ಮುಧೋಳ ನಗರದ ಓಂಕಾರ, ಶಿವದುರ್ಗಾ, ಸಪ್ತಗಿರಿ, ಸುರಭಿ ಲಾಡ್ಜ್ ಮೇಲೆ ದಾಳಿ ಮಾಡಲಾಗಿದೆ. ದಾಳಿ ವೇಳೆ 11 ಜನ ಯುವತಿಯರನ್ನ ರಕ್ಷಣೆ ಮಾಡಲಾಗಿದೆ. ಯುವತಿಯರು ಆಸ್ಸಾಂ, ಕಲ್ಕತ್ತಾ, ಮುಂಬೈ ಮೂಲದವರು ಎಂದು ತಿಳಿದು ಬಂದಿದೆ.
ಬಾಗಲಕೋಟೆ(ಜು.12): ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ ಆರೋಪದ ಹಿನ್ನಲೆಯಲ್ಲಿ ಜಿಲ್ಲೆಯ ಮುಧೋಳ ನಗರದಲ್ಲಿ ನಾಲ್ಕು ಲಾಡ್ಜ್‌ಗಳ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಜಮಖಂಡಿ ಡಿವೈ ಎಸ್ ಪಿ ಶಾಂತವೀರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಮುಧೋಳ ಸಿಪಿಐ, ಇಬ್ಬರು ಪಿಎಸ್ ಐ, ಲೋಕಾಪುರ ಪಿಎಸ್ ಐ ಸೇರಿ ನಾಲ್ಕು ತಂಡಗಳಿಂದ ನಾಲ್ಕು ಲಾಡ್ಜ್ ಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.
ಮುಧೋಳ ನಗರದ ಓಂಕಾರ, ಶಿವದುರ್ಗಾ, ಸಪ್ತಗಿರಿ, ಸುರಭಿ ಲಾಡ್ಜ್ ಮೇಲೆ ದಾಳಿ ಮಾಡಲಾಗಿದೆ. ದಾಳಿ ವೇಳೆ 11 ಜನ ಯುವತಿಯರನ್ನ ರಕ್ಷಣೆ ಮಾಡಲಾಗಿದೆ. 26 ರಿಂದ 30 ವಯಸ್ಸಿನ ಯುವತಿಯರು ಆಸ್ಸಾಂ, ಕಲ್ಕತ್ತಾ, ಮುಂಬೈ ಮೂಲದವರು ಎಂದು ತಿಳಿದು ಬಂದಿದೆ.
ಮಂಜಿನ ನಗರಿ ಮಡಿಕೇರಿಯಲ್ಲಿ ಹಾಸನದ 19 ವರ್ಷದ ಯುವತಿ ಇಟ್ಟುಕೊಂಡು ನಕಲಿ ವೇಶ್ಯಾವಾಟಿಕೆ
ಲಾಡ್ಜ್ ಮ್ಯಾನೇಜರ್, ಮಾಲೀಕರು ಸೇರಿ ಒಂಭತ್ತು ಜನರ ಮೇಲೆ ಎಫ್ ಐ ಆರ್ ಹಾಕಲು ಪೊಲೀಸರು ಮುಂದಾಗಿದ್ದಾರೆ. ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ಆರೋಪದ ಮೇರೆಗೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ. ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.