Tumakuru: ಸಚಿವ ಬಿ.ಸಿ ನಾಗೇಶ್‌ ಮನೆ ಎದುರು ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಜೈಲು ಪಾಲು

By Govindaraj S  |  First Published Jun 7, 2022, 1:42 AM IST

ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮನೆ ಮುಂದೆ ಪ್ರತಿಭಟನೆ ನಡೆಸಿ ಜೈಲು ಸೇರಿರುವ ವಿದ್ಯಾರ್ಥಿಗಳ ತಂದೆ-ತಾಯಿಯರ ಗೋಳು ಹೇಳದಂತಾಗಿದೆ. ತುಮಕೂರು ಜಿಲ್ಲಾ ಕಾರಾಗೃಹದಿಂದ ಎದುರು ನಿಂತು ಪೋಷಕರು ನಮ್ಮ ಮಕ್ಕಳನ್ನು ದಯವಿಟ್ಟು ಬಿಟ್ಟು ಬಿಡಿ ಅಂತ ಬೇಡಿಕೊಳ್ಳುತ್ತಿದ್ದಾರೆ.


ತುಮಕೂರು (ಜೂ.07): ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮನೆ ಮುಂದೆ ಪ್ರತಿಭಟನೆ ನಡೆಸಿ ಜೈಲು ಸೇರಿರುವ ವಿದ್ಯಾರ್ಥಿಗಳ ತಂದೆ-ತಾಯಿಯರ ಗೋಳು ಹೇಳದಂತಾಗಿದೆ. ತುಮಕೂರು ಜಿಲ್ಲಾ ಕಾರಾಗೃಹದಿಂದ ಎದುರು ನಿಂತು ಪೋಷಕರು ನಮ್ಮ ಮಕ್ಕಳನ್ನು ದಯವಿಟ್ಟು ಬಿಟ್ಟು ಬಿಡಿ ಅಂತ ಬೇಡಿಕೊಳ್ಳುತ್ತಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಜೈಲು ಎದುರು ಪ್ರತಿನಿತ್ಯ ಬರುವ ಪೋಷಕರು ಮಕ್ಕಳನ್ನು ನೋಡುತ್ತಾ ಜಮೀನಿಗಾಗಿ ಹರಸಾಹ ಪಡುತ್ತಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್‌ ಮುಖಂಡರು ನಮ್ಮ ಬೆಂಬಲಕ್ಕೆ ಬರದೆ ನಡು ನೀರಿನಲ್ಲಿ ಕೈ ಬಿಟ್ಟಿದ್ದಾರೆ ಅಂತ ಅಳಲು ತೋಡಿಕೊಂಡಿದ್ದಾರೆ. 

ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ  24 ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಸ್ಥಳೀಯ ಮುಖಂಡರು ನಮ್ಮ ಸಹಾಯಕ್ಕೆ ಬರುತ್ತಿಲ್ಲ ಅದರಲ್ಲೂ ಮಾಜಿ ಡಿಸಿಎಂ ಜಿ.ಪರಮೇಶ್ವರ್‌ ಈವರೆಗೂ ನಮಗೊಂದು ಕರೆ ಮಾಡಿ ಸಾಂತ್ವಾನ ಹೇಳಿಲ್ಲ ಜೊತೆಗೆ ಜೈಲಿಗೂ ಭೇಟಿ ನೀಡಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.  

Tap to resize

Latest Videos

ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ: ಸಚಿವ ನಾಗೇಶ್‌ ಮನೆಗೆ ಮುತ್ತಿಗೆ

ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್‌ ಹಾಗೂ ಎಂಎಲ್‌ ಸಿ ರಾಜೇಂದ್ರ ಹೊರತು ಪಡಿಸಿದ್ರೆ ಬೇರೆ ಯಾವ ಕಾಂಗ್ರೆಸ್‌ ನಾಯಕರು ನಮ್ಮ ಬೆಂಬಲಕ್ಕೆ ನಿಲ್ಲುತ್ತಿಲ್ಲ, ನಮ್ಮ ಮಕ್ಕಳನ್ನು ಬೇಲ್‌ ಮೇಲೆ ಹೊರ ತರಲು ಹೆಣಗಾಡುತ್ತಿದ್ದೇವೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಹೋರಾಟ ಮಾಡೋವ ಅದ್ಭುತ ಅವಕಾಶ ಕಾಂಗ್ರೆಸ್‌ ಪಾಲಿಗಿತ್ತು, ಆದರೆ ಕಾಂಗ್ರೆಸ್‌ ಪಕ್ಷದ ಮುಖಂಡರು ಇಂತಹ ಛಾನ್ಸ್‌ ಮಿಸ್‌ ಮಾಡ್ಕೊಂಡ್ರು. ಇವತ್ತು, ನಾಳೆ ಬೇಲ್‌ ಆಗ್ಬೋದು ಅನ್ನೋ ನಿರೀಕ್ಷೆಯಲ್ಲಿ ಕಾಯುತ್ತಿದ್ದೇವೆ ಎಂದು ಎನ್.ಎಸ್‌.ಯೂ. ಐ ಸಂಘಟನೆ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್‌ ತಾಯಿ ಹೇಮಲತಾ ಕಣ್ಣಿರಿಟ್ಟಿದ್ದಾರೆ. 

ಎದುರಿಗೆ ಡಿಕೆಶಿ ಸಂಬಂಧಿ ಎಂದ್ರೆ ಸಾಕಾಗೋಲ್ಲ: ಸಿಡಿದೆದ್ದ ಮುದ್ದಹನುಮೇಗೌಡ

ನಮ್ಮ ಮಕ್ಕಳು ಪೊಲೀಸರಿಗೆ ಮಾಹಿತಿ ನೀಡಿಯೇ ಪ್ರತಿಭಟನೆ ನಡೆಸಿದ್ದಾರೆ. ಆದ್ರೆ ಉದ್ದೇಶ ಪೂರ್ವಕವಾಗಿ ಮಕ್ಕಳನ್ನು ಬಂಧಿಸಲಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಮ್ಮ ಮಕ್ಕಳು ಪ್ರತಿಭಟನೆ ನಡೆಸಿದ್ರು. ಪ್ರತಿ ದಿನ ಸಾವಿರಾರು ಜನರು ಪ್ರತಿಭಟನೆ ಮಾಡ್ತಾರೆ ಅಂತಹದುರಲ್ಲಿ ಈ ಮಕ್ಕಳು ಏನು ದೊಡ್ಡ ತಪ್ಪು ಮಾಡಿಲ್ಲ, ಸಚಿವ ಮನೆಯಲ್ಲಿ ಸಿಸಿಟಿವಿ ಇರಲ್ವಾ, ಸೆಕ್ಯೂರಿಟಿ ಇರಲ್ವಾ, ಯಾರನ್ನು ಯಾಕೆ ಕೇಳಬೇಕು, ವಿಡಿಯೋದಲ್ಲಿ ನೋಡಿದ್ರೆ ಎಲ್ಲಾ ಗೊತ್ತಾಗುತ್ತೆ. ಚಡ್ಡಿಗೂ ಬೆಂಕಿ ಹಚ್ಚಿಲ್ಲ, ಪೇಪರ್‌ಗೆ ಬೆಂಕಿ ಹಚ್ಚಿದ್ದಾರೆ.  ಪೊಲೀಸರು ಸಿಸಿಟಿವಿ ವಿಡಿಯೋ ನೋಡಿ ತನಿಖೆ ಮಾಡಿ ದಯವಿಟ್ಟು ನಮ್ಮ ಮಕ್ಕಳನ್ನು ಬಿಟ್ಟು ಬಿಡಿ ಎಂದು ಪೋಷಕರು ಅಳಲು ತೊಡಿಕೊಂಡಿದ್ದಾರೆ.

click me!