murder case : ಅತ್ತಿಗೆ ಮೈದುನನ ಪ್ರೇಮದಾಟ, ಅಡ್ಡಿಯಾದ ಅಮ್ಮ ಸೇರಿದ್ಲು ಯಮನ ಪಾದ

Published : Mar 14, 2026, 11:17 AM IST
murder case

ಸಾರಾಂಶ

murder case : ಬಿಳಿ ಚೀಲದಲ್ಲಿ ಹೆಣ ಸಿಕ್ಕಿದ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದೆ. ಕೊಲೆ ಮಾಡಿದ್ದ್ಯಾರು, ಯಾಕೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಕೊಲೆಪಾತಕರು ಕಂಬಿ ಹಿಂದೆ ಸೇರಿದ್ದಾರೆ. 

ಎಂದಿನಂತೆ ಸ್ವಚ್ಛತಾ ಸಿಬ್ಬಂದಿ ತಮ್ಮ ಕೆಲ್ಸ ಶುರು ಮಾಡಿದ್ರು. ಒಂದು ಪ್ಲಾಸ್ಟಿಕ್ ಚೀಲದ ಗಂಟು ಅವರ ಕಣ್ಣಿಗೆ ಬಿದ್ದಿತ್ತು. ಕಸ ಇರ್ಬಹುದು ಅಂತ ಭಾವಿಸಿದ್ದವರು ಬಗ್ಗಿ ನೋಡ್ದಾಗ ಹೌಹಾರಿದ್ದರು. ಅದ್ರಲ್ಲಿದ್ದಿದ್ದು ಕಸವಲ್ಲ, ಹೆಣ. ತನಿಖೆ ವೇಳೆ ಪ್ರಕಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ಕಿದೆ. ಹಾಡಹಗಲೆ ಹೆಣ ತುಂಬಿದ್ದ ಚೀಲವನ್ನು ಹೆಗಲ ಮೇಲೆ ಹೊತ್ತು ಹೋಗ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಇನ್ನೇನು ಬೇಕು, ಹತ್ಯೆಗೈದವರು ಕಂಬಿ ಹಿಂದೆ ಸೇರಿದ್ದಾರೆ.

ಸತ್ತವರು ಯಾರು? ಆಗಿದ್ದೇನು?

ಘಟನೆ ನಡೆದಿರೋದು ಸೂರತ್ ನ ಅಮ್ರೋಲಿ ಪ್ರದೇಶದ ಕೊಸಾದ್ ಹೌಸಿಂಗ್ ಕಾಲೋನಿಯಲ್ಲಿ. ಮಾರ್ಚ್ 11 ರಂದು ಹೆಣ ಸಿಕ್ಕಿದೆ. ವಿಚಾರಣೆ ವೇಳೆ ಇದು ಅದೇ ಪ್ರದೇಶದ ನಿವಾಸಿ ಹಮೀದಾ ಖಾತೂನ್ ಮನ್ಸೂರಿ ಶವ ಅನ್ನೋದು ತಿಳಿದುಬಂದಿದೆ. ಹಮೀದಾ ಖಾತೂನ್ ಮನ್ಸೂರಿಗೆ ಸುಮಾರು 57 ವರ್ಷ ವಯಸ್ಸಾಗಿತ್ತು. ಕುಟುಂಬದ ಜವಾಬ್ದಾರಿಯನ್ನು ಅವರೇ ಹೊತ್ತಿದ್ದರು. ಅವರ ಪತಿ ಕೆಲವು ವರ್ಷಗಳ ಹಿಂದೆ ನಿಧನರಾಗಿದ್ದರು. ಇಬ್ಬರು ಗಂಡು ಮಕ್ಕಳಾದ ವಾಸಿಮ್ ಮತ್ತು ಪರ್ವೇಜ್ ಜೊತೆ ವಾಸವಾಗಿದ್ದ ಹಮೀದಾಗೆ ಸೊಸೆಯೊಬ್ಬಳಿದ್ದಳು. ಮೂರು ವರ್ಷದ ಹಿಂದೆ ವಾಸಿಮ್, ಶಬಾನಾಳನ್ನು ಮದುವೆ ಆಗಿದ್ದ.

Bengaluru: ಮದ್ವೆಯಾಗಿರೋ ವಿಷ್ಯ ಗೊತ್ತಿದ್ರೂ ಮನೆ ಬಿಟ್ಟು ಬಂದಿದ್ದ ಪ್ರೇಯಸಿ ಉಸಿರು ನಿಲ್ಲಿಸಿದ ಅಯ್ಯಪ್ಪ

ಅಕ್ರಮ ಸಂಬಂಧ

ಶಬಾನಾ ಬಂದ ಆರಂಭದಲ್ಲಿ ಎಲ್ಲ ಸರಿಯಾಗಿಯೇ ಇತ್ತು. ನಿಧಾನವಾಗಿ ಜಗಳ ಎಷ್ಟು ಉಲ್ಬಣಗೊಂಡತು ಅಂದ್ರೆ ಕೊಲೆಯಲ್ಲಿ ಅಂತ್ಯವಾಯ್ತು. ಹಮೀದಾ ಕಿರಿಯ ಮಗ ಪರ್ವೇಜ್ ಮನ್ಸೂರಿ ಹಾಗೂ ಅತ್ತಿಗೆ ಶಬಾನಾಗೆ ಅಕ್ರಮ ಸಂಬಂಧ ಇತ್ತು. ಶಬಾನಾ, ಸ್ವಲ್ಪ ದಿನ ಬಿಹಾರಕ್ಕೆ ಹೋಗಿದ್ದಳು. ಪರ್ವೇಜ್ ಕೂಡ ಅಲ್ಲಿಗೆ ಹೋಗಿದ್ದ. ಅಲ್ಲಿ ಇಬ್ಬರು ಹತ್ತಿರವಾಗಿದ್ದರು. ಅದು ಗುಜರಾತ್ ಗೆ ಬಂದ್ಮೇಲೂ ಮುಂದುವರೆದಿತ್ತು. ಸೂರತ್ ನಲ್ಲಿ ಕದ್ದು ಮುಚ್ಚಿ ಸೇರ್ತಿದ್ದರು. ಇದು ಹಮೀದಾಗೆ ಹೊತ್ತಾಗ್ತಿದ್ದಂತೆ ವಿರೋಧ ವ್ಯಕ್ತಪಡಿಸಿದ್ದರು. ಇದ್ರಿಂದ ಮನೆ ವಾತಾವರಣ ಹದಗೆಟ್ಟಿತ್ತು.

ಇಷ್ಟೇ ಅಲ್ಲ ತನಿಖೆಯಲ್ಲಿ ಇನ್ನೊಂದು ವಿಷ್ಯ ಕೂಡ ಹೊರ ಬಂದಿದೆ. ಪೊಲೀಸರ ಪ್ರಕಾರ, ಹಮೀದಾ ಖಾತೂನ್ ಮತ್ತು ಶಬಾನಾಳ ತಂದೆ ಮೊಹಮ್ಮದ್ ಫಿರೋಜ್ ಆಲಂ ಸಂಬಂಧ ಸರಿ ಇರಲಿಲ್ಲ. ಹಮೀದಾ ಮತ್ತು ಫಿರೋಜ್ ಸಂಬಂಧ ಹೊಂದಿದ್ದಾರೆ ಎನ್ನುವ ಚರ್ಚೆ ಮನೆಯಲ್ಲಿ ನಡೆಯುತ್ತಿತ್ತು. ಇದು ಪರಿಸ್ಥಿತಿಯನ್ನು ಉಲ್ಬಣಗೊಳಿಸಿತ್ತು.

ಹಣ – ಜಗಳದಿಂದ ಹೆಚ್ಚಾದ ದ್ವೇಷ

ಬರೀ ಅಕ್ರಮ ಸಂಬಂಧ ಮಾತ್ರವಲ್ಲ ಆರ್ಥಿಕ ಸ್ಥಿತಿ ಕೂಡ ದ್ವೇಷಕ್ಕೆ ಕಾರಣವಾಗಿತ್ತು. ಖರ್ಚು ನಿಯಂತ್ರಿಸಲು ಹಮೀದಾ ನೋಡ್ತಿದ್ದರು. ಇದು ಶಬಾನಾ ಹಾಗೂ ಪರ್ವೇಜ್ ಗೆ ಇಷ್ಟ ಇರಲಿಲ್ಲ. ಜಗಳಗಳು ಕ್ರಮೇಣ ಕೋಪ ಮತ್ತು ದ್ವೇಷವಾಗಿ ಬೆಳೆಯಿತು. ಶಬಾನಾ, ಅತ್ತೆ ಬಗ್ಗೆ ಅಪ್ಪನಿಗೆ ದೂರು ನೀಡಿದ್ದಳು. ಶಬಾನಾ ತಂದೆ, ಹಮೀದಾ ಮುಗಿಸುವ ಪ್ಲಾನ್ ಮಾಡಿದ್ದ. ಅದನ್ನು ಪರ್ವೇಜ್ ಗೆ ಹೇಳಿದ್ದ. ಇದಕ್ಕೆ ಪರ್ವೇಜ್ ಕೂಡ ಒಪ್ಪಿದ್ದ.

Bengaluru: 15 ವರ್ಷದ ಮಗಳಿಗೆ 5-6 ಸಾವಿರ ಫಿಕ್ಸ್ ಮಾಡಿ ವೇಶ್ಯಾವಾಟಿಕೆ ತಳ್ಳಿದ ತಾಯಿ

ಕೊಲೆ ನಡೆದಿದ್ದು ಹೇಗೆ?

ಶಬಾನಾ ತನ್ನ ತಂದೆ ಫಿರೋಜ್ ಆಲಂ, ಶಬಾನಾ ಮನೆಗೆ ಬಂದಿದ್ದಾನೆ. ಮಾತುಕತೆ ನೆಪದಲ್ಲಿ ಹಮೀದಾಳನ್ನು ರೂಮ್ ಒಳಗೆ ಕರೆದಿದ್ದಾನೆ. ಅಲ್ಲಿ ಉಸಿರುಗಟ್ಟಿಸಿ ಹಮೀದಾಳನ್ನು ಹತ್ಯೆಗೈದಿದ್ದಾನೆ. ಇದನ್ನು ಶಬಾನಾ ನಿಂತು ನೋಡಿದ್ದಾಳೆ. ಅತ್ತೆ ಕಥೆ ಮುಗಿತಿದ್ದಂತೆ ಪರ್ವೇಜ್ ಗೆ ಕಾಲ್ ಮಾಡಿದ್ದಾಳೆ. ಮನೆಗೆ ಬಂದ ಪರ್ವೇಜ್, ಹೆಣವನ್ನು ಚೀಲಕ್ಕೆ ತುಂಬಲು ಸಹಾಯ ಮಾಡಿದ್ದಾನೆ. ಕೈ ಕಾಲು ಕಟ್ಟಿ ಶವವನ್ನು ಚೀಲಕ್ಕೆ ತುಂಬಿದ ನಂತ್ರ ಫಿರೋಜ್, ಚೀಲವನ್ನು ಹೆಗಲ ಮೇಲೆ ಹೊತ್ತು ಮನೆಯಿಂದ ಹೊರ ಬಿದ್ದಿದ್ದಾನೆ.

ಮಧ್ಯಾಹ್ನ 12:30 ರ ಸುಮಾರಿಗೆ, ಫಿರೋಜ್ ಆಲಂ ಬಿಳಿ ಚೀಲದೊಂದಿಗೆ ನಡೆದುಕೊಂಡು ಹೋಗುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮನೆಯಿಂದ ಸುಮಾರು 300 ರಿಂದ 500 ಮೀಟರ್ ದೂರದಲ್ಲಿರುವ ದೇವಸ್ಥಾನದ ಬಳಿ ಚೀಲವನ್ನು ಎಸೆದಿದ್ದಾನೆ. ನಂತ್ರ ರೈಲ್ವೆ ನಿಲ್ದಾಣಕ್ಕೆ ಹೋಗಿ ಬಿಹಾರಕ್ಕೆ ಹೋಗುವ ರೈಲು ಹತ್ತಲು ಪ್ರಯತ್ನಿಸಿದ್ದಾನೆ.

ಸಾಕ್ಷ್ಯವಾದ ದಾರ

ಆರಂಭದಲ್ಲಿ ಜಟಿಲವಾಗಿದ್ದ ತನಿಖೆಗೆ ಸಿಕ್ಕಿದ್ದು ದಾರ. ಚೀಲಕ್ಕೆ ಕಟ್ಟಿದ್ದ ದಾರ, ಶಬಾನಾ ಮನೆಯಲ್ಲಿ ಸಿಕ್ಕಿದೆ. ವಿಚಾರಣೆ ತೀವ್ರಗೊಳಿಸಿದಾಗ ಎಲ್ಲರೂ ಸತ್ಯ ಬಾಯ್ಬಿಟ್ಟಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Bengaluru: ಮದ್ವೆಯಾಗಿರೋ ವಿಷ್ಯ ಗೊತ್ತಿದ್ರೂ ಮನೆ ಬಿಟ್ಟು ಬಂದಿದ್ದ ಪ್ರೇಯಸಿ ಉಸಿರು ನಿಲ್ಲಿಸಿದ ಅಯ್ಯಪ್ಪ
Bengaluru: 15 ವರ್ಷದ ಮಗಳಿಗೆ 5-6 ಸಾವಿರ ಫಿಕ್ಸ್ ಮಾಡಿ ವೇಶ್ಯಾವಾಟಿಕೆ ತಳ್ಳಿದ ತಾಯಿ