ಬೆಂಗಳೂರು: ಮಹಿಳೆಗೆ ರೇಪ್ ಬೆದರಿಕೆ, ಕೆಆರೆಸ್ ಪಕ್ಷದ ನಾಯಕನ ಹೆಡೆಮುರಿ ಕಟ್ಟಿದ ಪೊಲೀಸ್‌..!

Published : Jul 12, 2024, 07:59 AM IST
ಬೆಂಗಳೂರು: ಮಹಿಳೆಗೆ ರೇಪ್ ಬೆದರಿಕೆ, ಕೆಆರೆಸ್ ಪಕ್ಷದ ನಾಯಕನ ಹೆಡೆಮುರಿ ಕಟ್ಟಿದ ಪೊಲೀಸ್‌..!

ಸಾರಾಂಶ

ಸಂತ್ರಸ್ತೆಯು ಜು.1 ಕಾಡುಗೋಡಿ ಮೆಟ್ರೊ ನಿಲ್ದಾಣ ಬಳಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಶ್ರೀನಿವಾಸ್, ಸಚಹರ ಕೃಷ್ಣ,ಮತ್ತೊಬ್ಬ ಸಂತ್ರಸ್ತೆಯನ್ನು ತಡೆದು ಆಶ್ಲೀಲವಾಗಿ ನಿಂದಿಸಿದ್ದರು. ಆಗ ಕೃಷ್ಣ ಎಂಬಾತ 'ನಾವು ನಿನ್ನ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ರೈಲ್ವೆ ಟ್ರ್ಯಾಕ್‌ಗೆ ಎಸೆಯುತ್ತೇವೆ' ಎಂದು ಬೆದರಿಸಿದ್ದರು. ನಿನ್ನ ವಿಡಿಯೋಗಳನ್ನು ಯೂಟ್ಯೂಬ್ ನಲ್ಲಿ ಹರಿಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದನು. 

ಬೆಂಗಳೂರು(ಜು.12):  ಪರಿಚಿತ ಮಹಿಳೆಯನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಸಾಮೂಹಿಕ ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿದ ಆರೋಪದಡಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಮುಖಂಡನನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೋಲಾರ ಮೂಲದ 34 ವರ್ಷದ  ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಬೆಳ್ಳೂರು ನಿವಾಸಿ ಶ್ರೀನಿವಾಸ್ ನಾಯಕ್‌ನನ್ನು ಬಂಧಿಸಲಾಗಿದೆ. ಈತನ ಸಹಚರ ಕೃಷ್ಣ ಸೇರಿ ಆರೋಪಿಗಳಿಬ್ಬರು ತಲೆಮರೆಸಿಕೊಂಡಿದ್ದಾರೆ.

ಶ್ರೀನಿವಾಸ್ ನಾಯಕ್ ವಿವಾಹಿತನಾಗಿದ್ದು, ದಾಂಪತ್ಯದಲ್ಲಿ ಬಿರುಕಾಗಿ ಕೆಲ ವರ್ಷಗಳ ಹಿಂದೆ ಪತ್ನಿಯಿಂದ ವಿಚ್ಛೇದನ ಪಡೆದುಕೊಂಡು ನೆಲೆಸಿದ್ದ. ಜೀವನೋಪಾಯಕ್ಕಾಗಿ ಕಾಡುಗೋಡಿ ಬಳಿ ಗ್ರಾಮ ಒನ್ ಕಚೇರಿ ನಡೆಸುತ್ತಿದ್ದ, ಕೆಆರ್‌ಎಸ್‌ ಪಕ್ಷದ ಮಹದೇವಪುರ ವಿಧಾನಸಭಾ ಕ್ಷೇತ್ರದ ಯುವ ಘಟಕದ ಅಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದ. ಸಂತ್ರಸ್ತೆಯು ಈ ಹಿಂದೆ ಆರೋಪಿಯ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಇಬ್ಬರ ನಡುವೆ ವೈಮನಸು ಮೂಡಿದ್ದರಿಂದ ಸಂತ್ರಸ್ತೆಯು ಕೆಲಸ ತೊರೆದಿದ್ದರು. ಬಳಿಕ ಪರಮೇಶ್ ಎಂಬಾತನ ಜತೆಗೆ ಸ್ನೇಹ ಬೆಳೆಸಿದ್ದನ್ನು ಸಹಿಸದ ಆರೋಪಿಯು ಇತ್ತೀಚೆಗೆ ಪರಮೇಶ್ ಜತೆಗೂ ಜಗಳ ಮಾಡಿಕೊಂಡಿದ್ದ. 

ಬೆಂಗಳೂರು: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪ್ರೇಯಸಿಯ 3 ವರ್ಷದ ಮಗುವನ್ನೇ ಕೊಂದ ಪಾಪಿ..!

ಅಶ್ಲೀಲವಾಗಿ ನಿಂದನೆ

ಸಂತ್ರಸ್ತೆಯು ಜು.1 ಕಾಡುಗೋಡಿ ಮೆಟ್ರೊ ನಿಲ್ದಾಣ ಬಳಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಶ್ರೀನಿವಾಸ್, ಸಚಹರ ಕೃಷ್ಣ,ಮತ್ತೊಬ್ಬ ಸಂತ್ರಸ್ತೆಯನ್ನು ತಡೆದು ಆಶ್ಲೀಲವಾಗಿ ನಿಂದಿ ಸಿದ್ದಾರೆ. ಆಗ ಕೃಷ್ಣ ಎಂಬಾತ 'ನಾವು ನಿನ್ನ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ರೈಲ್ವೆ ಟ್ರ್ಯಾಕ್‌ಗೆ ಎಸೆಯುತ್ತೇವೆ' ಎಂದು ಬೆದರಿಸಿದ್ದಾರೆ. 'ನಿನ್ನ ವಿಡಿಯೋಗಳನ್ನು ಯೂಟ್ಯೂಬ್ ನಲ್ಲಿ ಹರಿಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

The Devil Movie: ಕಾಲವೇ ಸತ್ಯ ಹೇಳುತ್ತದೆ. ಸಮಯವೇ ಉತ್ತರಿಸುತ್ತದೆ-ಜೈಲಿನಿಂದಲೇ Darshan ಮೆಸೇಜ್
ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು