Hubballi Riots: ಹುಬ್ಬಳ್ಳಿ ಗಲಭೆಕೋರರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಪೊಲೀಸರು..!

By Girish Goudar  |  First Published Apr 27, 2022, 12:35 PM IST

*   ಗಲಭೆ‌ ಮುಂಚೂಣಿಯಲ್ಲಿದ್ದು ಪ್ರಚೋದನೆ ನೀಡಿದವರ ವಿರುದ್ಧ ರೌಡಿಶೀಟರ್‌ ಓಪನ್
*  20 ಕ್ಕೂ ಹೆಚ್ಚು ಪುಂಡರ ವಿರುದ್ಧ ಕಮ್ಯೂನಲ್ ಗೂಂಡಾ ಕಾಯ್ದೆ ಪ್ರಯೋಗಿಸಲು ಪ್ಲಾನ್‌‌
*  ಗಲಭೆಗೆ ತುಪ್ಪ ಸುರಿದವರಿಗೆ ಕಠಿಣ ಕ್ರಮದ ಚಾಟಿ ಬೀಸಲು ಮುಂದಾದ ಪೊಲೀಸರು  
 


ವರದಿ: ಗುರುರಾಜ ಹೂಗಾರ, ಏಷ್ಯಾನೆಟ್‌ ಸುವರ್ಣ ನ್ಯೂಸ್‌, ಹುಬ್ಬಳ್ಳಿ 

ಹುಬ್ಬಳ್ಳಿ(ಏ.27): ಹಳೇ ಹುಬ್ಬಳ್ಳಿ(Old Hubli) ಗಲಭೆಕೋರರ (Riots) ವಿರುದ್ಧ ಕಠಿಣ ಕ್ರಮ ಜರುಗಿಸಿ ಎಂಬ ಒತ್ತಾಯ ತೀವ್ರಗೊಳ್ಳುತ್ತಿದೆ. ಕಲ್ಲು ತೂರಾಟ ನಡೆಸಿದವರ ಮನೆಗಳಿಗೆ ಬುಲ್ಡೋಜರ್ ಹಚ್ಚಿ ಎಂಬ ಒತ್ತಾಯವು ಇದೆ. ಇದರ ಮಧ್ಯೆ ಹುಬ್ಬಳ್ಳಿ ಪೊಲೀಸರು ಈಗ ಗಲಭೆಕೋರರಿಗೆ ಭರ್ಜರಿ ಬಿಸಿ‌ಮುಟ್ಟಿಸಲು ಮುಂದಾಗಿದ್ದಾರೆ. 

Tap to resize

Latest Videos

ಹೌದು, ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ಪೊಲೀಸ್ ವ್ಯವಸ್ಥೆಯನ್ನೇ ಪ್ರಶ್ನಿಸುವಂತಾಗಿತ್ತು. ಲಾಠಿ, ಬಂದೂಕು ಹಿಡಿದ ಸಮಾಜದ ರಕ್ಷಣೆಗೆ ನಿಂತ ಪೊಲೀಸರನ್ನೇ ಟಾರ್ಗೆಟ್ ಮಾಡಿದ್ದ ಕಿರಾತಕರು, ಕಲ್ಲು ತೂರಾಟ ನಡೆಸಿ, ತಲೆ ಹೊಡೆದು ಹಾಕಿದ್ರು. ಪೊಲೀಸ್ ವಾಹನಗಳ ನೆಲಕ್ಕುರುಳಿಸಿ ದಾಂದಲೇ ನಡೆಸಿದ್ರು. ಇಡೀ ಘಟನೆ ಇಡೀ ಘಟನೆ ಹುಬ್ಬಳ್ಳಿ ಜನರನ್ನ ಒಂದು ವಾರ ಕಾಲ ಭಯದಲ್ಲಿ ಬದುಕುವಂತೆ ಮಾಡಿತ್ತು. ಇದೀಗ ಹುಬ್ಬಳ್ಳಿ ಗಲಭೆಗೆ ಕಾರಣರಾದ 146 ಪುಂಡರನ್ನ ಬಂಧಿಸಲಾಗಿದೆ. ಇನ್ನೂ ಕೆಲವರು ತಲೆಮರೆಸಿಕೊಂಡಿದ್ದು ಬಂಧಿತರ ವಿರುದ್ಧ ಪೊಲೀಸ್ ಇಲಾಖೆ ಈಗ ಕಠಿಣ ಕ್ರಮಕ್ಕೆ ಮುಂದಾಗಿದೆ.

Hubli Riots: ಗಲಭೆಕೋರರಿಗೆ ಇಫ್ತಿಯಾರ್‌ ಕೂಟ ನೀಡಲು ಮುಂದಾದ AIMIM ಮುಖಂಡರು

ಹಳೇ ಹುಬ್ಬಳ್ಳಿ ಗಲಭೆಯಲ್ಲಿ ಭಾಗಿಯಾದವರನ್ನು ರೌಡಿ ಪಟ್ಟಿಯಲ್ಲಿ ಸೇರಿಸಲು ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಕಮಿಷನರೇಟ್‌ ನಿರ್ಧರಿಸಿದೆ. ಇದುವರೆಗೆ ಬಂದಿತ 146 ಆರೋಪಿಗಳ ಪೈಕಿ ನಾಲ್ಕೈದು ಜನ ಮಾತ್ರ ರೌಡಿಶೀಟರ್‌ಗಳಿದ್ದಾರೆ(Rowdy Sheeter). ಇನ್ನುಳಿದ  20ಕ್ಕೂ ಹೆಚ್ಚು ಆರೋಪಿಗಳು ಅವಳಿ ನಗರಗಳ ವಿವಿಧ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದ ಅಪರಾಧಗಳ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಈ ಬಗ್ಗೆ ಆರೋಪಿಗಳ ಪೂರ್ವಪರ ಸಂಗ್ರಹಿಸಿರುವ ಪೊಲೀಸರು. 40  ಕ್ಕೂ ಹೆಚ್ಚು ಬಂಧಿತರನನ್ನ ರೌಡಿ ಶೀಟ್ ಓಪನ್ ಮಾಡಿ ಪಟ್ಟಿಗೆ ಸೇರಿಸಲು ತಯಾರಿ ನಡೆಸಿದ್ದಾರೆ. ಅಷ್ಟೇ ಅಲ್ಲದೇ, ಗಲಭೆಗೆ ಪ್ರಚೋದಿಸಿ ಮಾಸ್ಟರ್ ಮೈಂಡ್ ಗಳಂತೆ ಕೆಲಸ ಮಾಡಿದ 20 ಕ್ಕು ಹೆಚ್ಚು‌ ಮುಖಂಡರುಗಳ ವಿರುದ್ಧ ಗೊಂಡಾ ಕಾಯ್ದೆ (Gunda Act) ಪ್ರಯೋಗಿಸಲು‌ ಪ್ಲಾನ್ ಮಾಡಿದೆ. ಕಮ್ಯೂನಲ್ ಗೂಂಡಾ(Communal Gundas) ಎಂದು ಗುರುತಿಸಿ 20 ಜನರ ಪಟ್ಟಿ ಸಿದ್ದಪಡಿಸಲಾಗಿದೆ.

ಇನ್ನೂ ಏ.16ರಂದು ಗಲಭೆಯಲ್ಲಿ ಕೆಲಸ ಸಂಘಟನೆಗಳು ಹಾಗೂ AIMIM ಪಕ್ಷದ ಮುಖಂಡರು, ಕಾರ್ಪೋರೆಟರ್ ಹೆಸರುಗಳು ಕೇಳಿ ಬಂದಿದ್ದು, ಈಗಾಗಲೇ ಕೆಲವರನ್ನು ಬಂಧಿಸಲಾಗಿದೆ. ಅಂತವರ ವಿರುದ್ಧವೂ ಈಗ ಗೂಂಡ ಕಾಯ್ದೆ ಪ್ರಯೋಗಿಸುವ ಚಿಂತನೆ ನಡದಿದೆ. ಮನೆಯಲ್ಲಿ ಕೂತು ಗಲಭೆಗೆ ತುಪ್ಪ ಸುರಿದವರಿಗೆ ಪೊಲೀಸ್ ಕಠಿಣ ಕ್ರಮದ ಚಾಟಿ ಬೀಸಲು ಮುಂದಾಗಿದ್ದಾರೆ. ಯಾವುದೇ ಸಂಘಟನೆಯಿರಲಿ, ಮುಖಂಡರ ಮಕ್ಕಳಿರಲಿ ಅಪರಾಧ ಪ್ರಕರಣಗಳಲ್ಲಿ ಪಾಲ್ಗೊಂಡಿದ್ದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ಪಾಲಿಕೆ ಸದಸ್ಯರೊಬ್ಬರನ್ನು ಬಂಧಿಸಲಾಗಿದೆ. ಗಲಭೆಯಲ್ಲಿ ಯಾವ ಸಂಘಟನೆಗಳು ಪಾಲ್ಗೊಂಡಿವೆ ಎಂದು ತನಿಖಾ ಹಂತದಲ್ಲಿ ಹೇಳಲು ಸಾಧ್ಯವಿಲ್ಲ. ವಿಡಿಯೊ, ಸಿಸಿಟಿವಿ ಕ್ಯಾಮೆರಾ ಹಾಗೂ ಇನ್ನಿತರ ತಾಂತ್ರಿಕ ಸಾಧನಗಳ ದಾಖಲೆಗಳನ್ನು ಆಧರಿಸಿ ಗಲಭೆಕೋರರ ಕಾನೂನಿನ ಪಾಠ ಕಲಸುತ್ತೇವೆ ಅಂತಾರೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಲಾಭೂ ರಾಮ್. 

ಒಟ್ಟಿನಲ್ಲಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಆವರಣದಲ್ಲಿ ಕಲ್ಲು ತೂರಾಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಕಮೀಷನರೇಟ್ ಮತ್ತಷ್ಟು ಕಿಂಗ್ ಪಿನ್(Kingpin) ಬಂಧನಕ್ಕೆ ಬಲೆ ಬೀಸಿದ್ದು ಮತ್ತಷ್ಟು ಕಾಣದ ಕೈಗಳು ಹೊರ ಬರಬೇಕಿದೆ.
 

click me!