Praveen Nettaru murder case: ಮತ್ತಿಬ್ಬರು ಪಿಎಫ್ಐ ಮುಖಂಡರ ಸುಳಿವು ನೀಡಿದ್ರೆ ₹5 ಲಕ್ಷ ಬಹುಮಾನ!

By Ravi JanekalFirst Published Jan 19, 2023, 1:32 PM IST
Highlights

ಬಿಜೆಪಿ ಕಾರ್ಯಕರ್ತಪ್ರವೀಣ್ ‌ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು‌ ಆರೋಪಿಗಳ ಪತ್ತೆಗೆ ರಾಷ್ಟ್ರೀಯ ತನಿಖಾ ದಳ ಐದು ಲಕ್ಷ ರೂ. ಬಹುಮಾನ ಘೋಷಿಸಿದೆ.  ಸುಳಿವು ನೀಡಿದವರ ಮಾಹಿತಿ ಗೌಪ್ಯವಾಗಿ ಇಡೋದಾಗಿ ರಾಷ್ಟ್ರೀಯ ತನಿಖಾ ದಳಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

ಮಂಗಳೂರು (ಜ.19): ಬಿಜೆಪಿ ಕಾರ್ಯಕರ್ತಪ್ರವೀಣ್ ‌ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು‌ ಆರೋಪಿಗಳ ಪತ್ತೆಗೆ ರಾಷ್ಟ್ರೀಯ ತನಿಖಾ ದಳ ಐದು ಲಕ್ಷ ರೂ. ಬಹುಮಾನ ಘೋಷಿಸಿದೆ.

ಇಬ್ಬರು‌ ನಿಷೇಧಿತ ಪಿಎಫ್ಐ(PFI) ಸಂಘಟನೆ ‌ಮುಖಂಡರ ಪತ್ತೆಗೆ 5ಲಕ್ಷ ರೂ. ಘೋಷಣೆ ಮಾಡಲಾಗಿದೆ. ಪಿಎಫ್ಐ ಕಾರ್ಯಕಾರಿ ಸಮಿತಿ ಸದಸ್ಯ ಬಂಟ್ವಾಳ ತಾಲೂಕಿನ ಕೊಡಾಜೆಯ ಮಹಮ್ಮದ್ ಶರೀಪ್(Muhammad Sharif)(48) ಹಾಗೂ ನೆಕ್ಕಿಲಾಡಿಯ ಮಸೂದ್(Masood) ಪತ್ತೆಗೆ ಬಹುಮಾನ ಘೋಷಣೆಯಾಗಿದೆ. ಸುಳಿವು ನೀಡಿದವರ ಮಾಹಿತಿ ಗೌಪ್ಯವಾಗಿ ಇಡೋದಾಗಿ ರಾಷ್ಟ್ರೀಯ ತನಿಖಾ ದಳ(National Investigation Agency) ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

ಪ್ರವೀಣ್‌ ಹತ್ಯೆ ಆರೋಪಿಗಳ ಪತ್ತೆಗೆ 40 ಕಡೆ ವಾಂಟೆಡ್ ಪೋಸ್ಟರ್‌

ಈ ಹಿಂದೆ ಉಳಿದ ನಾಲ್ವರು ಅರೋಪಿಗಳ ಸುಳಿವು ನೀಡಿದವರಿಗೆ ಒಟ್ಟು 14 ಲಕ್ಷ ನಗದು ಬಹುಮಾನ ಘೋಷಣೆ ಮಾಡಿತ್ತು ಎನ್‌ಐಎ. ತಲೆ ಮರೆಸಿಕೊಂಡ 4 ಪ್ರಮುಖ ಆರೋಪಿಗಳ ಪತ್ತೆಗೆ ಮಾಹಿತಿ ನೀಡಿದ್ರೆ 14 ಲಕ್ಷ ಘೋಷಿಸಿತ್ತು. ಮೊಹಮ್ಮದ್ ಮುಸ್ತಫಾಗೆ 5 ಲಕ್ಷ, ತುಫೈಲ್ ಗೆ 5 ಲಕ್ಷ, ಉಮರ್ ಫಾರೂಕ್ ಗೆ 2 ಲಕ್ಷ, ಅಬುಬಕರ್ ಸಿದ್ದಿಕ್ ಗೆ 2 ಲಕ್ಷ ಘೋಷಿಸಿತ್ತು. 

ಮೂವರು ದಕ್ಷಿಣ ಕನ್ನಡ(Dakshina kannada) ಹಾಗೂ ಓರ್ವ ಕೊಡಗು(Kodagu) ಮೂಲದ ಆರೋಪಿಗಳು‌. ದ.ಕ ಜಿಲ್ಲೆ ಸುಳ್ಯ ತಾಲ್ಲೂಕು ಬೆಳ್ಳಾರೆ ಬೂಡುಮನೆ ನಿವಾಸಿ ಮೊಹಮ್ಮದ್ ಮುಸ್ತಫಾ. ಕೊಡಗು ಜಿಲ್ಲೆ ಮಡಿಕೇರಿ ನಗರದ ಗದ್ದಿಗೆ ನಿವಾಸಿ ತುಫೈಲ್ ಎಂ ಹೆಚ್. ದ.ಕ ಜಿಲ್ಲೆ ಸುಳ್ಯ ನಗರದ ಕಲ್ಲುಮುಟ್ಲು ನಿವಾಸಿ ಉಮ್ಮರ್ ಫಾರೂಕ್. ದ.ಕ ಜಿಲ್ಲೆ‌ ಸುಳ್ಯ ತಾಲೂಕಿನ ಬೆಳ್ಳಾರೆ ನಿವಾಸಿ ಅಬೂಬಕ್ಕರ್ ಸಿದ್ದೀಕ್ ಆಗಿದ್ದರು. ನಾಲ್ವರು ನಿಷೇಧಿತ PFI ಕಾರ್ಯಕರ್ತರು, 

ಹಂತಕರನ್ನು ಹುಡುಕಿಕೊಟ್ಟರೆ ಇನಾಮು: ಎನ್‌ಐಎ ಘೋಷಣೆ

ಪ್ರವೀಣ್(Praveen nettaru murder case) ಕೊಲೆ‌ ಪ್ರಕರಣದ ಆರೋಪಿಗಳಾಗಿದ್ದಾರೆ. ಜುಲೈ 26 ರಂದು ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ನಡೆದಿತ್ತು.

click me!