Crime News; ಹೆತ್ತ ತಾಯಿ ಮೇಲೆ ಎರಗಿದ ಕಾಮುಕ... ಎಲ್ಲವೂ ಡ್ರಗ್ಸ್ ಘಾಟು!

By Suvarna News  |  First Published Nov 7, 2021, 10:44 PM IST

* ಇದಕ್ಕಿಂತ ಘೋರ ಪ್ರಕರಣ ಇನ್ನೊಂದಿಲ್ಲ
* ಚಾಕು ತೋರಿಸಿ ಹೆತ್ತ ತಾಯಿಯ ಮೇಲೆ ಅತ್ಯಾಚಾರ ಮಾಡಿದ
* ಡ್ರಗ್ಸ್ ಮತ್ತು ಮದ್ಯದ ನಶೆಯಲ್ಲಿದ್ದ ಯುವಕ
* ಉತ್ತರ ಪ್ರದೇಶದಲ್ಲಿಯೂ ಹೆಚ್ಚಿದ ಡ್ರಗ್ಸ್ ಹಾವಳಿ 


ಗಾಜಿಯಾಬಾದ್(ನ. 07) ಪ್ರಪಂಚದಲ್ಲಿ ಇದಕ್ಕಿಂತ ಘೋರ ಪ್ರಕರಣ ಇನ್ನೊಂದಿಲ್ಲ.  ಪಾಪಿಯೊಬ್ಬ ಹೆತ್ತ ತಾಯಿಗೆ(Mother) ಬ್ಲೇಡ್ ತೋರಿಸಿ  ಬೆದರಿಸಿ ಆಕೆಯ ಮೇಲೆಯೇ ಅತ್ಯಾಚಾರ (Rape) ಮಾಡಿದ್ದಾನೆ.

ಮದ್ಯ ಮತ್ತು ಡ್ರಗ್ಸ್(Drugs) ಗೆ ದಾಸನಾಗಿದ್ದವ ಇಂಥ ಹೀನ ಕೆಲಸ ಮಾಡಿದ್ದಾನೆ.  ತಾನು ಹೇಳಿದಂತೆ ಕೇಳದಿದ್ದರೆ ನಿನ್ನನ್ನು ಹತ್ಯೆ ಮಾಡುತ್ತೇನೆ ಎಂದು ಕುತ್ತಿಗೆಗೆ ಬ್ಲೇಡ್ ಇಟ್ಟಿದ್ದಾನೆ.

Tap to resize

Latest Videos

undefined

ಕುಡಿತ ಹಾಗೂ ಮಾದಕ ವ್ಯಸನಿಯಾಗಿರುವ ಯುವಕ ತನ್ನ ಬೇಡಿಕೆಗೆ ಮಣಿಯದಿದ್ದರೆ ತಾಯಿಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ತಿಲ್ಲಾ ಮೋರ್ ಪೊಲೀಸ್ ಠಾಣೆ (Uttar Pradesh Police) ವ್ಯಾಪ್ತಿಯ ಕೊಳೆಗೇರಿಯಲ್ಲಿ ಈ ಘಟನೆ ನಡೆದಿದೆ. 

ಘಟನೆ  ದಿನ ಆರೋಪಿ ಮದ್ಯ ಹಾಗೂ ಮಾದಕ ವ್ಯಸನದ ಅಮಲಿನಲ್ಲಿ ಮನೆಗೆ ಬಂದಿದ್ದ.  ನಂತರ ತನ್ನ ತಾಯಿಗೆ ಚಾಕು ತೋರಿಸಿ ಬೆದರಿಸಿದ್ದಾನೆ. ಮಗನ ವರ್ತನೆಯಿಂದ ಆಘಾತಕ್ಕೊಳಗಾದ ಮಹಿಳೆ ಆಕ್ಷೇಪ ವ್ಯಕ್ತಪಡಿಸಿ ತಪ್ಪಿಸಿಕೊಳ್ಳಲು ನೋಡಿದ್ದಾಳೆ.  ಆದರೆ ಕುತ್ತಿಗೆಗೆ ಬ್ಲೇಡ್ ಹಿಡಿದ ಪರಿಣಾಮ ಆಕೆ ಏನೂ ಮಾಡಲು ಸಾಧ್ಯವಾಗಿಲ್ಲ. ನಂತರ ಆರೋಪಿಯು ತನ್ನ ತಾಯಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಕುಮಾರಸ್ವಾಮಿಗೆ ಹಾರ ಹಾಕಲು ಬಂದು ಲಕ್ಷ ಕಳೆದುಕೊಂಡ

ನನ್ನ ಮಗ ನನ್ನ ಮೇಲೆ ಅತ್ಯಾಚಾರ ಮಾಡುತ್ತಾನೆ ಎಂದು ನಾನು ಭಾವಿಸಿರಲಿಲ್ಲ ಎಂದು ಮಹಿಳೆ ಘಟನೆಯ ನಂತರ ಹೇಳಿದ್ದು ಪೊಲೀಸರಿಗೆ ದೂರು ಕೊಟ್ಟಿದ್ದಾಳೆ. ನನ್ನ ಪತಿ ರಾಂಪುರ ಜಿಲ್ಲೆಯಲ್ಲಿ ವಾಸಿಸುತ್ತಿದ್ದು ಆತನೂ ಡ್ರಗ್ಸ್  ದಾಸನಾಗಿದ್ದಾನೆ.  ಮನೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದಗ್ದು ನನ್ನ ಮಗನೇ ಈ ರೀತಿ ಮಾಡುತ್ತಾನೆ ಎಂದು ಕೊಂಡಿರಲಿಲ್ಲ ಎಂದು ಕಣ್ಣೀರು ಸುರಿಸುತ್ತಾರೆ.

ಮಗ ಸ್ವಭಾವತಃ ಕ್ರೂರ ಮತ್ತು ಸ್ಥಳೀಯ ಜನರೊಂದಿಗೆ ಜಗಳವಾಡಿಕೊಂಡೇ ಬಂದಿದ್ದಾನೆ ಎಂದಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮಾದಕ ದೃವ್ಯ ಜಾಲ; ಮಾದಕ ದೃವ್ಯದ ಜಾಲ ಇಡೀ ದೇಶವನ್ನು ಗೊತ್ತಿಲ್ಲದಂತೆ ಆವರಿಸಿಕೊಳ್ಳುತ್ತಿರುವ ಘಟಡನೆಗಳು ವರದಿಯಾಗುತ್ತಲೇ ಇವೆ. ಮುಂಬೈ ಪೊಲೀಸರು ಮತ್ತು ಎನ್‌ ಸಿಬಿ ಸಹ ಕ್ರಿಪ್ರ ಕಾರ್ಯಾಚರಣೆ ನಡೆಸಿ ದೊಡ್ಡ ಜಾಲವನ್ನು ಪತ್ತೆ ಮಾಡಿತ್ತು.  ಎಲ್ಲ ರಾಜ್ಯಗಳ ಪೊಲೀಸ್ ಇಲಾಖೆಗಳು ಈ ಡ್ರಗ್ಸ್ ತಡೆಗೆ ಕ್ರಮ ತೆಗೆದುಕೊಂಡರೂ ಪರಿಣಾಮಕಾರಿಯಾಗುತ್ತಿಲ್ಲ. 

click me!