ಅಶ್ಲೀಲ ವೀಡಿಯೋ ಹೊಂದಿದ್ದ ಪೆನ್ ಡ್ರೈವ್ ವೈರಲ್ ಕೇಸ್ಇ ಬ್ಬರು ಬಿಜೆಪಿ ಕಾರ್ಯಕರ್ತ ರನ್ನ ಎಸ್ ಐ ಟಿ ತಂಡ ಬಂಧಿಸಿದೆ. ಮಾಜಿ ಶಾಸಕ ಪ್ರೀತಂಗೌಡ ಅಪ್ತರೆಂದು ತಿಳಿದುಬಂದಿದೆ.
ಹಾಸನ (ಮೇ.12) : ಅಶ್ಲೀಲ ವೀಡಿಯೋ ಹೊಂದಿದ್ದ ಪೆನ್ ಡ್ರೈವ್ ವೈರಲ್ ಕೇಸ್ ನಲ್ಲಿ ಎಸ್‌ಐಟಿ ಮೊದಲ ಬೇಟೆ ಮಾಡಿದೆ. ಇಬ್ಬರು ಬಿಜೆಪಿ ಕಾರ್ಯಕರ್ತ ರನ್ನ ಎಸ್ ಐ ಟಿ ತಂಡ ಬಂಧಿಸಿದೆ. ಮಾಜಿ ಶಾಸಕ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡರ ಕಛೇರಿ ಸಿಬ್ಬಂದಿ ಚೇತನ್ ಹಾಗೂ ಪ್ರೀತಂಗೌಡ ಆಪ್ತ ಲಿಖಿತ್ ಗೌಡ ಎಂಬವರನ್ನು ಬಂಧಿಸಲಾಗಿದೆ. ಶನಿವಾರ ಮಧ್ಯರಾತ್ರಿ ಇವರಿಬ್ಬರನ್ನು ಎಸ್‌ಐಟಿ ವಶಕ್ಕೆ ಪಡೆದು ತನಿಖೆ ನಡೆಸುತ್ತಿದೆ.
ಚೇತನ್ ಹಾಸನ ತಾಲೂಕಿನ ಯಲಗುಂದ ಗ್ರಾಮದವನಾಗಿದ್ದು, ಆತನ ಮನೆಯಲ್ಲಿ ಇನ್ಸ್ಪೆಕ್ಟರ್ ಜಗದೀಶ್ ನೇತೃತ್ವದಲ್ಲಿ ಎಸ್ ಐ ಟಿಯಿಂದ ಸ್ಥಳ ಮಹಜರ್ ನಡೆಸಿದೆ. ಮತ್ತೊಂದೆಡೆ ಶ್ರವಣಬೆಳಗೊಳದಲ್ಲಿ ಲಿಖಿತ್ ಮನೆಯಲ್ಲಿ ಸ್ಥಳ ಮಹಜರ್ ನಡೆದಿದೆ. ಈ ಮೂಲಕ ವೀಡಿಯೋ ವೈರಲ್ ಪ್ರಕರಣ ಚುರುಕುಗೊಂಡಿದೆ. ಪ್ರಕರಣದಲ್ಲಿ ನವೀನ್ ಮತ್ತು ಪುಟ್ಟುರಾಜು ಎಂಬುವವರ ಹೆಸರು ಕೇಳಿಬಂದಿದ್ದು, ಅಧಿಕಾರಿಗಳು ಇವರಿಬ್ಬರಿಗಾಗಿ ಹುಡುಕಾಡುತ್ತಿದ್ದಾರೆ.
undefined
16 ದಿನದಿಂದ ಪ್ರಜ್ವಲ್ ನಾಪತ್ತೆ, ಇಂದು ಜರ್ಮನಿಯಿಂದ ಟಿಕೆಟ್ ಬುಕ್ ಮಾಡಿದ್ದ ಸಂಸದ, ಆದ್ರೆ ಬರೋದು ಅನುಮಾನ!
ಈ ಮೂಲಕ ಹಾಸನದಲ್ಲಿ ಅಶ್ಲೀಲ ವೀಡಿಯೋ ಹೊಂದಿದ್ದ ಪೆನ್ ಡ್ರೈವ್ ವೈರಲ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪೆನ್ ಡ್ರೈವ್ ಇಟ್ಟುಕೊಂಡಿದ್ದ ಆರೋಪದಲ್ಲಿ ಇಬ್ಬರ ವಶಕ್ಕೆ ಪಡೆದಿದ್ದು, ಪೆನ್ ಡ್ರೈವ್ ವೈರಲ್ ಸಂಬಂಧ ದಾಖಲಾಗಿರೊ ಕೇಸ್ ನಲ್ಲಿ ಹೆಸರೇ ಇಲ್ಲದ ಇಬ್ಭರನ್ನು ವಶಕ್ಕೆ ಪಡೆದಂತಾಗಿದೆ.
ಲೈಂಗಿಕ ಹಗರಣ: ಪ್ರಜ್ವಲ್ ರೇವಣ್ಣ ಹುಡುಕಿ ಕೊಟ್ಟವರಿಗೆ 1 ಲಕ್ಷ ಬಹುಮಾನ, ಜನತಾ ಪಕ್ಷ
ಹಾಸನದ ನಗರ ಪೊಲೀಸ್ ಠಾಣೆ ಸಮಚ್ಚಯದಲ್ಲಿರೊ ಸೈಬರ್ ಕ್ರೈಂ ಠಾಣೆಯಲ್ಲಿ ಇಬ್ಬರ ವಿಚಾರಣೆ ನಡೆಯುತ್ತಿದ್ದು, ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಅಶ್ಲೀಲ ವಿಡಿಯೋ ಹಾಸನದಲ್ಲಿ ಹರಿದಾಡುತ್ತಿದ್ದಂತೆಯೇ ಏಪ್ರಿಲ್ 23ರಂದು ಹಾಸನ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿತ್ತು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿನಾಶ ಮತ್ತು ಅಪಹರಣ ಕೇಸಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣ ಜೈಲಿನಲ್ಲಿದ್ದಾರೆ. ಸಂಸದ ಪ್ರಜ್ವಲ್ ರೇವಣ್ಣ 16 ದಿನಗಳಿಂದ ನಾಪತ್ತೆಯಾಗಿದ್ದಾರೆ.