ಬೆಂಗಳೂರು: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪ್ರೇಯಸಿಯ 3 ವರ್ಷದ ಮಗುವನ್ನೇ ಕೊಂದ ಪಾಪಿ..!

By Kannadaprabha News  |  First Published Jul 12, 2024, 5:00 AM IST

ವಿರಾಟನಗರ ನಿವಾಸಿ ಮೈಕಲ್ ರಾಜ್ ಬಂಧಿತ. ಆರೋಪಿ ಜು. 6ರಂದು ಪ್ರೇಯಸಿ ರಮ್ಯಾಳ 3 ವರ್ಷದ ಅಶ್ವಿನ್ ಎಂಬ ಮಗುವಿನ ಮೇಲೆ ಹಲ್ಲೆ ಮಾಡಿದ್ದ. ಚಿಕಿತ್ಸೆ ಫಲಿಸದೆ ಜು.8ರಂದು ಮಗು ಮೃತಪಟ್ಟಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ.
 


ಬೆಂಗಳೂರು(ಜು.12):  ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪ್ರೇಯಸಿಯ 3 ವರ್ಷದ ಮಗುವನ್ನು ಕೊಂದ ಆರೋಪಿಯನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ವಿರಾಟನಗರ ನಿವಾಸಿ ಮೈಕಲ್ ರಾಜ್ (38) ಬಂಧಿತ. ಆರೋಪಿ ಜು. 6ರಂದು ಪ್ರೇಯಸಿ ರಮ್ಯಾಳ 3 ವರ್ಷದ ಅಶ್ವಿನ್ ಎಂಬ ಮಗುವಿನ ಮೇಲೆ ಹಲ್ಲೆ ಮಾಡಿದ್ದ. ಚಿಕಿತ್ಸೆ ಫಲಿಸದೆ ಜು.8ರಂದು ಮಗು ಮೃತಪಟ್ಟಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ.

Tap to resize

Latest Videos

ಮನೆಗೆ ಸರ್ಕಾರದಿಂದ ಹಣ ಪಡೆದು ಗಂಡನಿಗೆ ಕೈಕೊಟ್ಟು ಪ್ರೇಮಿಗಳ ಜೊತೆ ಮಹಿಳೆಯರು ಎಸ್ಕೇಪ್‌..!

ಏನಿದು ಪ್ರಕರಣ?: 

ದೂರುದಾರೆ ರಮ್ಯಾ ಆರು ವರ್ಷದ ಹಿಂದೆ ಸತೀಶ್ ಎಂಬಾತನ ಜತೆಗೆ ಮದುವೆಯಾಗಿದ್ದರು. ದಂಪತಿಗೆ ಅಶ್ವಿನ್ ಎಂಬ 3 ವರ್ಷದ ಗಂಡು ಮಗುವಿತ್ತು. ಈ ನಡುವೆ ದಂಪತಿ ನಡುವೆ ಮನಸ್ತಾಪವಾಗಿ ರಮ್ಯಾ ಪತಿಯಿಂದ ದೂರವಾಗಿ ಬಸವನಪುರದ ತವರು ಮನೆಯಲ್ಲಿ ಮಗು ಜತೆಗೆ ನೆಲೆಸಿದ್ದರು. ರಮ್ಯಾ ತವರು ಮನೆ ಎದುರು ಮೈಕಲ್ ಗ್ಯಾರೇಜ್ ನಡೆಸುತ್ತಿದ್ದ. ಆಗ ಇಬ್ಬರ ನಡುವೆ ಪರಿಚಯವಾಗಿ ಆಕ್ರಮ ಸಂಬಂಧಕ್ಕೆ ತಿರುಗಿತ್ತು.

ಅತ್ತಿದ್ದಕ್ಕೆ ಕಪಾಳಮೋಕ್ಷ

ಮಗು ಅಶ್ವಿನ್ ಅಳುವುದು, ಹಠ ಹಿಡಿಯವುದು ಮಾಡುತ್ತಿದ್ದ ಕಾರಣ ಮೈಕಲ್ ರಮ್ಯಾ ಜತೆಗೆ ಆತ್ಮೀಯವಾಗಿ ಕಾಲ ಕಳೆಯಲು ಅಡಚಣೆಯಾ ಗುತ್ತಿತು. ಜು.6 ಮಧ್ಯಾಹ್ನ ರಮ್ಯಾ ಮನೆಯ ಹೊ ರಗೆ ಹೋಗಿದ್ದರು. ಈ ವೇಳೆ ಪುತ್ರ ಅಶ್ವಿನ್ ಮನೆ ಯೊಳಗೆ ಜೋರಾಗಿ ಅಳುತ್ತಿದ್ದ. ಕುಪಿತನಾದ ಮೈಕಲ್, ಮಗುವಿನ ಕಪಾಳಕ್ಕೆ ಹೊಡೆದಿದ್ದ. ಈ ವೇಳೆ ಮಗುವಿನ ತಲೆ ಗೋಡೆಗೆ ಡಿಕ್ಕಿಯಾಗಿದೆ. ಈ ವಿಷಯ ತಿಳಿದ ಬಳಿಕ ರಮ್ಯಾ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಮಗುವಿನ ತಲೆಗೆ ಜೋರಾಗಿ ಪೆಟ್ಟುಬಿದ್ದ ಕಾರಣ ಮಗು ಚಿಕಿತ್ಸೆ ಫಲಿಸದೆ ಮೃತಪಟ್ಟಿತ್ತು.

click me!