ಹೆಣ್ಣಿನ ಸಂಗಕ್ಕಾಗಿ ಕಳ್ಳತನವನ್ನೇ ಕಸುಬು ಮಾಡಿಕೊಂಡದಿದ್ದ ಬೆಂಗಳೂರು 'ತೀಟೆ ತಾತ'!

By Contributor Asianet  |  First Published Mar 4, 2022, 12:47 PM IST

* ತೀಟೆ ತೀರದ ತಾತನ ಕಥೆ ಕೇಳಿ ಥಂಡಾ ಹೊಡೆದ ಪೊಲೀಸರು

* ಹೆಣ್ಣು ಮಕ್ಕಳ ಚಟಕ್ಕೆ ಬಿದ್ದು ಕಳ್ಳತನ ಮಾಡಿದ ವೃದ್ಧ ಬಂಧನ

* ರಮೇಶ್ (70) ಬಂಧಿತ ವೃದ್ಧ

* ಮನೆಗಳ್ಳತನ ಪ್ರಕರಣಗಳ ಸಂಬಂಧಗಳ ತನಿಖೆ ವೇಳೆ ಪತ್ತೆ


ಬೆಂಗಳೂರು (ಮೇ 4)  ಭಲೇ ತಾತ.. ಹುಣಸೆ ಮರ ಮುಪ್ಪಾದರೂ ಹುಳಿ ಮುಪ್ಪೇ.... ತೀಟೆ ತೀರದ ತಾತನ ಕಥೆ ಕೇಳಿ  ಪೊಲೀಸರೇ (Benghaluru Police) ಥಂಡಾ ಹೊಡೆದಿದ್ದಾರೆ.  ಹೆಣ್ಣು ಮಕ್ಕಳ ಚಟಕ್ಕೆ (Prostitution) ಬಿದ್ದು ಕಳ್ಳತನಕ್ಕೆ ಇಳಿದಿದ್ದ ವೃದ್ಧ ಸೆರೆ ಸಿಕ್ಕಿದ್ದಾನೆ.

ರಮೇಶ್ (70) ಬಂಧಿತ ವೃದ್ಧ,  ಮನೆಗಳ್ಳತನ ಪ್ರಕರಣಗಳ ಸಂಬಂಧಗಳ ತನಿಖೆ ವೇಳೆ  ಈತನ ಅಸಲಿತನ ಬಟಾಬಯಲಾಗಿದೆ. ಸಿಸಿಟಿವಿ (CCTV) ಆಧರಿಸಿ ವೃದ್ಧನ ಬಂಧನ ಮಾಡಲಾಗಿತ್ತು.  ಬಳಿಕ ವಿಚಾರಣೆ ವೇಳೆ ಆರೋಪಿಯ ಹೆಣ್ಣು ಮಕ್ಕಳ ಚಟ ಬಯಲಿದೆ ಬಂದಿದೆ. ಎರಡು ಮದುವೆ, ಮೂರು ಮಕ್ಕಳಾದರೂ ಈತನ ಆಸೆ ಕಡಿಮೆ ಆಗಿರಲಿಲ್ಲ!

Tap to resize

Latest Videos

ತನ್ನ ಚಟಕ್ಕೆ ಮನೆಯಲ್ಲಿ ಹಣ ಕೊಡುತ್ತಿಲ್ಲ ಎಂಬ ಕಾರಣಕ್ಕೆ ಕಳ್ಳತನಕ್ಕೆ ತಾತ ಇಳಿದಿದ್ದ. ಮೂಲತಃ ಚಿಕ್ಕಮಗಳೂರಿನ ರಮೇಶ್ ಕಳೆದ 12 ವರ್ಷಗಳ ಹಿಂದೆ ಮನೆಯ ತೊರೆದು ತಮಿಳುನಾಡಿಗೆ ತೆರಳಿದ್ದ. ಸಣ್ಣಪುಟ್ಟ ಕಳ್ಳತನ ಮಾಡಿಕೊಂಡು ಬಂದ ಹಣದಲ್ಲಿ ವ್ಯಾಮೊಹ ತೀರಿಸಿಕೊಳ್ಳುತಿದ್ದ. ಆದ್ರೆ ಯಾವಾಗ ತಮಿಳುನಾಡು ಪೊಲೀಸರು ಬಂಧಿಸಿದ್ರೋ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಬೆಂಗಳೂರು ಸೇರಿದ್ದ.

ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಮನೆಗಳ್ಳತನ ಶುರು ಹಚ್ಚಿಕೊಂಡಿದ್ದ. ಸುದ್ದುಗುಂಟೆ ಪಾಳ್ಯ ಹಾಗೂ ಮೈಕೊಲೇಔಟ್ ಠಾಣೆಗಳಲ್ಲಿ ಪ್ರತ್ಯೇಕ  ಕಳ್ಳತನ ಮಾಡಿದ್ದ. ಸಿಸಿಟಿವಿ ಆಧರಿಸಿ ಆರೋಪಿ ಬಂಧಿಸಿರುವ ಸುದ್ದುಗುಂಟೆ ಪೊಲೀಸರು ತಾತನಿಂದ  170 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ.

ಮಸಾಜ್ ಮಾಡಿಸಿಕೊಳ್ಳಲು ದರೋಡೆ ಮಾಡ್ತಿದ್ರು:   ಮಸಾಜ್ ಪಾರ್ಲರ್ ಗೆ (Massage parlor) ಹೋಗಲೆಂದೇ ಮನೆ ಕಳ್ಳತನವನ್ನೇ ಕುಲಕಸುಬು ಮಾಡಿಕೊಂಡಿದ್ದ ಆಸಾಮಿಗಳು ಬಲೆಗೆ ಬಿದ್ದಿದ್ದಾರೆ.  ಮಾಡ್ತಾ ಇದ್ದಿದ್ದು(Robbery) ಕಳ್ಳತನ..ಆದ್ರೆ ಮಾಡ್ತಿದ್ದ ಜೀವನ ಮಾತ್ರ ರಾಯಲ್ ಆಗಿತ್ತು. ಹುಡುಗಿಯರ ಕೈಯಲ್ಲಿ ಮೈಕೈ ಮುಟ್ಟಿಸಿಕೊಳ್ಳಲು ಮನೆಕಳ್ಳತನಕ್ಕೆ ಇಳಿದವರು ಸೆರೆ ಸಿಕ್ಕಿದ್ದರು.

ಒಂಟಿ ಕೋಣೆ, ಚಂದದ ಹುಡುಗಿ, ಮಸಾಜ್‌ಗೆಂದು ಹೋದ, ಕೋಣೆಯಲ್ಲಿ ನಡೆದ ಆಟವೇ ಬೇರೆ..!

ಬೆಂಗಳೂರು ಪೊಲೀಸರು  ಜಾನ್ ಮೆಲ್ವಿನ್ ಮತ್ತು ಮಂಜುನಾಥ್  ಎಂಬುವರನ್ನು ಬಂಧಿಸಿದ್ದರು. ಮಸಾಜ್ ಪಾರ್ಲರ್ ಗೆ ಹೋಗಿ ಇವ್ರು ಕೊಡ್ತಿದ್ದ ಟಿಪ್ಸ್ ಕೇಳಿದ್ರೆ  ಆಘಾತವಾಗಲೇಬೇಕು.  ಅದು ಬಾರಿ ಮಸಾಜ್ ಪಾರ್ಲರ್ ಹೋಗಿ 10 ರಿಂದ 15 ಸಾವಿರ ಟಿಪ್ಸ್ ಕೊಟ್ಟು ಬರುತ್ತಿದ್ದರು. ಬಂಧಿತರಿಂದ 16 ಲಕ್ಷ ಮೌಲ್ಯದ ಚಿನ್ನಾಭರಣ, ಒಂದು ಜೊತೆ ಬೆಳ್ಳಿಯ ಕಾಲು ಚೈನು, ಎರಡು ಬೈಕ್ ವಶಕ್ಕೆ ಪಡೆದುಕೊಳ್ಳಲಾಗಿತ್ತು.

ಕೈಯಲ್ಲಿ ಮೊಬೈಲ್ ಹಿಡಿದು ನಡೆದು ಹೋಗೋರೆ ಇವರ ಟಾರ್ಗೆಟ್:  ಕೈಯಿಂದ ಮೊಬೈಲ್ ಕಿತ್ತು ಎಸ್ಕೇಪ್ ಆಗುತ್ತಿದ್ದ ಕಿಲಾಡಿಗಳ ಕತೆ ಇದು. ಕಾಸ್ಟ್ಲಿ ಮೊಬೈಲ್ ನನ್ನೆ ಟಾರ್ಗೆಟ್ ಮಾಡುತ್ತಿದ್ದ ಕಳ್ಳರುಕ್ಷಣಮಾತ್ರದಲ್ಲಿ ಮಾಯವಾಗುತ್ತಿದ್ದರು. ಮೊಬೈಲ್ ಕಳ್ಳತನ ಮಾಡುತ್ತಿದ್ದ ಮೂವರನ್ನ ಬಂಧಿಸಿದ ಜೆಜೆ ನಗರ ಪೊಲೀಸರು ಬಂಧಿತರಿಂದ 13 ಲಕ್ಷ 60 ಸಾವಿರ ಮೌಲ್ಯದ 80 ಮೊಬೈಲ್ ಫೋನ್,  ಒಂದು ದ್ವಿಚಕ್ರ ವಾಹನ ವಶಕ್ಕೆ ಪಡೆದುಕೊಂಡಿದ್ದರು. ಮೋಹಿದ್, ಮುಬಾರಕ್ ಪಾಷಾ, ಖಾಸಿಫ್ ಖಾನ್ ಬಂಧಿತ ಆರೋಪಿಗಳು.

click me!