ನಿಟ್ಟೆಯ ಎಂಜಿನಿಯರಿಂಗ್ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮೂಡುಬಿದಿರೆ (ಜೂ.19): ನಿಟ್ಟೆಯ ಎಂಜಿನಿಯರಿಂಗ್ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಆಲಂಗಾರಿನಲ್ಲಿ ಜೂನ್ 18ರಂದು ನಡೆದಿದೆ. ಪುರಸಭಾ ವ್ಯಾಪ್ತಿಯ ಆಲಂಗಾರು ಆಶ್ರಯ ಕಾಲನಿಯ ನಿವಾಸಿ, ಎಸ್.ಎನ್.ಎಂ. ಪಾಲಿಟೆಕ್ನಿಕ್‌ನ ಉಪನ್ಯಾಸಕ ಸುರೇಶ್ ಭಂಡಾರಿ ಅವರ ಪುತ್ರ, ನಿಟ್ಟೆಯ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಸಾತ್ವಿಕ್ (21) ಮೃತ ವಿದ್ಯಾರ್ಥಿ. ಹೆತ್ತವರು, ಮೊಬೈಲ್ ಬಳಕೆ ಕಡಿಮೆ ಮಾಡಿ ಚೆನ್ನಾಗಿ ಓದುವಂತೆ ಬುದ್ಧಿಮಾತು ಹೇಳಿದ್ದು, ಅದರಂತೆ ಸಾತ್ವಿಕ್ ಕೂಡಾ ಹೆಚ್ಚಾಗಿ ಓದುವತ್ತ ಗಮನ ಹರಿಸಿದ್ದ. ಆದರೆ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದು, ಈ ಬಗ್ಗೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗಿದೆ. ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರೇಮಿಗಳ ಗುಂಡಿಕ್ಕಿ ಕೊಂದ ಯುವತಿ ಪೋಷಕರು: ಮೃತದೇಹಕ್ಕೆ ಕಲ್ಲು ಕಟ್ಟಿ
ನೇಣು ಬಿಗಿದು ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ
ಕಾರ್ಕಳ : ನೇಣು ಬಿಗಿದು ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾದ ಘಟನೆ ಜೋಡುರಸ್ತೆ ಬಳಿ ಶುಕ್ರವಾರ ನಡೆದಿದೆ. ಅಮೃತ್ ಶೆಟ್ಟಿ(22) ಮೃತರು. ಈತ ಡೆತ್ ನೋಟ್ ಬರೆದಿಟ್ಟು ತನ್ನ ಮನೆಯ ಮಹಡಿಯ ಮೇಲೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಮೃತ್ ಶೆಟ್ಟಿ ನಿಟ್ಟೆ ಕಾಲೇಜಿನಲ್ಲಿ 3ನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಪೊಲೀಸರ ಪ್ರಕಾರ, ಜೂನ್ 16 ರಂದು ಅಮೃತ್ ಕಾಲೇಜಿಗೆ ಹೋಗಿರಲಿಲ್ಲ, ಮಧ್ಯಾಹ್ನ ಅವನು ತನ್ನ ಮಲಗುವ ಕೋಣೆಗೆ ಮಹಡಿಯ ಮೇಲೆ ಹೋಗಿದ್ದನು. ಸುಮಾರು ಒಂದು ಗಂಟೆಯ ನಂತರ ಮಲಗುವ ಕೋಣೆಯ ಬಾಗಿಲು ಮುಚ್ಚಿದ್ದರಿಂದ ಕುಟುಂಬಸ್ಥರಿಗೆ ಅನುಮಾನ ಬಂದಿತು. ಅವರು ಬಾಗಿಲು ಬಡಿದಾಗ ಅಮೃತ್ ಬಾಗಿಲು ತೆರೆಯಲಿಲ್ಲ. ಮನೆಯವರು ಬೀಗ ಒಡೆದು ಒಳಗೆ ಹೋಗಿ ನೋಡಿದಾಗ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ.
Mysuru: ಪ್ರೀತಿಸುವಂತೆ ಪೀಡಿಸುತ್ತಿದ್ದ ಯುವಕ, ಕಿರುಕುಳ ತಾಳಲಾರದೆ ಅಪ್ರಾಪ್ತೆ ಆತ್ಮಹತ್ಯೆ!
ಆಗುಂಬೆ 13ನೇ ತಿರುವಿನಲ್ಲಿ ಅಪಘಾತ: ಬೈಕ್ ಸವಾರ ಸಾವು
ಕಾರ್ಕಳ: ಬೈಕ್-ಬಸ್ ನಡುವೆ ಅಪಘಾತ ಸಂಭವಿಸಿ ಸವಾರ ಮೃತಪಟ್ಟು ಹಿಂಬದಿಯ ಸವಾರ ಗಾಯಗೊಂಡ ಘಟನೆ ಆಗುಂಬೆಯ 13ನೇ ತಿರುವಿನಲ್ಲಿ ಭಾನುವಾರ ನಡೆದಿದೆ. ಬಾರ್ಕೂರು ಹೇರಾಡಿಯ ಶಶಾಂಕ್ (21) ಮೃತರು. ಅವರು ಆಗುಂಬೆಯಲ್ಲಿ ಪ್ರವಾಸ ಮುಗಿಸಿ ಹಿಂತಿರುಗುವಾಗ ಈ ಘಟನೆ ನಡೆದಿದೆ.
ಕಳೆದ 10 ದಿನಗಳಲ್ಲಿ ಆಗುಂಬೆ ಹಾಗೂ ಸೋಮೇಶ್ವರ ರಾಷ್ಟ್ರೀಯ ಹೆದ್ದಾರಿ 169ಎ ಯಲ್ಲಿ ಪ್ರತ್ಯೇಕ 3 ಅಪಘಾತ ಸಂಭವಿಸಿದ್ದು ಒಟ್ಟು 4 ಮಂದಿ ಮೃತಪಟ್ಟಿದ್ದಾರೆ. ವಾಹನಗಳ ಅಪಘಾತಗಳ ಪೈಕಿ ಬಸ್ ಹಾಗೂ ಲಾರಿ ಚಾಲಕರ ವೇಗವಾದ ವಾಹನ ಚಾಲನೆ ಮುಖ್ಯ ಕಾರಣ ಎಂದು ಸಾರ್ವಜನಿಕರು ದೂರಿದ್ದಾರೆ. ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.