದ ಥಾಣೆಯಲ್ಲಿ 1996ರವರೆಗೂ ಗ್ಯಾರೇಜ್‌ನಲ್ಲಿ ಮೆಕಾನಿಕ್ ಆಗಿ ಕೆಲಸ ಮಾಡಿದ್ದ. 1998ರಲ್ಲಿ ಅಹ್ಮದ್‌ನಗರಕ್ಕೆ ತೆರಳಿದ್ದ ಆತ ಅಲ್ಲಿ ಹೋಟೆಲ್‌ನಲ್ಲಿ ಕೆಲಸ ಮಾಡಿದ್ದ. ಈ ವೇಳೆ ಲೋನಾವಾಲಾ ಮೂಲದ ಪ್ರಮಿಳಾರನ್ನು ಮದುವೆಯಾಗಿ 1999 ರಿಂದ ವಿಕ್ರೋಲಿಯಲ್ಲಿಯೇ ನೆಲೆಸಿದ್ದ ಎಂದು ಪೊಲೀಸರು ಹೇಳಿದ್ದಾರೆ. ಆತನ ಇಬ್ಬರು ಸ್ನೇಹಿತರು ಬಂಧಿತರಾದರೂ 2018ರವರೆಗೂ ಪವಾರ್ ಮಾತ್ರ ಯಾರಿಗೂ ಸಿಕ್ಕದೆ ಅಡ್ಡಾಡುತ್ತಿದೆ. 2018ರಲ್ಲಿ ಈತ ನಾಪತ್ತೆಯಾಗಿದ್ದಾನೆ ಎಂದು ಘೋಷಣೆ ಮಾಡಲಾಗಿತ್ತು.
Mangaluru: ಒಂದೇ ಕಾಲೇಜಿನ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಆತ್ಮಹತ್ಯೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ