ಕರ್ತವ್ಯನಿರತ ಪೊಲೀಸ್ ಪೇದೆ ನಿಗೂಢವಾಗಿ ಕಣ್ಮರೆ!

By Ravi Janekal  |  First Published Dec 8, 2023, 10:29 AM IST

ಕರ್ತವ್ಯನಿರತ ಪೊಲೀಸ್ ಪೇದೆಯೊಬ್ಬ ನಿಗೂಢವಾಗಿ ಕಣ್ಮರೆಯಾಗಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಬಿದನಗೆರೆ ಗ್ರಾಮದಲ್ಲಿ ನಡೆದಿದೆ. ವೀರೇಶ್(27) ಕಣ್ಮರೆಯಾದ ಪೊಲೀಸ್ ಸಿಬ್ಬಂದಿ. ಮಿಡಿಗೇಶ್ ಠಾಣೆಯಲ್ಲಿ ಕಳೆದೆರಡು ವರ್ಷಗಳಿಂದ ಪಿಸಿಯಾಗಿ ಕೆಲಸ ನಿರ್ವಹಿಸುತ್ತಿದ್ದ ವೀರೇಶ್. ಎಂದಿನಂತೆ ಡ್ಯೂಟಿಗೆ ಬಂದಿದ್ದ. 


ತುಮಕೂರು (ಡಿ.8): ಕರ್ತವ್ಯನಿರತ ಪೊಲೀಸ್ ಪೇದೆಯೊಬ್ಬ ನಿಗೂಢವಾಗಿ ಕಣ್ಮರೆಯಾಗಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಬಿದನಗೆರೆ ಗ್ರಾಮದಲ್ಲಿ ನಡೆದಿದೆ. ವೀರೇಶ್(27) ಕಣ್ಮರೆಯಾದ ಪೊಲೀಸ್ ಸಿಬ್ಬಂದಿ. ಮಿಡಿಗೇಶ್ ಠಾಣೆಯಲ್ಲಿ ಕಳೆದೆರಡು ವರ್ಷಗಳಿಂದ ಪಿಸಿಯಾಗಿ ಕೆಲಸ ನಿರ್ವಹಿಸುತ್ತಿದ್ದ ವೀರೇಶ್. ಎಂದಿನಂತೆ ಡ್ಯೂಟಿಗೆ ಬಂದಿದ್ದ. 

ಕೆರೆ ಏರಿ ಮೇಲೆ ಬೈಕ್ ಬಟ್ಟೆ ಪತ್ತೆ:

Tap to resize

Latest Videos

undefined

ನಾಪತ್ತೆಯಾಗಿರುವ ಪೊಲೀಸ್ ಪೇದೆ ಹುಡುಕಾಡುತ್ತಿರುವಾಗ ಕೆರೆ ಏರಿಮೇಲೆ ವೀರೇಶ ಧರಿಸಿದ ಬಟ್ಟೆ, ಬೈಕ್ ಪತ್ತೆಯಾಗಿದೆ. ಆದರೆ ಪೊಲೀಸ್ ಪೇದೆಯ ಸುಳಿವಿಲ್ಲ. ಕೊಪ್ಪಳ ಮೂಲದವರಾದ ವಿರೇಶ್, 2020-21 ರ ಬ್ಯಾಚ್ ಪೊಲೀಸ್ ಪೇದೆಯಾಗಿದ್ದ ನೇಮಕವಾಗಿದ್ದ. ಎರಡು ವರ್ಷಗಳಿಂದ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ನಿನ್ನೆ ಕಲರ್ ಡ್ರೆಸ್‌ನಲ್ಲಿ ಡ್ಯೂಟಿಗೆ ಬಂದಿದ್ದ ವಿರೇಶ್, ಬೆಳಗ್ಗೆಯಿಂದ ಡ್ಯೂಟಿಯಲ್ಲೇ ಇದ್ದ, ಸಹೋದ್ಯೋಗಿಗಳೊಂದಿಗೆ ಮಾತಾಡಿದ್ದಾನೆ ಬಳಿಕ ಮಧ್ಯಾಹ್ನ 3 ಗಂಟೆಗೆ ಮನೆಗೆ ಹೋಗೋದಾಗಿ ಠಾಣೆಯಿಂದ ತೆರಳಿರುವ ವಿರೇಶ್. ನಿನ್ನೆ ಸಂಜೆ  5.30 ರ ಸುಮಾರಿಗೆ ಬಿದರಕೆರೆ ಗ್ರಾಮದ ಕೆರೆಯ ಏರಿಯ ಮೇಲೆ, ಬೈಕ್, ಮೊಬೈಲ್ ಹಾಗೂ ಬಟ್ಟೆ ಬಿಚ್ಚಿಟ್ಟು ನಾಪತ್ತೆ‌ಯಾಗಿದ್ದಾನೆ.

ಅಯ್ಯಪ್ಪ ಮಾಲೆ ಧರಿಸಿ ವಂಚನೆ; ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು!

ಇದೇ ತಿಂಗಳು ಮದುವೆ ನಿಶ್ಚಯ:

ನಿಗೂಢವಾಗಿ ಕಾಣೆಯಾಗಿರುವ ಪೊಲೀಸ್ ಪೇದೆ ವಿರೇಶ್ ಇದೇ ತಿಂಗಳ 22-23 ರಂದು ಮದುವೆ ಫಿಕ್ಸ್ ಆಗಿತ್ತು. ಕೊಪ್ಪಳದಲ್ಲಿ ಮದುವೆ ನಡೆಸಲು ಡೇಟ್ ಫಿಕ್ಸ್ ಮಾಡಿದ್ದ ಕುಟುಂಬಸ್ಥರು. ಆದರೆ ಮದುವೆ ಸಮಯ ಹತ್ತಿರವಿರುವಾಗಲೇ ನಾಪತ್ತೆಯಾಗಿರುವುದು ಹಲವು ಅನಮಾನಗಳಿಗೆ ಕಾರಣವಾಗಿದೆ.

ದರೋಡೆ ವೇಳೆ ಎಟಿಎಂಗೆ ಬೆಂಕಿ, ₹4.5 ಲಕ್ಷ ರು. ಭಸ್ಮ!

ಕೆರೆಯಲ್ಲಿ ಈಜು ಬಾರದೇ ಮುಳುಗಿದನಾ? ಅಥವಾ ಆತ್ಮಹತ್ಯೆ ಮಾಡಿಕೊಂಡನಾ ಈ ಬಗ್ಗೆ ಸಂಶಯವ್ಯಕ್ತವಾಗಿದೆ. ಸದ್ಯ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರಿಂದ ಶೋಧಕಾರ್ಯ ನಡೆಸಿದ್ದಾರೆ. ನಿನ್ನೆ ತಡರಾತ್ರಿವರೆಗೆ ಕೆರೆಯಲ್ಲಿ ಶೋಧ ಕಾರ್ಯ ನಡೆಸಿರುವ ಪೊಲೀಸರು. ಆದರೂ ಇದುವರೆಗೂ ಸುಳಿವು ಸಿಕ್ಕಿಲ್ಲ. ಸ್ಥಳಕ್ಕೆ ತುಮಕೂರು ಎಸ್ ಪಿ ಅಶೋಕ್ ಕೆ.ವಿ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಮುಂದುವರಿದಿರುವ ಶೋಧಕಾರ್ಯ. 

click me!