Bengaluru: ಮೋಸ್ಟ್ ವಾಟೆಂಡ್ ರೌಡಿಯಿಂದ ರಾಬರಿ: 20 ನಿಮಿಷದಲ್ಲಿ ಪ್ರಕರಣ ಭೇಧಿಸಿದ ಪೊಲೀಸರು‌

By Govindaraj SFirst Published Dec 7, 2022, 12:07 PM IST
Highlights

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೋಸ್ಟ್ ವಾಟೆಂಡ್ ರೌಡಿಯಿಂದ ರಾಬರಿ ನಡೆದಿದ್ದು, ಆರೋಪಿಯನ್ನು ಕೇವಲ 20 ನಿಮಿಷದಲ್ಲಿ ಪೊಲೀಸರು‌ ಭೇಧಿಸಿದ್ದಾರೆ. ಬಂಧಿಸಲಾದ ರೌಡಿಯು ಸಿಸಿಬಿ ಅಧಿಕಾರಿಗಳಿಗೆ ಹಾಗೂ ಕೆಲವು ಪೊಲೀಸ್ ಠಾಣೆಗೆ ಬೇಕಾಗಿದ್ದು, ನಡುರಸ್ತೆಯಲ್ಲೇ ಕುಟುಂಬವನ್ನು ನಿಲ್ಲಿಸಿ ಗ್ಯಾಂಗ್ ರಾಬರಿ ಮಾಡಿದ್ದರು.

ಬೆಂಗಳೂರು (ಡಿ.07): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೋಸ್ಟ್ ವಾಟೆಂಡ್ ರೌಡಿಯಿಂದ ರಾಬರಿ ನಡೆದಿದ್ದು, ಆರೋಪಿಯನ್ನು ಕೇವಲ 20 ನಿಮಿಷದಲ್ಲಿ ಪೊಲೀಸರು‌ ಭೇಧಿಸಿದ್ದಾರೆ. ಬಂಧಿಸಲಾದ ರೌಡಿಯು ಸಿಸಿಬಿ ಅಧಿಕಾರಿಗಳಿಗೆ ಹಾಗೂ ಕೆಲವು ಪೊಲೀಸ್ ಠಾಣೆಗೆ ಬೇಕಾಗಿದ್ದು, ನಡುರಸ್ತೆಯಲ್ಲೇ ಕುಟುಂಬವನ್ನು ನಿಲ್ಲಿಸಿ ಗ್ಯಾಂಗ್ ರಾಬರಿ ಮಾಡಿದ್ದರು. ಹೌದು! ಕುಟುಂಬವೊಂದು ಕಾರಿನಲ್ಲಿ ಹೊರಗಡೆ ಹೋಗಿ ಬರುತ್ತಿದ್ದಾಗ ಅಟ್ಯಾಕ್ ಮಾಡಿದ್ದು, ಮನ್ಸೂರ್ ದಾನ್ ಹಾಗೂ ಆತನ ಗ್ಯಾಂಗ್‌ನಿಂದ ಕೃತ್ಯ ಎಸಗಲಾಗಿದೆ. 

ಡಿಸೆಂಬರ್ 5ನೇ ತಾರೀಕಿನಂದು‌ ಘಟನೆಯು ನಡೆದಿದ್ದು, ಅಹಮದ್ ಕುಟುಂಬದವರ ಎಂಬುವವರ ಮೇಲೆ ಮನ್ಸೂರ್ ದಾನ್, ಅಬ್ದುಲ್ ಹಾಗೂ ಮತ್ತೊಬ್ಬ ಹಲ್ಲೆ ನಡೆಸಿದ್ದಾರೆ. ಸ್ನೇಹಿತರ ಮನೆಯಿಂದ ವಾಪಾಸ್ ಬರೋವಾಗ ಬೈಕಿನಲ್ಲಿ ಬಂದು ಕಾರಿಗೆ ಗುದ್ದಿ ನಂತರ ಮನ್ಸೂರ್ ಗ್ಯಾಂಗ್ ಅಟ್ಯಾಕ್ ಮಾಡಿದ್ದಾರೆ. ವೃತ್ತಿಯಲ್ಲಿ ಅಶ್ವರ್ಕ್ ಅಹಮದ್ ಮೆಡಿಕಲ್ ನಡೆಸುತ್ತಿದ್ದು, ಕಾರಿನಿಂದ ಈತನನ್ನು ಹೊರಗಡೆ ಎಳೆದು ಹಾಕಿ ಮನ್ಸೂರ್ ಗ್ಯಾಂಗ್ ಹಲ್ಲೆ ಮಾಡಿದ್ದಾರೆ. ನಾಗವಾರ ಬಳಿಯ ಕನಕನಗರ ರಸ್ತೆಯ 13ನೇ ಕ್ರಾಸಿನಲ್ಲಿ ಘಟನೆ ನಡೆದಿದ್ದು, ಮೊಬೈಲ್, ಹಣ ಕಿತ್ತುಕೊಂಡು ಕಾರಿನ‌ ಕೀ ತೆಗೆದುಕೊಂಡು ಮನ್ಸೂರ್ ಗ್ಯಾಂಗ್ ಪರಾರಿಯಾಗಿದ್ದರು. 

Bagalkote: ಬರ್ತಡೇ ಪಾರ್ಟಿ ಮುಗಿಸಿ ಮನೆಗೆ ತೆರಳುತ್ತಿದ್ದ ಗೆಳೆಯರಿಬ್ಬರ ದುರ್ಮರಣ

ಇನ್ನು ಮನ್ಸೂರ್ ದಾನ್ ಮಗನ ಮೇಲೆ ಹೆಚ್ಚು ಪ್ರೀತಿ ಇರುವ ಕಾರಣ ಪ್ರತೀ ಪ್ರಕರಣಕ್ಕೆ ಹೋಗೋ ಮುನ್ನ ಮಗನನ್ನು ಕರೆದುಕೊಂಡು ಹೋಗ್ತಿದ್ದ ಮಗನ ಮುಂದೆನೇ ಹಲ್ಲೆ ಮಾಡ್ತಿದ್ದ. ಸದ್ಯ ಹೊರಮಾವು ಬ್ರಿಡ್ಜ್ ಬಳಿ ಬಾರ್ ಬಳಿ ನಿಂತು ಮದ್ಯಸೇವನೆ ಮಾಡುತ್ತಿದ್ದ ಆರೋಪಿಯ ಗ್ಯಾಂಗನ್ನು ಘಟನೆ ನಡೆದ  20 ನಿಮಿಷದಲ್ಲೇ ಇನ್ಸ್ ಪೆಕ್ಟರ್ ಪ್ರಕಾಶ್ ನೇತೃತ್ವ ತಂಡ ಕಾರ್ಯಚರಣೆ ಮಾಡಿ ಬಂಧಿಸಿದ್ದಾರೆ. ಇನ್ನು ಸಿಸಿಬಿ ಸೇರಿದಂತೆ  ಹೆಚ್ಚು ಠಾಣೆಗಳಲ್ಲಿ ಮನ್ಸೂರ್ ವಿರುದ್ಧ ಕೇಸ್ ದಾಖಲಾಗಿದೆ.

ಅಕ್ರಮವಾಗಿ ರಸಗೊಬ್ಬರ ಸಾಗಾಟ, ಆರೋಪಿಗಳ ಬಂಧನ: ಪಿರಿಯಾಪಟ್ಟಣ ತಾಲೂಕಿನ ತೆಲಗಿನಕುಪ್ಪೆ ಗ್ರಾಮದಲ್ಲಿ ಸಬ್ಸಿಡಿ ದರದಲ್ಲಿ ರೈತರಿಗೆ ಮಾರಾಟ ಮಾಡಬೇಕಾದ ಯೂರಿಯಾ ರಸಗೊಬ್ಬರವನ್ನು ಚೀಲ ಬದಲಿಸಿ ಅಕ್ರಮವಾಗಿ ಕೇರಳಕ್ಕೆ ಸಾಗಿಸಲು ಯತ್ನಿಸುತ್ತಿದ್ದವರನ್ನು ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ರಸಗೊಬ್ಬರ ಮತ್ತು ಲಾರಿಯನ್ನು ವಶಪಡಿಸಿಕೊಂಡಿದ್ದಾರೆ. ತಾಲೂಕಿನ ಕೋಮಲಾಪುರ ಗ್ರಾಮದ ನಿಖಿಲ್, ಕೇರಳ ಮೂಲದ ಲಾರಿ ಚಾಲಕ ಮಹಮದ್‌ ಬಶೀರ್‌, ರಜೀಬ್, ಜಸ್ಬಿರ್‌ ಹಾಗೂ ಕೆ. ಹರಳಹಳ್ಳಿ ಗ್ರಾಮದ ಸಚಿನ್‌ ಬಂಧಿತ ಆರೋಪಿಗಳು.

ಹಳ್ಳಿ ಹಕ್ಕಿ ಮತ್ತೆ ಕಾಂಗ್ರೆಸ್‌ನತ್ತ?: ಖರ್ಗೆ ಬಳಿಕ ಸಿದ್ದು ಭೇಟಿ

ತಾಲೂಕಿನ ತೆಲಗಿನಕುಪ್ಪೆ ಗ್ರಾಮದಲ್ಲಿ ಲಾರಿವೊಂದರಲ್ಲಿ ಯೂರಿಯಾ ರಸಗೊಬ್ಬರವನ್ನು ಅಕ್ರಮವಾಗಿ ತುಂಬಿಕೊಂಡು ಹೋಗಲಾಗುತ್ತಿದೆ ಎಂಬ ಖಚಿತ ಮಾಹಿತಿ ಅಧರಿಸಿ ಕೃಷಿ ಇಲಾಖೆಯ ಜಾಗೃತದಳದ ಉಪನಿರ್ದೇಶಕ ನಾಗರಾಜ್, ಸಹಾಯಕ ಕೃಷಿ ನಿರ್ದೇಶಕ ವೈ. ಪ್ರಸಾದ್‌, ಕೃಷಿ ಅಧಿಕಾರಿಗಳಾದ ಮಹೇಶ್‌, ಹೇಮೇಶ್‌, ಎಸ್‌ಐ ಪುಟ್ಟರಾಜು, ಎಎಸ್‌ಐ ನಾಗರಾಜ ನಾಯಕ, ಸಿಬ್ಬಂದಿ ರಾಜರತ್ನಂ ತಂಡ ದಾಳಿ ನಡೆಸಿದಾಗ ಲಾರಿಯಲ್ಲಿ ತುಂಬಿದ್ದ 250 ಮೂಟೆ ಯೂರಿಯಾ ರಸಗೊಬ್ಬರ ಪತ್ತೆಯಾಗಿದೆ, ಲಾರಿ ಚಾಲಕ ಮಹಮ್ಮದ್‌ ಬಶೀರ್‌ನನ್ನು ವಿಚಾರಣೆ ನಡೆಸಿದಾಗ ಆತನ ಬಳಿ ಯಾವುದೇ ರಶೀದಿ ಪತ್ತೆಯಾಗಿಲ್ಲ, ಕೋಮಲಾಪುರ ಗ್ರಾಮದ ನಿಖಿಲ್ ಮನೆಯಲ್ಲಿ ಮತ್ತು ಕೆ. ಹರಳಹಳ್ಳಿ ಗ್ರಾಮದ ಸಚಿನ್‌ ಮನೆಯಲ್ಲಿ ಅಕ್ರಮವಾಗಿ ರಸಗೊಬ್ಬರ ಸಂಗ್ರಹಿಸಿ ಚೀಲ ಬದಲಿಸಿ ಕೇರಳಕ್ಕೆ ಪ್ಲೈವುಡ್‌ ಕಾರ್ಖಾನೆಗಳಿಗೆ ಸಾಗಾಟ ಮಾಡಲು ಯತ್ನಿಸುತ್ತಿದ್ದರು ಎಂದು ಮಾಹಿತಿ ತಿಳಿದು ಬಂದಿದೆ.

click me!