ಮಹಿಳೆಗೆ ಚಿಕಿತ್ಸೆ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ ನಕಲಿ ವೈದ್ಯ: ಕಾಮುಕನನ್ನು ರೆಡ್‌ಹ್ಯಾಂಡ್‌ ಆಗಿ ಹಿಡಿದ ಪತಿ

By BK Ashwin  |  First Published Jun 19, 2023, 5:37 PM IST

ಆರೋಪಿಗಳು ಆಕೆಯನ್ನು ಓಪಿಡಿಗೆ ಕರೆದೊಯ್ದು ಅಲ್ಲಿ ಮಹಿಳೆಗೆ ಕಿರುಕುಳ ನೀಡಿದ್ದರು ಎಂದು ತಿಳಿದುಬಂದಿದೆ. ಈ ಸಂಬಂಧ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.


ಮುಂಬೈ (ಜೂನ್ 19, 2023): ಮಹಾರಾಷ್ಟ್ರ ರಾಜಧಾನಿ ಮುಂಬೈನ ಗೋವಂಡಿ ಪ್ರದೇಶದಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯನಂತೆ ನಟನೆ ಮಾಡಿದ ವ್ಯಕ್ತಿಯೊಬ್ಬ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದರುವ ಆರೋಪ ಕೇಳಿಬಂದಿದೆ. ಪತ್ನಿ ಹೊರಗೆ ಬಾರದೆ ಇದ್ದಾಗ ಅನುಮಾನಗೊಂಡ ಮಹಿಳೆಯ ಪತಿ, ಆಕೆಯನ್ನು ನೋಡಲು ಒಳಗೆ ಹೋದಾಗ ನಕಲಿ ವೈದ್ಯನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾನೆ ಎಂದು ತಿಳಿದುಬಂದಿದೆ.

ಆರೋಪಿಗಳು ಆಕೆಯನ್ನು ಓಪಿಡಿಗೆ ಕರೆದೊಯ್ದು ಅಲ್ಲಿ ಮಹಿಳೆಗೆ ಕಿರುಕುಳ ನೀಡಿದ್ದರು ಎಂದು ತಿಳಿದುಬಂದಿದೆ. ನಂತರ, ಸಂತ್ರಸ್ತೆ ಹಾಗೂ ಪತಿ ಆಸ್ಪತ್ರೆಯಲ್ಲಿ ಗಲಾಟೆ ಮಾಡಿ ಬಳಿಕ ನಡೆದ ಘಟನೆಯನ್ನು ಪೊಲೀಸರಿಗೆ ದೂರು ನೀಡಿದ್ದಾರೆ ಎಂದೂ ತಿಳಿದುಬಂದಿದೆ. ಇನ್ನು, ಈ ಸಂಬಂಧ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಆರೋಪಿಗಳಲ್ಲಿ ಒಬ್ಬ ನಕಲಿ ವೈದ್ಯನಾಗಿದ್ದು, ಆತ ಅಪರಾಧ ನಡೆದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ. ಹಾಗೂ, ಆಸ್ಪತ್ರೆಯ ಮಾಲೀಕರು ಪರಾರಿಯಾಗಿದ್ದಾರೆ ಎಂದೂ ವರದಿಯಾಗಿದೆ.

Tap to resize

Latest Videos

ಇದನ್ನು ಓದಿ: ಬುರ್ಕಾ ಧರಿಸಿ ಆಸ್ಪತ್ರೆಯಲ್ಲಿ ಗಂಡಸರಿಗೆ ಸ್ಪೆಷಲ್ ಟ್ರೀಟ್ ನೀಡ್ತಿದ್ದ 'ಲೇಡಿ ಡಾಕ್ಟರ್' ಅಂದರ್

"ಗೋವಂಡಿಯ ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಶೋಯೆಬ್ ಮತ್ತು ಇರ್ಫಾನ್ ಸೈಯದ್ ಎಂಬ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಆರೋಪಿಗಳಲ್ಲಿ ಒಬ್ಬ ಆ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನಕಲಿ ವೈದ್ಯ" ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತೆಯ ಪತಿ ಒಪಿಡಿಯ ಹೊರಗೆ ಆಕೆಗಾಗಿ ಕಾದು ನಿಂತಿದ್ದು, ಸುಮಾರು ಸಮಯವಾದರೂ ಬರದಿದ್ದಾಗ ಅನುಮಾನಗೊಂಡ ಆಕೆಯನ್ನು ಪರೀಕ್ಷಿಸಲು ಹೋದಾಗ ಆರೋಪಿಯ ಕೃತ್ಯ ಬಯಲಾಗಿದೆ. ಈ ಹಿನ್ನೆಲೆ ಆಸ್ಪತ್ರೆಯ ಮಾಲೀಕ ಜಮೀಲ್ ಖಾನ್ ಸೇರಿದಂತೆ 3 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಪೈಕಿ ಜಮೀಲ್‌ ಖಾನ್‌ ಪರಾರಿಯಾಗಿದ್ದಾರೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದ ಆರೋಪಿಗಳಲ್ಲಿ ಒಬ್ಬರು ಯಾವುದೇ ವೈದ್ಯಕೀಯ ಪದವಿ ಪಡೆದಿಲ್ಲ ಎಂದು ತನಿಖೆಯ ವೇಳೆ ಪೊಲೀಸರು ಕಂಡುಕೊಂಡಿದ್ದಾರೆ. ಈ ಹಿನ್ನೆಲೆ, ಭಾರತೀಯ ದಂಡ ಸಂಹಿತೆಯ (IPC) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಮತ್ತು ಮಹಾರಾಷ್ಟ್ರ ವೈದ್ಯಕೀಯ ಪ್ರಾಕ್ಟೀಷನರ್ಸ್ ಕಾಯ್ದೆ ಹಾಗೂ ಮಹಾರಾಷ್ಟ್ರ ನರ್ಸಿಂಗ್ ಗೃಹ ಕಾಯಿದೆ ಅಡಿಯಲ್ಲಿ ನಕಲಿ ವೈದ್ಯ ಮತ್ತು ಅವರ ಸಹಚರ ಇಬ್ಬರನ್ನೂ ಬಂಧಿಸಲಾಗಿದೆ. ಆದರೆ, ಈ ಪ್ರಕರಣದಲ್ಲಿ ಭಾಗಿಯಾಗಿರುವ ಆಸ್ಪತ್ರೆಯ ಮಾಲೀಕರು ಪ್ರಸ್ತುತ ಅಧಿಕಾರಿಗಳಿಂದ ತಪ್ಪಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. 

ಇದನ್ನೂ ಓದಿ: "ಜೈ ಶ್ರೀ ರಾಮ್" ಘೋಷಣೆ ಕೂಗಲು ಒತ್ತಾಯಿಸಿ ಮುಸ್ಲಿಂ ವ್ಯಕ್ತಿ ಥಳಿಸಿ ಮರಕ್ಕೆ ಕಟ್ಟಿ ಹಾಕಿದ ಪಾಪಿಗಳು: ಓವೈಸಿ ಆಕ್ರೋಶ

ಬುರ್ಕಾ ಧರಿಸಿ ಆಸ್ಪತ್ರೆಯಲ್ಲಿ ಗಂಡಸರಿಗೆ ಸ್ಪೆಷಲ್ ಟ್ರೀಟ್ ನೀಡ್ತಿದ್ದ 'ಲೇಡಿ ಡಾಕ್ಟರ್' ಅಂದರ್

ಮತ್ತೊಂದು ವಿಚಿತ್ರ ಪ್ರಕರಣವೊಂದರಲ್ಲಿ ಮಹಿಳಾ ಡಾಕ್ಟರ್‌ನಂತೆ ವೇಷ  ಧರಿಸಿ ಆಸ್ಪತ್ರೆಯ ಪುರುಷ ರೋಗಿಗಳನ್ನು ಸೆಳೆಯಲು ಯತ್ನಿಸುತ್ತಿದ್ದ ಸ್ಪೆಷಲ್ ಲೇಡಿ ಡಾಕ್ಟರ್ ಓರ್ವನನ್ನು ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್‌ ಹಿಡಿದು ಪೊಲೀಸರಿಗೆ ನೀಡಿದ್ದಾರೆ. ನಾಗಪುರದ ಇಂದಿರಾಗಾಂಧಿ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆ ಆವರಣದಲ್ಲಿ ಈ ಘಟನೆ ನಡೆದಿದೆ. 

ಬಂಧಿತ ವ್ಯಕ್ತಿಯನ್ನು 25 ವರ್ಷದ ಜಾವೇದ್ ಶೇಕ್ ಎಂದು ಗುರುತಿಸಲಾಗಿದ್ದು, ಈತ  ತಜ್ಬಾಗ್ ನಿವಾಸಿಯಾಗಿದ್ದು 'ಸಲಿಂಗಪ್ರೇಮಿ'ಯಾಗಿದ್ದ ಎಂದು ತಿಳಿದು ಬಂದಿದೆ. ಬುರ್ಕಾ (Burqa) ಧರಿಸಿ ಮಹಿಳಾ ಡಾಕ್ಟರ್ ವೇಷ ಧರಿಸಿ ಆತ ಆಸ್ಪತ್ರೆಯ ಆವರಣದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿರುವುದನ್ನು ನೋಡಿ ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್‌ಗಳು ಆತನನ್ನು ಹಿಡಿದು ಆತನ 'ಸ್ತ್ರೀ ವೇಷ' ಕಳಚಿ ಬಳಿಕ  ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರ ವಿಚಾರಣೆ (Police Enquiry) ವೇಳೆ ಆರೋಪಿ ತಾನೋರ್ವ ಟ್ರಾನ್ಸ್‌ಜಂಡರ್‌ ಆಗಿದ್ದು, ಪುರುಷರ ಸ್ನೇಹಕ್ಕಾಗಿ ಮಹಿಳಾ ವೈದ್ಯೆಯ ವೇಷ ಧರಿಸಿ ಆಸ್ಪತ್ರೆಗೆ ಭೇಟಿ ನೀಡಿದ್ದೆ ಎಂಬ ವಿಚಾರವನ್ನು ಬಾಯ್ಬಿಟ್ಟಿದ್ದಾನೆ. 

ಇದನ್ನೂ ಓದಿ: ಕುಡಿದು ಟೈಟಾಗಿದ್ದ ಮಹಿಳೆಯನ್ನು ಫ್ಲ್ಯಾಟ್‌ಗೆ ಹೊತ್ತೊಯ್ದು ಅತ್ಯಾಚಾರವೆಸಗಿದ ಭಾರತೀಯ ಮೂಲದ ವಿದ್ಯಾರ್ಥಿ

click me!