ಚಿಕ್ಕಮಗಳೂರು: ಆನೆ ದಂತದಲ್ಲಿ ಚೆಸ್ ಪಾನ್ ಕೆತ್ತನೆ, ಮಾರಾಟ ಮಾಡುವಾಗ ಸಿಕ್ಕಿಬಿದ್ದ

By Suvarna News  |  First Published Apr 26, 2022, 5:03 PM IST

* ಆನೆ ದಂತದಲ್ಲಿ ಚದುರಂಗದ ಪಾನ್ 
* ಪಾನ್ ಜೊತೆಗೆ ಟ್ರೋಫಿಗೆ ಹಾಕಿರುವ ಜಿಂಕೆ  ಕೊಂಬು ಪತ್ತೆ 
* ಚಿಕ್ಕಮಗಳೂರು ಜಿಲ್ಲೆಯ ಅರಣ್ಯ ಇಲಾಖೆ ಸಿಐಡಿ ವಿಭಾಗದ ಅಧಿಕಾರಿಗಳು ಕಾರ್ಯಚಾರಣೆ


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು, (ಏ.26) :
ಆತ ಓದಿರುವುದು ಬರೀ 7 ಕ್ಲಾಸ್ , ಆತ ಮಾಡುತ್ತಿದ್ದ ಕೆಲಸ ಮಾತ್ರ ಭಯಂಕರ , ಕಾಡಂಚಿನ ಗ್ರಾಮದಲ್ಲಿ ವಾಸವಾಗಿರುವ ಈತ ಮಾಡುತ್ತಿದ್ದ ಖತರ್ನಾಕ್ ಕೆಲಸವನ್ನು ಪೊಲೀಸ್ ಸಿಬ್ಬಂದಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಆನೆ ದಂತದಲ್ಲಿ ಕೆತ್ತಿದ್ದ ಚೆಸ್ ಪಾನ್ ಮಾರಾಟ ಮಾಡುವ ವೇಳೆಯಲ್ಲಿ ಪೊಲೀಸರ ಅತಿಥಿಯಾಗಿದ್ದಾನೆ ಮಲೆನಾಡಿನ ಮೂಲದ ವ್ಯಕ್ತಿ.

ಆನೆ ದಂತದಲ್ಲಿ ಚದುರಂಗದ ಪಾನ್ 
ಆನೆ ದಂತದಲ್ಲಿ ಚದುರಂಗದ ಪಾನ್ ಹಾಗೂ ಬಾಕ್ಸ್ ನಿರ್ಮಾಣ ಮಾಡಿ ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಆರೋಪಿ ಸಿಐಡಿ ಅರಣ್ಯ ಸಂಚಾರಿ ಪೊಲೀಸ್ ದಳದ ಬಲೆಗೆ ಬಿದ್ದಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ. ನಗರದ ಖಾಸಗಿ ಬಸ್ ನಿಲ್ದಾಣದ ಹಿಂಭಾಗ ಹಾಸನ ಜಿಲ್ಲೆ ಸಕಲೇಶಪುರ ಮೂಲದ ಮೆಲ್ವಿನ್ ಎಂಬ ವ್ಯಕ್ತಿ.

Tap to resize

Latest Videos

ಚಿಕ್ಕಮಗಳೂರು: ದಶಕಗಳಿಂದ ಆತಂಕದಲ್ಲೇ ಬದುಕುತ್ತಿದ್ದ ಭೂ ಒತ್ತುವರಿದಾರರಿಗೆ ಗುಡ್‌ನ್ಯೂಸ್

ಈತ ಆನೆ ದಂತದಿಂದ ನಿರ್ಮಿಸಿದ್ದ 16 ಕಪ್ಪು ಬಣ್ಣದ ಪಾನ್ ಗಳು  ಹಾಗೂ 16 ಬಿಳಿ ಬಣ್ಣದ ಪಾನ್ ಗಳನ್ನ ಕೆತ್ತನೆ ಮಾಡಿದ್ದನು. ಜೊತೆಗೆ ಚೆಸ್ ಪಾನ್ ಗಳನ್ನ ಇಡುವ ಪಾನ್ ಗಳನ್ನೂ ಇಡುವ ಬಾಕ್ಸ್ ಅನ್ನು ಕೂಡ ಆನೆ ದಂತದಲ್ಲಿ ನಿರ್ಮಾಣ ಮಾಡಿದ್ದನು. ಇದನ್ನು ಮಾರಾಟ ಮಾಡಲು ಯತ್ನಿಸುವಾಗ ನಗರದ ಸಂಚಾರಿ ಅರಣ್ಯ ದಳದ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ ಆನೆ ದಂತದಿಂದ ಕೆತ್ತನೆ ಮಾಡಿದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳ ಜೊತೆ ಟ್ರೋಫಿಗೆ ಹಾಕಿದ್ದ ಜಿಂಕೆಯ ಕೊಂಬನ್ನು ವಶಕ್ಕೆ ಪಡೆದಿದ್ದಾರೆ.

ಚೆಸ್ ಪಾನ್  ಕೆತ್ತನೆ ನೋಡಿ ದಂಗಾದ ಪೊಲೀಸ್ರು 
ಸಂಚಾರಿ ದಳದ ಸಿಬ್ಬಂದಿಗಳಿಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಆನೆ ದಂತ ಮಾರಾಟದ ಕೇಸ್ ಎಂದು  ದಾಳಿ ನಡೆಸಿದ ಸಮಯದಲ್ಲಿ ಆರೋಪಿಯ ಬಳಿ ಇದ್ದ ವಸ್ತುವನ್ನು ನೋಡಿ ಕೆಲ ಕಾಲ ದಂಗಾಗಿದ್ದಾರೆ. ಏಕೆಂದ್ರೆ ಆರೋಪಿ ಬಳಿ ಆನೆ ದಂತದಲ್ಲಿ ಮಾಡಿರುವ ಚೆಸ್ ಪಾನ್ , ಅದರ ಸೂಕ್ಷ್ಮ ಕೆತ್ತನೆ, ಸೇರಿದಂತೆ ಬಾಕ್ಸ್ ನೋಡಿದ ಪೊಲೀಸ್ರುರಿಗೆ ಆಶ್ಚರ್ಯವಾಗಿದೆ. ಅಷ್ಟೋಂದು ಸೂಕ್ಷ್ಮ ಕೆತ್ತನೆಐ 32 ಪಾನ್ ಗಳಿವೆ.ಪೊಲೀಸ್ರು 7ನೇ ಕ್ಲಾಸ್ ಓದಿರುವ ಮೆಲ್ವಿನ್ ನ್ನು ಹೆಚ್ಚಿನ ವಿಚಾರಣೆ ಒಳಪಡಿಸಿದ್ದಾಗ ನಮ್ಮ ಪೂರ್ವಿಕರು ಬ್ರಿಟಿಷರಲ್ಲಿ ಅಡುಗೆ ಕೆಲಸವನ್ನು ಮಾಡುತ್ತಿದ್ದರು, ಅವರಿಂದ ಬಂದಂತಹ ಬಳುವಳಿ ಇದಾಗಿದ್ದು ಇದನ್ನು ಮಾರಾಟ ಮಾಡಿದ್ರೆ ಹೆಚ್ಚಿನ ಹಣ ಬರುತ್ತೆ ಎನ್ನುವ ಆಸೆ ಇದನ್ನು ಮಾರಾಟ ಮಾಡಲು ಯತ್ನಸಿದ್ದಾಗ ಬಾಯ್ಬಿಟ್ಟಿದ್ದಾನೆ. ಜೊತೆಗೆ ಜಿಂಕೆಯನ್ನು ಹತ್ಯೆ ಮಾಡಿ ಟ್ರೋಫಿಗೆ ಹಾಕಿದ್ದ ಕೊಂಬಿನ ಬಗ್ಗೆ ಮಾಹಿತಿ ನೀಡಿದ್ದಾನೆ. 

ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ 
ಆರೋಪಿಯನ್ನು ಬಂಧಿಸಿದ ಅರಣ್ಯ ಸಂಚಾರಿ ದಳದ ಪೊಲೀಸರು ಆರೋಪಿ ಮೆಲ್ವಿನ್ ನನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಅರಣ್ಯ ಸಂಚಾರಿ ದಳದ ಉಪನಿರೀಕ್ಷಕ ಶರತ್ ಸೇರಿದಂತೆ ಇತರೆ ಸಿಬ್ಬಂದಿಗಳಾದ ಹೆಚ್. ದೇವರಾಜು, ದಿನೇಶ್, ದಿವಾಕರ್, ಹಾಲೇಶ್, ಹೇಮಾವತಿ ಹಾಗೂ ಚಾಲಕ ತಿಮ್ಮಶೆಟ್ಟಿ ಭಾಗವಹಿಸಿದ್ದರು.

click me!